ಮಳೆ ಮತ್ತು ಅಗ್ಗಿಷ್ಟಿಕೆ

ಕು.ಸ.ಮಧುಸೂದನ್ ನಾಯರ್
ಮಳೆಗಾಲದ ಒಂದು ಸಂಜೆ
ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳು
ಸ್ಪೋಟಗೊಂದು ಸುರಿದ ಜಡಿ ಮಳೆಗೆ
ಸಿಕ್ಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲು
ನನ್ನ ಪುಟ್ಟ ಹಿತ್ತಿಲಿತ್ತು.
ಗಡಗಡ ನಡುಗಿಸುವ ಚಳಿಗೆ
ಅಗ್ಗಿಷ್ಟಿಕೆಯಾಗಿ ನಾನಿದ್ದೆ.
ಮಳೆ ಸುರಿದು ಸರಿದು ಹೋಯಿತು
ಹಿಂಬಾಲಿಸಿಕೊಂಡು ಬಂದ ಬಿಸಿಲು
ಬಂದ ಮಳೆಯ ಮರೆಸಿತು.
ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲ
ಮಳೆಯಾಗಲಿಲ್ಲ,
ಬಿಸಿಲಝಳಕ್ಕೆ ಬರಬಿದ್ದ ಊರಿಗವಳು ಬರಲೇ ಇಲ್ಲ.
ಮತ್ತೀಗ ಅಲ್ಲೆಲ್ಲೊ ಮಳೆಯಾಗುತ್ತಿರಬಹುದು
ಅವಳಲ್ಲಿ ನೆನೆಯುತ್ತಲಿದ್ದರೂ ಇರಬಹುದು,
ಅ ಊರಲ್ಲೂ ಹಿತ್ತಲುಗಳಿವೆ
ಜೊತೆಗೆ ಅಗ್ಗಿಷ್ಟಿಕೆಗಳೂ!





ಧ್ವನಿಪೂರ್ಣ ಕವಿತೆ
ಬಹಳ ಚೆನ್ನಾಗಿದೆ
ವಾವ್ಹ್……