ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳಿಗಾಗಿ ಒಂದು ದೀಪಾವಳಿ ಪದ್ಯ

ದೀಪಾವಳಿ ಹಬ್ಬ

– ಅಕ್ಕಿಮಂಗಲ ಮಂಜುನಾಥ

ತಪ್ಪದೆ ಬರುವುದು ದೀವಳಿ ಹಬ್ಬ
ಗಡ ಗಡ ನಡಗುವ ಚಳಿಯಲ್ಲಿ
ಬಯಲಲಿ ಪಯಿರು ತೆನೆಯಲಿ ಹಕ್ಕಿ
ಹಾಡಿವೆ ಸೋನೆ ಮಳೆಯಲ್ಲಿ
 
ಹಬ್ಬಕೆ ಬೇಕು ಹೊಸ ಹೊಸ ಬಟ್ಟೆ
ತೊಟ್ಟು ಮೆರೆಯಲಿಕ್ಕೆ;
ಬಗೆ ಬಗೆ ತಿಂಡಿ ತಿನುವೆವು ದಂಡಿ
ಲೋಕ ಮರೆಯಲಿಕ್ಕೆ

ನೆಂಟರು ಬರಲಿ ಉಡುಗೊರೆ ತರಲಿ
ಭಾವನು ತಪ್ಪದೆ ಬರಲಿ
ಕೈಯಲಿ ಹಿಡಿದಿಹ ಚೀಲದ ತುಂಬಾ
ಪಟಾಕಿ ಸರಗಳೇ ಇರಲಿ
 
ಎಳೆಯರು ನಾವು ಗೆಳೆಯರ ಕೂಡಿ
ಬಿಂಕದಿ ನಡೆಯುವೆವು
ಮತಾಪು ಪೆಟ್ಟಿ ಸುರ್ ಸುರ್ ಬತ್ತಿ
ಪಟಾಕಿ ಸಿಡಿಸುವೆವು

‍ಲೇಖಕರು G

26 October, 2014

1 Comment

  1. mmshaik

    uttam kavana..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading