ಮಕ್ಕಳಿಗಾಗಿ ಮಾತಾಡೋಣ..

ಅಂಜಲಿ ರಾಮಣ್ಣ

ಅಂಜಲಿ ರಾಮಣ್ಣ

ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ

ಮಕ್ಕಳ ಹಕ್ಕುಗಳ ಪರಿಕಲ್ಪನೆಯ ಮೂಲ ಉದ್ದೇಶವೇ, ಅನಿವಾರ್ಯ ಕಾರಣಗಳಿಗೆ ಹೊರತಾಗಿ, ಪ್ರತೀ ಮಗುವು ತನ್ನ ಕುಟುಂಬದೊಡನೆಯೇ ಬೆಳೆಯಬೇಕು ಎನ್ನುವುದು.

ಅದಕ್ಕಾಗಿಯೇ ಮಕ್ಕಳ ಹಕ್ಕುಗಳ ಒಡಂಬಡಿಕೆಯು ಹಲವಾರು ಪರಿಚ್ಛೇಧಗಳಲ್ಲಿ ಮಕ್ಕಳು ತಂದೆ-ತಾಯಿ, ಪೋಷರೊಡನೆ ಇರುವಂತೆ ಮಾಡಲು ಪೂರಕವಾಗಿ ಸರ್ಕಾರಗಳು ಕಾಯಿದೆಗಳ ಮೂಲಕ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಮತ್ತು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದೆ.

ಮೂವತ್ತು ವರ್ಷಗಳ ಹಿಂದೆ ವಿಶ್ವಸಂಸ್ಥೆಯೊಡನೆ ಮಕ್ಕಳ ಹಕ್ಕುಗಳಿಗೆ ಸಹಿ ಹಾಕಿದ ನಂತರ ನಮ್ಮ ದೇಶದಲ್ಲಿ ಮಕ್ಕಳ ರಕ್ಷಣೆ, ಪೋಷಣೆ ಮತ್ತು ಬೆಳವಣಿಗೆಗಾಗಿಯೇ ಒಂದಷ್ಟು ಕಾನೂನುಗಳನ್ನು ಜಾರಿಗೆ ಗೊಳಿಸಲಾಗಿದೆ. ಅದರಲ್ಲಿ ಒಂದು ಮಕ್ಕಳ ನ್ಯಾಯ ಕಾಯಿದೆ (ಪೋಷಣೆ ಮತ್ತು ರಕ್ಷಣೆ) ಕಾಯಿದೆ, ೨೦೧೫

ಬಡತನ ಎನ್ನುವ ಒಂದೇ ಕಾರಣಕ್ಕಾಗಿ ಮಕ್ಕಳನ್ನು ಕುಟುಂಬದಿಂದ ದೂರ ಇರಿಸಿ ಹಾಸ್ಟೆಲ್ ಅಂತಹ ವ್ಯವಸ್ಥೆಯಲ್ಲಿ ಬೆಳೆಸುವ ಪರಿಪಾಠ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳ ಆರೋಗ್ಯ, ವಿದ್ಯಾಭ್ಯಾಸಕ್ಕೆ ತಗುಲುವ ವೆಚ್ಚವನ್ನು ಭರಿಸಲಾರದೆ ಕುಟುಂಬಗಳು ಮಕ್ಕಳನ್ನು ಹೊರಗೆ ಹಾಕುತ್ತಿದ್ದಾರೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾತ್ರವಲ್ಲ, ಮನುಷ್ಯನೊಬ್ಬನ ಸಾಮಾಜಿಕ ಅಸ್ತಿತ್ವವನ್ನೇ ನಾಶಗೊಳಿಸಿದಂತೆ. ಅದಕ್ಕಾಗಿಯೇ ಮೇಲೆ ಹೇಳಿದ ಕಾನೂನಿನ ಅಡಿಯಲ್ಲಿ ’ಪ್ರಾಯೋಜಕತ್ವ’ ಎನ್ನುವ ಯೋಜನೆಯೊಂದನ್ನು ರೂಪಿಸಲಾಗಿದೆ.

ಪತಿಯಿಂದ ದೂರಾದ ಅಥವಾ ಆತ ಮೃತನಾಗಿರುವ ಒಂಟಿ ತಾಯಿ, ಮಾರಣಾಂತಿಕ ಖಾಯಿಲೆಗೆ ತುತ್ತಾಗಿರುವ ತಾಯ್ತಂದೆಯರು, ದುಡಿಯಲು ಸಾಧ್ಯವಿರದಂತಹ ಶಾಶ್ವತ ಅಂಗವೈಕಲ್ಯ ಹೊಂದಿರುವ ಪೋಷಕರು, tandevtayaiyarannu ಕಳೆದುಕೊಂಡು ಕುಟುಂಬದ ಇತರೆ ಸದಸ್ಯರು ಗಳೊಡನೆ ಬೆಳೆಯುತ್ತಿರುವ ಮಗು, ವಾರ್ಷಿಕ ಮೂವತ್ತು ಸಾವಿರಗಳಿಗೆ ಕಡಿಮೆ ಆದಾಯ ಇರುವ ಹೆತ್ತವರು ತಮ್ಮ ಮಕ್ಕಳನ್ನು ಸಾಕುವ ಸಲುವಾಗಿ ಈ ಪ್ರಾಯೋಜಕತ್ವದ ಪ್ರಯೋಜನ ಪಡೆಯಬಹುದು.

ಇಂತಹ ಕುಟುಂಬದ ಮಕ್ಕಳಿಗೆ ತಮ್ಮ ಮನೆಯಲ್ಲಿಯೇ ಇದ್ದುಕೊಂಡು ವಿಧ್ಯಾಭ್ಯಾಸ ಪಡೆಯುವುದಕ್ಕಾಗಿ, ವೈದ್ಯಕೀಯ ವೆಚ್ಚಕ್ಕಾಗಿ ಅಥವಾ ಇನ್ನಿತರ ತತ್ಸಮಾನವಾದ ಖರ್ಚಿಗಾಗಿ ಸರ್ಕಾರವು ಮೂರುವರ್ಷಗಳ ಕಾಲ ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು ನೀಡುತ್ತದೆ. ಅವಶ್ಯಕತೆ ಇರುವ ಕುಟುಂಬದವರು ಅವರ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಬೇಕಿರುತ್ತದೆ

ಪ್ರಾಯೋಜಕತ್ವದ ಮೊತ್ತ ಮೇಲ್ನೋಟಕ್ಕೆ ಕಡಿಮೆ ಎನಿಸಿದರೂ ಬೇರೆ ಬೇರೆ ಕಾರ್ಯಕ್ರಮಗಳ ಅಡಿಯಲ್ಲಿ ಮಕ್ಕಳ ನೆರವಿಗೆ ಇದೆ ಸರ್ಕಾರ. ಭಾಗ್ಯಲಕ್ಷ್ಮಿ ಯೋಜನೆ, ಕಿಶೋರಿ ಯೋಜನೆ, ಬಾಣಂತಿ ಪೌಷ್ಟಿಕತೆ, ಮಕ್ಕಳಿಗೆ ಶಾಲೆಗಳಲ್ಲಿ ಲಸಿಕೆಗಳನ್ನು ನೀಡುವುದು, ವಿಟಮಿನ್ ಗುಳಿಗೆಗಳನ್ನು ಕೊಡುವುದು, ಅಂಗವಿಕಲ ಮಕ್ಕಳಿಗೆ ತಕ್ಕುದಾದ ಸಲಕರಣೆಗಳನ್ನು ನೀಡುವುದು ಹೀಗೆ ಹತ್ತು ಹಲವು ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ.

ವಿಪರ್ಯಾಸ ಎಂದರೆ ಈ ಅನುಕೂಲಗಳು ಅರ್ಹ ಮಕ್ಕಳನ್ನು ತಲುಪುತ್ತಿಲ್ಲ, ಸೌಲಭ್ಯ ವಂಚಿತ ಮಕ್ಕಳು ಕುಟುಂಬದಿಂದ ದೂರಾಗುತ್ತಿದ್ದಾರೆ. ಇದಕ್ಕೆ ಕಾರಣ ನಾವುಗಳು ಧ್ವನಿ ಎತ್ತುತ್ತಿಲ್ಲ. ಅವರಿಗೆ ಸಲ್ಲಬೇಕಾದ್ದನ್ನು ನಾವುಗಳು ದೊರಕಿಸಿಕೊಡುತ್ತಿಲ್ಲ. ಸರ್ಕಾರಕ್ಕೆ ಮಕ್ಕಳ ಕೊರಗನ್ನು ನಾವುಗಳು ತಲುಪಿಸುತ್ತಿಲ್ಲ. ಬನ್ನಿ ಮಕ್ಕಳ ಹಕ್ಕುಗಳ ಸಪ್ತಾಹದಲ್ಲಿ ಮಕ್ಕಳಿಗಾಗಿ ಮಾತಾಡೋಣ. ಬದುಕಿಗೂ ಅವರಿಗೂ ನಡುವಿನ ಸೇತುವೆಯಾಗೋಣ. ಮನುಷ್ಯರಾಗೋಣ.

#UNCRC30

‍ಲೇಖಕರು avadhi

November 15, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: