ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮತ್ತೆ ಸಾಬೀತು ಪಡಿಸಬೇಕೇನು ?

ರೇಶ್ಮಾಗುಳೇದಗುಡ್ಡಾಕರ್ 

ಮತ್ತೆ ಮತ್ತೆ ಸಾಬೀತು ಪಡಿಸಬೇಕೇನು
ನಾವು ಹಿಂದೂ, ಮುಸ್ಲಿಂ, ಕ್ರೈಸ್ತರಾದರೂ
ನಾವು ಭಾರತೀಯರೆಂಬ ಸಮತೆಯನು….??

ಎಷ್ಟು ಒರೆಹಚ್ಚಿ ನೋಡುವಿರಿ
ನಮ್ಮೊಳಗಿನ ಸೌಹಾರ್ದದತೆಯೆಂಬ
ಅಪ್ಪಟ ಅಪರಂಜಿಯನು….?

ಅಬ್ಬರದಲಿ ಸಮರ ಸಾರುವಿರಿ
ಕೋಮುದಳ್ಳುರಿಯಲಿ ಧಗಧಗಿಸುವಿರಿ
ಸಾಮಾಜಿಕ ಜಾಲವನೆ ನಿಮ್ಮ ತಾಣವಾಗಿಸುವಿರಿ.

ಸದ್ದಿಲ್ಲದೆ ಬರುವ ಬದುಕಿನ
ರೋಚಕ ತಿರುವುಗಳಿಗೆ ಎದೆಕೊಟ್ಟು
ಕನಸುಗಳ ಬಲಿಕೊಟ್ಟು
ಸಮಯದ ಜೊತೆ ಓಡುತ್ತಾ
ಆಯಸ್ಸು ಕಳೆಯುವ ಯುವಜನತೆಗೆ
ಸಂಘರ್ಷದ ಕೊಡುಗೆ ನೀಡುವಿರಿ…!!!

ಸಮಸ್ಯೆಯ ಸರಮಾಲೆಗಳಿಗೆ ಕೊನೆಯಿಲ್ಲ
ಮೊದಲೆಲ್ಲೋ…
ಭಾತರದ ಕೋಮು ವ್ಯಘ್ರತೆಗೆ ಸೂಕ್ತ
ಉತ್ತರವಿಲ್ಲ ….

ಸಾಮಾಜಿಕ ಎಚ್ಚರ, ಕಾಳಜಿ,
ಅರಿವನ್ನು ಮರೆತು
ಬರಹಗಳು ನೀಡುವವು ನಿರುತ್ತರವಾಗಿರುವ
ಯುವ “ಒಡಲಾಳಕ್ಕೆ”
ಪ್ರತೀಕಾರದ
“ಆಳ-ಅಗಲ “ಎಂಬ ಕಿಚ್ಚನ್ನು ಸುರಿಯುವಿರಿ
ಬಹುತ್ವ ಭಾತರದ ಹೆಸರಲ್ಲಿ …..??

ವಾಟ್ಸಪ್, ಫೇಸ್ಬುಕ್ಕಿರಬಹುದು
ದೊರೆಗಳೆ …. ನಾವು,
ಎದೆಗೆ ಬಿದ್ದ ಅಕ್ಷರವನ್ನು
ಸಾಂಸ್ಕೃತಿಕ ಭಾರತದ
ದೀವಿಗೆಯಾಗಿಸುವೆವು ನಾವು….
ಬೌದ್ಧಿಕ ಸಮರದೊಳ್
ಐಕ್ಯತೆಯ ದಹಿಸುವುದಿಲ್ಲ ಎಂದೆಂದೂ…

ಮರೆಯದಿರಿ, ಮರೆಯದಿರಿ,
ಮತ್ತೆ ಮತ್ತೆ ಸಾಬೀತು ಪಡಿಸುವೆವು
ಭಾರತೀಯರು ನಾವೆಂದು,
ತಲೆ ತಲೆಮಾರು ಕಳೆದರು
ಅಳಿಯಗೊಡೆವು ನಮ್ಮ
ಸರ್ವಜಾನಾಂಗದ ಶಾಂತಿಯ ತೋಟವ….

‍ಲೇಖಕರು Admin

31 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading