ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ರಂಗಾಗಿದೆ ಗುಲ್ಮೊಹರ್..

ಸರೋಜ ಪ್ರಶಾಂತಸ್ವಾಮಿ

ಮತ್ತೆ ರಂಗಾಗಿದೆ ಗುಲ್ಮೊಹರ್ ನಿನ್ನ ನೆನಪಾಗಲು
ಕತ್ತೆತ್ತಿ ಸುತ್ತಲೂ ಹುಡುಕಾಡಿದೆ ನಿನ್ನ ನೆನಪಾಗಲು

ಬತ್ತಿದ ಹೊಳೆಯ ಒರತೆಯಲೆಲ್ಲೋ ಜಲ ಒಸರುತಿದೆ
ಎದೆಹುತ್ತದಲಿ ಭಾವ ಮಿಸುಕಾಡಿದೆ ನಿನ್ನ ನೆನಪಾಗಲು

ಬೋಳಾದ ಹೃದಿವೃಕ್ಷ ಮರಳಿ ಮುಗುಳೊಡೆದು ಚಿಗುರುತಿದೆ
ಹಾಯಾಗಿ ಹಸುರಾಗಿ ಪಸರಿಸುತಿದೆ ನಿನ್ನ ನೆನಪಾಗಲು

ಬಯಲು ಬಾಲಂಗೋಚಿಯಾಗಿ ಬಾನಿಗೇರುತಿದೆ
ಇರುಳ ಸಹವಾಸವ ಕನಸಿಸುತಿದೆ ನಿನ್ನ ನೆನಪಾಗಲು

ಹೊದ್ದು ಮಲಗಿದ ಅನುಭೂತಿಯೊಂದು ಕದ್ದು ಮಿಸುಕಾಡಿದೆ
ಸದ್ದಿಲ್ಲದೆ ಎದ್ದು ಕುಳಿತಿದೆ ನಿನ್ನ ನೆನಪಾಗಲು

ಒಲವ ಶೂನ್ಯದಲೂ “ಲೋಚನಸುತೆ” ಒಲಿದುಬಂದಂತಿದೆ
ನಸುಕಿನಲಿ ಬೆಳಕು ಪಸರಿಸಿದೆ ನಿನ್ನ ನೆನಪಾಗಲು

‍ಲೇಖಕರು Avadhi

22 March, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading