ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳಿಗಾಗಿ ಕೆಲವು ಪದ್ಯಗಳು

ಅಕ್ಕಿಮಂಗಲ ಮಂಜುನಾಥ

 
ಸೂರ್ಯ -ಚಂದ್ರ


ಸೂರ್ಯನು ಉರಿಯುವ ಕೆಂಡ ಕಣೋ
ಚಂದ್ರನು ಬೆಳಗುವ ಚೆಂಡು ಕಣೋ
 
ಸೂರ್ಯನ ಬೆಳಕಿಗೆ ಕನ್ನಡಿ ಹಿಡಿದು
ಪ್ರತಿ ಫಲಿಸುವ ಚಂದ್ರನೆ ಗ್ರೇಟು ಕಣೋ
 
ಸೂರ್ಯನ ಬೆಳಕಿಗೆ ಗುದ್ದನು ನೀಡುವ
ಚಂದ್ರನೆ ಒಂಥರಾ ಬ್ಯಾಟು ಕಣೋ
 
ಆಡುವ ನನಗೆ ಸೂರ್ಯ ಚಂದ್ರಮರು
ತುಂ ತುಂಬಾನೇ ಪ್ರೆಂಡ್ಸು ಕಣೋ
 
ನಾ ಹೇಳಿದ್ದೆಲ್ಲಾ ಕೇಳಿದ್ದಕ್ಕೆ
ನಿನಗೂ ತುಂಬಾ ಥ್ಯಾಂಕ್ಸು ಕಣೋ.
 
ಜಟ್ಟಿ
ನಾನು ಜಟ್ಟಿ
ಬಹಳ ಗಟ್ಟಿ
ಎಂದು ಕಲ್ಲನು ಗುದ್ದಿದ್ದ
 
ಮೂಳೆ ಮುರಿಯಲು
ಕಟ್ಟು ಹಾಕಿಸಿ
ಮೂಲೆಯಲ್ಲಿ ಮಲಗಿದ
 
ಜೈ ಜೈ ಜೈ


ಜೈ ಜೈ ಜೈ
ಸೊಂಡಿಲೆ ಆನೆಗೆ ಕೈ
 
ಊಟ ತಿನ್ನಲಿಕ್ಕೆ
ನೀರು ಕುಡಿಯಲಿಕ್ಕೆ
ಸ್ನಾನ ಮಾಡಲಿಕ್ಕೆ
ಎಲ್ಲಾ ಕೆಲಸಕ್ಕೆ
ಸೊಂಡಿಲೆ ಆನೆಗೆ ಕೈ
ಜೈ ಜೈ ಜೈ.
 

‍ಲೇಖಕರು G

8 November, 2014

1 Comment

  1. mmshaik

    chennaagive kavana..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading