ಮಂಸೋರೆ ಕಂಡ ‘ನೀಲಿ ಹಕ್ಕಿ’

ಮಂಸೋರೆ

ಎಷ್ಟೋ ದಿನಗಳಾಗಿತ್ತು ಇಂತಹ ಅಪ್ಪಟ ಕನ್ನಡ ಸಿನೆಮಾ ನೋಡಿ. ತುಂಬಾ ಒಳ್ಳೆಯ ಸಿನೆಮಾ ನೋಡಿದ ಸಾರ್ಥಕತೆ. ನಿರ್ದೇಶಕರ ಬೆನ್ನಿಗೆ ಇಡೀ ತಂಡ ಒಟ್ಟಾಗಿ ಬೆಂಬಲಿಸಿರುವ ಫಲ ‘ನೀಲಿ ಹಕ್ಕಿ’ ಸಿನೆಮಾ.

ಕತೆ-ಚಿತ್ರಕತೆ-ನಿರೂಪಣೆ-ಸಂಭಾಷಣೆ ಎಲ್ಲವೂ ಪರ್ಫೆಕ್ಟ್, ಸಿದ್ಧನ ಪಾತ್ರದಾರಿ ಹುಡುಗ, ಗೋಪಾಲಕೃಷ್ಣ, ನಿಧಿ ಹೆಗಡೆ, ನರೇಶ್‌ ಭಟ್‌, ಅಶ್ವಿನಿ ಹಾಸನ, ಸುಕ್ರಜ್ಜನ ಪಾತ್ರಧಾರಿ ಹಾಗೂ ನನ್ನ ಖಾಯಂ ಆಸ್ಥಾನ ಕಲಾವಿದ ಸಂತೋಷ್ ಪಾಂಚಾಲ್ ಎಲ್ಲರ ನಟನೆಯೂ ತುಂಬಾ ಸಹಜವಾಗಿ ಮೂಡಿ ಬಂದಿದೆ.

ವಿಶೇಷವಾಗಿ ಈ ಸಿನೆಮಾದಲ್ಲಿ ಉಲ್ಲೇಖಿಸಬೇಕಾದವರು ಮೂವರು ಕ್ಯಾಮೆರಾಮೆನ್ ವಿಷ್ಣು ಪ್ರಸಾದ್‌ ಪಿ, ಕಲಾ ನಿರ್ದೇಶಕ ಸಂತೋಷ ಪಂಚಲ್ ಹಾಗೂ ಸೌಂಡ್ ಡಿಸೈನರ್ ನಿತಿನ್. ಈ ಸಿನೆಮಾದಲ್ಲಿ ಪ್ರಶಾಂತ್‌ ಪಂಡಿತ್ ಅವರ ಸಂಕಲನವೂ ಕೂಡ ನನಗೆ ಹೆಚ್ಚು ಇಷ್ಟವಾಯಿತು.

ಇದು ನನ್ನ ಪ್ರಕಾರ ಕನ್ನಡದ ‘ಪಥೇರ್ ಪಾಂಚಾಲಿ’. ಗಣೇಶ್‌ ಹೆಗಡೆ ಸರ್ ತುಂಬಾ ಒಳ್ಳೆಯ ದೃಶ್ಯಕಾವ್ಯದಂತಹ ಸಿನೆಮಾ ಕೊಟ್ಟಿದ್ದೀರಿ. ಕನ್ನಡ ಚಿತ್ರರಂಗದ ಹೆಮ್ಮೆಯ ಭವಿಷ್ಯದ ನಿರ್ದೇಶಕರು ನೀವು. ಅಪ್ಪಟ ಸಿನೆಮಾ ಪ್ರೇಮಿಗಳು ಈ ಸಿನೆಮಾವನ್ನು ತಪ್ಪದೇ ನೋಡಿ.

ಒಟ್ಟಾರೆ ಸಿನೆಮಾದಲ್ಲಿ ಒಂದು ದೃಶ್ಯದ ಬಗ್ಗೆ ವೈಯಕ್ತಿಕವಾಗಿ ಪ್ರಶ್ನೆ ಇದೆ, ಅದು ಒಟ್ಟಾರೆ ಸಿನೆಮಾ ಧ್ವನಿ ಅಲ್ಲದಿದ್ದರೂ, ಅದು ನನಗೆ ಪ್ರಶ್ನೆಯಾಗಿ ಉಳಿದಿದೆ, ಅದನ್ನು ನಿರ್ದೇಶಕರು ಎದುರಿಗೆ ಸಿಕ್ಕಾಗ ಉತ್ತರ ಪಡೆದುಕೊಳ್ಳುತ್ತೇನೆ. ಇನ್ನು ನಾಲ್ಕು ದಿನ ಈ ಸಿನೆಮಾ ಆನ್ಲೈನ್ ಅಲ್ಲಿ ಲಭ್ಯವಿದೆ,

ಲಿಂಕ್ ಇಲ್ಲಿದೆ .

https://nyiff.moviesaints.com/movie/blue-bird

‍ಲೇಖಕರು Avadhi

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: