ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಸೋರೆ ಆತಂಕ…

ಮಂಸೋರೆ

ನಿರ್ಮಾಪಕರು, ನಿರ್ದೇಶಕರು ತಮ್ಮ ಪ್ರಾಮಾಣಿಕ ದುಡಿಮೆಯನ್ನ ಬಂಡವಾಳ ಹೂಡಿ ಸಿನೆಮಾ ನಿರ್ಮಾಣ ಮಾಡಿದರೆ, ಕೆಲವು ದುಷ್ಟರು ಅವರ ಶ್ರಮವನ್ನು ಯಾವುದೇ ಪರವಾನಗಿ ಪಡೆಯದೇ ಅಕ್ರಮವಾಗಿ ಮಾರಾಟ ಮಾಡುವುದು, ಪೈರೆಸಿ ಮಾಡುವುದರಲ್ಲಿ ನಿರತರಾಗಿದ್ದಾರೆ.
ಅಂತಹವರಲ್ಲೊಬ್ಬ ಮುಂಬಯಿಯಲ್ಲಿ ಕಛೇರಿ ಹೊಂದಿರುವಂತಹ S S Suntnoor productions ಎಂಬ ಹೆಸರಲ್ಲಿ ಸಂಸ್ಥೆ ನಡೆಸುತ್ತಿರುವ Shloak Suntnoor ಎಂಬ ವ್ಯಕ್ತಿ. ನಮ್ಮ ಆಕ್ಟ್‌ 1978 ಹಾಗೂ ಅರಿಷಡ್ವರ್ಗ ಹಾಗೂ ಕನ್ನಡದ ಸಾಕಷ್ಟು ಸಿನೆಮಾಗಳನ್ನು ಆನ್ಲೈಲ್ ಡಿಸ್ಟ್ರಿಬ್ಯೂಷನ್ ವೆಬ್ಸೈಟ್‌ Vuulr.com ಗೆ ಮಾರಿದ್ದಾನೆ. ಅದೂ ಪೈರಸಿ ಕಾಪಿಗಳನ್ನು.

ಈ ವಿಷಯ ತಿಳಿದ ಕೂಡಲೇ ಅರವಿಂದ್‌ ಕಾಮತ್ ಹಾಗೂ ನಾನು ಕರೆ ಮಾಡಿ ಕೂಡಲೇ ತೆಗೆಯದೇ ಹೋದರೆ ಕಾನೂನಿನ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ ಮೇಲೆ ತೆಗೆದಿದ್ದಾನೆ. ಆದರೆ ಇನ್ನೂ ಹಲವು ಸಿನೆಮಾಗಳು ಇನ್ನೂ ಇವರ ವೆಬ್ ಸೈಟಲ್ಲಿ ಇದೆ. ಈ ಪಟ್ಟಿಯಲ್ಲಿ ಇರುವ ಎಷ್ಟು ಸಿನೆಮಾಗಳನ್ನು ಅವರು ಅಧಿಕೃತವಾಗಿ ಅನುಮತಿ ಪಡೆದು ಕೊಂಡಿದ್ದಾರೋ ಗೊತ್ತಿಲ್ಲಾ. ನಿಮ್ಮ ಅನುಮತಿ ಪಡೆಯದೇ ಅವರು ಮಾರಿದ್ದರೆ ಸಂಬಂಧಪಟ್ಟ ಸಿನೆಮಾದವರು ಸೂಕ್ತ ಕ್ರಮ ಕೈಗೊಳ್ಳಿ.

ಪೈರಸಿ ಕಾಪಿಗಳನ್ನು ಹೀಗೆ ಹೊರದೇಶಗಳಲ್ಲಿ ಹೀಗೆ ಕಾನೂನು ಬಾಹಿರವಾಗಿ ಮಾರುವುದು ಇಲ್ಲಿನ ಎಷ್ಟೋ ನಿರ್ಮಾಪಕರ ಅರಿವಿಗೆ ಬರುವುದೇ ಇಲ್ಲಾ. ನಿರ್ಮಾತೃಗಳ ಅನುಮತಿ ಇಲ್ಲದೆ ಮಾರುವ, ಹಣ ಮಾಡುವ ದಂಧೆಗೆ ಕಡಿವಾಣ ಹಾಕಬೇಕು. ಈಗಾಗಲೇ ಚಿತ್ರರಂಗ ಸಾಕಷ್ಟು ನಷ್ಟದಲ್ಲಿದೆ, ಅದರ ಜೊತೆಗೆ ಇಂತಹ ಅಕ್ರಮಗಳಿಂದ ಇನ್ನೂ ನಷ್ಟ ಅನುಭವಿಸಬೇಕಾಗುತ್ತದೆ.

ಇಲ್ಲಿ ಕೆಳಗೆ ಸ್ಕ್ರೀಶಾಟ್ಸ್ ಅಲ್ಲಿ ಇರುವ ಪಟ್ಟಿಯನ್ನು ಗಮನಿಸಿ, ನಿಮ್ಮ ಅನುಮತಿಯನ್ನು ಪಡೆಯದೇ ಅವರು ತಮ್ಮ ವೆಬ್ ಸೈಟಲ್ಲಿ ನಿಮ್ಮ ಸಿನೆಮಾ ಸೇರಿಸಿದ್ದರೆ ಕೂಡಲೇ ತೆಗಿಸಿ, ಇಲ್ಲವಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ.

‍ಲೇಖಕರು Avadhi

12 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading