ಮಕ್ಕಳಿಗಾಗಿ ಕಥಾ ಸ್ಪರ್ಧೆ: ಮಕ್ಕಳೇ ಮಕ್ಕಳೇ ಕಥೆಯ ಬರೆಯಿರಿ

ಸಿವಗಂಗ ರಂಗಮಂದಿರದಿಂದ ಮಕ್ಕಳಿಗಾಗಿ ಕಥಾ ಸ್ಪರ್ಧೆ

ಮಕ್ಕಳ ಕಥಾ ಸ್ಪರ್ಧೆಯ ನಿಯಮಗಳು

1. ಕಥೆಯನ್ನು ಮಕ್ಕಳೇ ತಮ್ಮ ಸ್ವಹಸ್ತದಿಂದ ಬರೆಯಬೇಕು
2. ಕಥೆಯ ಕನ್ನಡದಲ್ಲೇ ಬರೆಯಬೇಕು
3. ಕಥೆಯು A4 ಅಳತೆಯ ಹಾಳೆಯಲ್ಲಿ ಕೈ ಬರಹದಲ್ಲಿದ್ದು 9 ಐದು ಪುಟಗಳಷ್ಟೇ ಇರಬೇಕು
4. ಐದುನೂರು (500) ಪದಗಳನ್ನು ಮೀರಿರಬಾರದು
5. ಕಥೆಯನ್ನು ನಮಗೆ ತಲುಪಿಸುವ ಕೊನೆಯ ದಿನಾಂಕ 31/7/2020. ಆ ನಂತರ ಬಂದ ಕಥೆಯನ್ನು ಸ್ಪರ್ಧೆಗೆ ಸ್ವೀಕರಿಸುವುದಿಲ್ಲ.
6. ತೀರ್ಪುಗಾರರ ಆಯ್ಕೆಯೇ ಅಂತಿಮ
7. ಕಥೆಗಳನ್ನು ಕಳಿಸಲು ಯಾವುದೇ ಶುಲ್ಕವಿಲ್ಲ
8. ಒಬ್ಬರು ಒಂದೇ ಕಥೆ ಕಳಿಸಲು ಅವಕಾಶ ಹಾಗೂ ಯಾವುದೇ ಕಾವ್ಯನಾಮದಿಂದ (Pen Name) ಕಥೆಯನ್ನು ಬರೆದಿರಬಾರದು
9. ಕೆಂಗೇರಿ ಉಪನಗರದ ಸುತ್ತಮುತ್ತಲಿನ ಬಡಾವಣೆಯ ಮಕ್ಕಳ ಅತ್ಯುತ್ತಮ 75 ಕಥೆಗಳನ್ನು ಹಾಗೂ ಉಳಿದ ಭಾಗದ 25 ಮಕ್ಕಳ ಅತ್ಯುತ್ತಮ ಕಥೆಗಳನ್ನು ಸ್ವರ್ಧೆಯ ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು
10. ಆಯ್ಕೆಯಾದ ಕಥೆಗಳನ್ನು ಪುಸ್ತಕ ರೂಪದಲ್ಲಿ ‘ಸಿವಗಂಗ’ ಪ್ರಕಾಶನದಿಂದ ಪ್ರಕಟಿಸಿ, 2021 ಜನವರಿಯಲ್ಲಿ ಸಿವಗಂಗ ರಂಗಮಂದಿರದಲ್ಲಿ ಪುಸ್ತಕ ಸಮಾರಂಭ ನಡೆಸಿ ಬಿಡುಗಡೆ ಮಾಡಲಾಗುವುದು
11. ಡಿಸೆಂಬರ್ 2020ರಲ್ಲಿ ಆಯ್ಕೆಯಾದ ಕಥೆಯ ಹಾಗೂ ಕಥೆಗಾರರ ಹೆಸರನ್ನು ಪ್ರಕಟಿಸಲಾಗುವುದು. ಈ ಕುರಿತು ಮಾಹಿತಿ ತಿಳಿಯಲು ಯಾರೂ ಕೂಡ ಪದೇ ಪದೇ ಫೋನ್ ಮಾಡಕೂಡದು
12. ಕಥೆಯ ಹೆಸರು, ಕಥೆಗಾರರ ಹೆಸರು, ವಿಳಾಸ ಹಾಗೂ ಮೊಬೈಲ್ ನಂಬರನ್ನು ಸ್ಫುಟವಾಗಿ ಬರೆದಿರಬೇಕು
13. ಸ್ಪರ್ಧೆಗೆ ಈಗಾಗಲೇ ಪ್ರಕಟವಾದ ಕಥೆ ಕಳಿಸಕೂಡದು. ಕಥೆಯು ಹೊಸದಾಗಿರಬೇಕು. ಮಕ್ಕಳ ಕಥೆಯಾಗಿರಬೇಕು
14. ಅಕ್ಷರ ದೋಷವಿಲ್ಲದ, ವ್ಯಾಕರಣ ದೋಷವಿಲ್ಲದ, ಸುಂದರ ಬರಹವುಳ್ಳ ಮತ್ತು ವಸ್ತು ವೈವಿಧ್ಯವಿರುವ ಉತ್ತಮ ಶೈಲಿಯ, ನೀತಿ ಇರುವ ಕಥೆಗಳನ್ನು ಪ್ರಕಟಣೆಗೆ ಆಯ್ಕೆ ಮಾಡಲಾಗುವುದು
15. ಆಯ್ಕೆಗಾರರ ತೀರ್ಪೇ ಅಂತಿಮ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ

ಕಥೆ ಬರೆಯಲು ನಿಮ್ಮ ಮಕ್ಕಳಿಗೆ ಪ್ರೋತ್ಸಾಹ ನೀಡಿ. ನಿಮ್ಮ ಮಕ್ಕಳಿಂದ ಚಂದ ಕಥೆ ನಮಗೆ ಬರಲಿ. ನಾಡಿಗೆ ತಲುಪಲಿ.

ಕಥೆ ಕಳುಹಿಸಬೇಕಾದ ವಿಳಾಸ:

ಮಕ್ಕಳೇ ಮಕ್ಕಳೇ ಕಥೆಯ ಬರೆಯಿರಿ ಸ್ಪರ್ಧೆ
ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
3386 ಮಹಾಮನೆ
ಸರ್. ಎಂ. ವಿ ಲೇಔಟ್ 1ನೇ ವಿಭಾಗ, ಕೆಂಗೇರಿ ಉಪನಗರ
ಬೆಂಗಳೂರು 560060
ದೂರವಾಣಿ: 9448970731

‍ಲೇಖಕರು nalike

June 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: