ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮಲ್ಲಿಗೆ ಕಾಲ..

ಸಂಜ್ಯೋತಿ ವಿ ಕೆ 

ಮಲ್ಲಿಗೆಯ ಕಾಲ
ಮತ್ತೊಮ್ಮೆ ಬಂದಿದೆ,
ಮತ್ತೆ ಹೋಗುವುದು..

ಮಲ್ಲಿಗೆಯ ಘಮ
ಹೆರಳಲಿ ಬೆರೆಯದೆ
ಮಾಲೆಯ ಜೀಕು
ಕೊರಳಿಗೆ ತಾಕದೆ
ಗಂಧದ ಜೊಂಪು
ಮನಸಿಗೆ ಮುತ್ತದೆ
ಕಳೆದ ಅಷ್ಟು
ವಸಂತಗಳ
ಲೆಕ್ಕ ತಪ್ಪಿಸಲು
ಬೆರಳುಗಳು ಹೆಣಗುತ್ತಿವೆ

ಬರುವನೇ..
ನಲ್ಲ ತರುವನೇ..?
ತರುವ ಹೆರಳ
ಸಿಂಗರಕೆ
ಶೃಂಗಾರದ ಅಂಗಳಕೆ
ಒಂದು ಹಿಡಿ
ಮಲ್ಲಿಗೆಯ
ಇಂದಾದರೂ,
ಮುಂದೆಂದಾದರೂ..

‍ಲೇಖಕರು avadhi

24 February, 2020

2 Comments

  1. T S SHRAVANA KUMARI

    ಚೆನ್ನಾಗಿದೆ

  2. Poorvi

    CHENDADA KAVANA JYOTHIYAVRE

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading