ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಒಹ್! ಡಿಜಿಟಲ್..

ಯೂತ್ ಫೋಟೊಗ್ರಫಿಕ್ ಸೊಸೈಟಿ ಯಾ ಛಾಯಾಚಿತ್ರ ಸ್ಪರ್ಧೆ ಎಂತಹವರನ್ನೂ ತುದಿಗಾಲಲ್ಲಿ ನಿಲ್ಲಿಸುತ್ತದೆ.  31 ನೆಯ ಬಾರಿಗೆ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ    285 ಛಾಯಾಗ್ರಾಹಕರು, 2500 ಕ್ಕೂ ಹೆಚ್ಚು ಛಾಯಾಚಿತ್ರಗಳೊಂದಿಗೆ ಸ್ಪರ್ಧಿಸಿದರು.
ಅವುಗಳಲ್ಲಿ ಈಗ ಬಹುಮಾನ ವಿಜೇತ ಚಿತ್ರಗಳ ಸೇರಿದಂತೆ ಒಟ್ಟು 472 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಛಾಯಾಗ್ರಾಹಕರಾದ ಬೆಂಗಳೂರಿನ ಟಿ.ಎನ್.ಪೆರುಮಾಳ್, ಎಚ್.ವಿ.ಪ್ರವೀಣ್ ಕುಮಾರ್, ಜಿ.ಹರಿನಾರಾಯಣ, ಸಿ.ಅರ್.ಸತ್ಯನಾರಾಯಣ, ಹೈದರಬಾದಿನ ರಾಜನ್‍ಬಾಬು ತೀರ್ಪುಗಾರರಾಗಿದ್ದರು.
ಛಾಯಾಚಿತ್ರಗಳ ಪ್ರದರ್ಶನ ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ “ವೆಂಕಟಪ್ಪ ಆರ್ಟ್ ಗ್ಯಾಲರಿ”ಯಲ್ಲಿ ಫೆಬ್ರವರಿ 4 ರಿಂದ 7 ರವರೆಗೆ ನಡೆಯುತ್ತದೆ.
ಈ ಸ್ಪರ್ಧೆಯ ವಿವಿಧ ವಿಭಾಗಗಳ ಪ್ರಶಸ್ತಿ ವಿಜೇತ ಫೋಟೋಗಳನ್ನು ಕೆ ಶಿವು ‘ ಅವಧಿ’ ಗಾಗಿ ಒದಗಿಸಿದ್ದಾರೆ. ಅವರಿಗೆ ಥ್ಯಾಂಕ್ಸ್ ಹೇಳುತ್ತಾ
ಈ ದಿನ ಡಿಜಿಟಲ್ ಸೃಜನಶೀಲ ಚಿತ್ರಗಳು ವಿಭಾಗದ ಬಹುಮಾನ ವಿಜೇತ ಫೋಟೋಗಳನ್ನು ನೀಡುತ್ತಿದ್ದೇವೆ. ಉಳಿದ ವಿಭಾಗಗಳು ಸರಣಿಯಲ್ಲಿ ಪ್ರಕಟವಾಗಲಿದೆ.

ಮೊದಲ ಬಹುಮಾನ  : ಅನೂಪ್ ಪಾಲ್.ಕೊಲ್ಕತ್ತ. ಚಿತ್ರ: ಬಾಡಿ ಲಾಂಗ್ವೇಜ್

ದ್ವಿತೀಯ ಬಹುಮಾನ : ಅನ್ಷುಮನ್ ರಾಯ್: ಕೊಲ್ಕತ್ತ. ಚಿತ್ರ: ಪಾಸ್ಚರಿಂಗ್

ಮೂರನೇ ಬಹುಮಾನ  : ರಾಮ್ ಯಾದವ್. ಮುಂಬೈ. ಚಿತ್ರ : ಕ್ಯಾಂಪಿಂಗ್.

‍ಲೇಖಕರು avadhi

25 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. Nagaraj K

    ತುಂಬಾ ಸುಂದರವಾದ ಫೋಟೋಗಳಿಗಾಗಿ ತುಂಬಾ ಥ್ಯಾಂಕ್ಸ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading