ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗಳ ಚಿತ್ತಾರದಿಂದಾಗಿ..

ಸಿದ್ದು ದೇವರಮನಿ

ಸಂತೋಷ : ನನ್ನಲ್ಲಿ ಬಹಳ ದಿನ ನೆಲೆಸುವುದಿಲ್ಲ.
ಬಹುಶಃ ಹೋದ ಜನ್ಮದಲ್ಲಿ ಅಳಿಸುವ ಸೀರಿಯಲ್ ರೈಟರ್ ಆಗಿದ್ದೆ ಅಂತ ಕಾಣುತ್ತೆ.

ಸುಮಾರು ತಿಂಗಳಿನಿಂದ ನಿಮ್ಮ ಟವಲ್ ಹರಿದಿದೆ ಹೊಸದು ಬಳಸಿ ಅಂತ ಮನೇಲಿ ಹೇಳುತ್ತಿದ್ದರೂ..ಗೊತ್ತಲ್ಲ ನನ್ನದು ಉದಾಸೀನ ದಲ್ಲಿ ಉತ್ತುಂಗದ ಪದವಿ!

ಏನ್ರಿ ಬರ್ಮಡಾ ಹಾಕಿ ಕೊಂಡೆ ಬ್ಯಾಂಕ್ ಗೆ ಬಂದ್ ಬಿಟ್ಟೀರಲ್ಲಾ.. ನಿನ್ನ ಟೀ ಶಟ್೯ ತೂತಾಗಿದೆ ನೋಡಿಕಾ..ಅಂದ ನನ್ನ ಹಿತೈಷಿಗಳಿಗೆ ” ಮನೆಯಿಂದ ಇಸ್ತ್ರಿ ಬಟ್ಟಿ ಹಾಕಿಕೊಂಡೇ ಹೊರ ಬೀಳಕೇನು ನಾನೇನು ಕಾಮಶೆಟ್ಟಿ ಕೊಟ್ರೇಶ್ ಏನಪಾ ” ಅಂತಲೋ..

“ತೂತು ಬಟ್ಟೆ ಗೆ ಬೀಳಲಿ ..ಬುದ್ದಿಗೆ ಬೀಳಬಾರದು ನೋಡಿ” ಅಂತಲೋ ಎದುರಿಗಿದ್ದವನ್ನೆ ಧರಿಸುವ ನನ್ನದು ಮಾಡುವ ಕಾಯಕಕಷ್ಟೇ ಗಮನ.

ಹರಿದ ಟವಲ್ ನ್ನು ನಾಕು, ಐದ್ ಸಾರಿ ಹೊಲೆದು ಹೊಲಿಗೆಯ ಕೌಶಲ್ಯವನ್ನು ತೋರಿ ರೋಸಿಹೋದ “ಮುಕ್ತ” ಳ ಪೇಚಾಟವನ್ನು ನೋಡಿದ್ದೆ.

ನಿನ್ನೆ ಅಷ್ಟೇ ಗಮನಿಸಿದೆ. ಮಗಳು “ಪ್ರಾಪ್ತಿ” ನನ್ನ ಟವಲ್ ಮೇಲೆ ಗೆರೆ ಎಳೆದು ಮನಸ ಮುಂಬಾಗಿಲಿಗೆ ಸಂಭ್ರಮದ ತೋರಣ ಇಳಿ ಬಿಟ್ಟು ಸಹಜ ಸಾಹುಕಾರಿಕೆಗೆ ಮಾತಾಡದೆ ಹೊಸ ಬಾಷ್ಯ ಬರೆದಿದ್ದಾಳೆ.. ಕಾಪಿಟ್ಟುಕೊಳ್ಳುವ ಜವಾಬ್ದಾರಿಯಿಂದ ಈ ಟವಲ್ ಎತ್ತಿಟ್ಟು ನಾಳೆಯಿಂದ ಹೊಸ ಟವಲ್ ಬಳಸುತ್ತೇನೆಂದು ಈ ಮೂಲಕ ಬಾಷೆ ನೀಡುತ್ತಿದ್ದೇನೆ.

ಮತ್ತು ಮುಕ್ತಾಳಿಂದಾಗದ ಕೆಲಸ ಮಾತಾಡದೇ ಬರೀ ಗೀಟ್ ಹಾಕಿ ಸಂತಸ ತಂದೂ ಹಾಗೂ ಗೆರೆ ಎಳೆದು ಟವಲ್ ನ ಸಮಸ್ಯೆ ಬಗೆಹರಿಸಿದ ಮಗಳು ಅಪರೂಪದ ಜೀವ ಅನಿಸಿದ್ದಾಳೆ.

‍ಲೇಖಕರು avadhi

26 August, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading