ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮತ್ತೆಂದೂ ಒಂದೇ ಒಂದು ಅಕ್ಷರವನ್ನೂ…' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ


ಮತ್ತೆಂದೂ ಒಂದೇ ಒಂದು
ಅಕ್ಷರವನ್ನೂ ನಿನ್ನ ಕುರಿತಾಗಿ
ಬರೆಯ ಬಾರದೆಂದು ನಿರ್ಧರಿಸಿ ಬಿಟ್ಟಿದ್ದೇನೆ..
ನನ್ನ ನೆನಪಿನ ಹೊರತಾಗಿಯೂ
ನೀನು ನಿಶ್ಚಿಂತೆಯಿಂದ ಇರಬಲ್ಲೆ
ಎಂಬ ಅರಿವಾದ ಮೇಲೆ
ನನ್ನೆಲ್ಲ ಅಕ್ಷರಗಳೂ ಅರ್ಥ ಕಳೆದುಕೊಳ್ಳುತ್ತಿದೆ
ನೀನಲ್ಲಿ ನಿನ್ನ ಸಂಭ್ರಮದಲ್ಲಿ
ಎಲ್ಲವನ್ನೂ ಮರೆತು ಹಾಯಾಗಿರುವಾಗ
ನಾನಿಲ್ಲಿ ನಿನ್ನ ನೆನಪಿನ ನೋವಲ್ಲಿ
ಅಕ್ಷರದೊಂದಿಗೆ ಹಾದರ
ಮಾಡಿಕೊಂಡಿರುವುದಾದರೂ ಎಷ್ಟು ಸರಿ?
ಹಾಯಾಗಿರು..
ಮತ್ತೆ ಬರೆಯಲಾರೆ
ನಿನ್ನ ಮುರಿದು ಬಿದ್ದ ಪ್ರೀತಿಯ ಕುರಿತು
ಒಂದಾಗದ ಮನಸಿನ ಕುರಿತು
ಕೊನೆಗೆ …….
ಬರೀ ಮೋಸದಿಂದ ನೀನು
ಬಳಸಿಕೊಂಡ ದೇಹದ ಕುರಿತು
 

‍ಲೇಖಕರು G

4 March, 2015

10 Comments

  1. ವೀರಣ್ಣ ಮಂಠಾಳಕರ್

    Kaviteya Bhavane… geleyana kuritada nenapugalu alisi hakuva pariyannu hrudyakkada gayavannu maretu biduva novugalannu prastuta kaviteyalli channagi mudi bandive…

  2. Anonymous

    ಅಧ್ಭುತ ಭಾವ ಲಹರಿ….ತುಂಬಾ ಚೆನ್ನಾಗಿದೆ…

  3. ತಿರುಪತಿ ಭಂಗಿ

    ಮುರುಕು ಪ್ರೇಮದ ಅನುಭಾವ ಅದ್ಬುತವಾಗಿದೆ

  4. ಲಕ್ಷ್ಮೀಕಾಂತ ಇಟ್ನಾಳ

    ಸಾತ್ವಿಕ ಸಿಟ್ಟಿನ ನಿಟ್ಟುಸಿರು, ಕೇಳಿಸಿತು, ಸ್ಪರ್ಶಿಸಿತು, ಮನಗಾಣಿತು. ಪ್ರೀತಿಯ ಸೆಳೆತಕ್ಕೆ ಸಿಕ್ಕ ಜೀವವೊಂದರ ನೋವನ್ನು ತುಂಬ ಚನ್ನಾಗಿ ಒಡಮೂಡಿಸಿದ್ದೀರಿ, ಶ್ರೀದೇವಿ ಜಿ.

  5. mmshaik

    uttama kavite..

  6. ಲೋಕೇಶ್ ಕೆ ಆರ್

    ‍ಅನುಭಾವವೆ ಸರಿ

  7. Rohini Satya

    ಪ್ರೇಮವೊಂದು ಭ್ರಮಾಧೀನ ಸ್ಥಿತಿ. ಅದರ ಅಧೀನವಾದಾಗ ಅಧೀರರಾಗುವುದು ಸಹಜ. ಪೊರೆ ಕಳಚಿದಾಗ ಸ್ಥೈರ್ಯವು ಸಂಗಾತಿಯಾಗುತ್ತೆ ಎನ್ನುವುದನ್ನು ಕಟ್ಟಿಕೊಟ್ಟ ಕವನ ಚೆನ್ನಾಗಿದೆ !

  8. Anonymous

    ಮುರಿದ ಹೃದಯದ ಮಿಡಿತಗಳನ್ನು ಅಕ್ಷರವಾಗಿಸಿದ ಪರಿ ಸುಂದರವಾಗಿದೆ.
    -ಗಣಪತಿ ಬಾಳೆಗದ್ದೆ

  9. Chandrashekhar hadpad

    Very nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading