ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂದೆಯಲಿ ಒಂದಾಗೋಕೆ ಈ ಮನುಷ್ಯ ಜನ್ಮ ಬೇಕೆ?

ಈ ಬದುಕಿಗೇನರ್ಥ?

ರಮೇಶ್ ಹಿರೇಜಂಬೂರ್

ಕುರಿಗಳು ಸಾರ್ ಕುರಿಗಳು
ಅಂದರು ನಮ್ಮ ನಿಸಾರ್
ಅಷ್ಠಾದರೂ ಬಿಡಲಿಲ್ಲ ಬಾಲಂಗೋಚಿತನದ ಕಾರ್ ಬಾರ್
ಮಂದೆಯಲಿ ಒಂದಾಗೋಕೆ
ಈ ಮನುಷ್ಯ ಜನ್ಮ ಬೇಕೆ?
ನೀವೇ ಹೇಳಿ ಸಾರ್ !
 
ಎಲ್ಲರೊಳಗೊಂದಾಗಬೇಕು
ಮನುಷ್ಯರಾಗಿ ಮೊದಲು ಬಾಳಬೇಕು
ನಾಚಿಕೆ ಬಿಟ್ಟು ನಾಮರ್ಧರಾಗುವ ಜನ
ಕೊಳ್ಳೆ ಹೊಡೆಯುತಿಹರು
ಅಮಾಯಕರ ಮಾನ, ಪ್ರಾಣ, ಹಣ

ಬಡವರು ಬಡವರಾಗುತ್ತಲೇ ಇಹರು
ಶ್ರೀಮಂತರು ಶ್ರೀಮಂತರಾಗಿಯೆ ಉಳಿದಿಹರು
ಕಾಣಲಿಲ್ಲ ಸಮಾನತೆಯ ಸೂತ್ರ
ಎಲ್ಲೆಲ್ಲೂ ಕಾಮಾಂಧರ ತಂತ್ರ
 
ಬುದ್ಧ, ಬಸವ, ಗಾಂಧಿ ಮೊದಲಾದವರು
ಶ್ರಮಿಕರ ಏಳಿಗೆಗೆ ಶ್ರಮಿಸಿದರು
ಆದರೂ ದೂರಾಗಲಿಲ್ಲ ಜಾತಿ-ಧರ್ಮ
ಅದರೊಳಗೇನಿಹವೋ ಮರ್ಮ !
 
ಶತ ಶತಮಾನಗಳಿಂದಲೂ ಕಾಣಲಿಲ್ಲ ಸಮತೆ
ಒಟ್ಟುಗೂಡಿ ಕುಂತಿವೆ ಕಂತೆ ಕಂತೆ
ನೈತಿಕತೆಗೆ ಅರ್ಥ ಉಳಿದಿಲ್ಲ
ಪ್ರಾಮಾಣಿಕತೆಗೆ ಬೆಲೆಯಿಲ್ಲ !
 
ಎಲ್ಲೆಲ್ಲೂ ಕಾಂಚಾಣದ ಕಾರ್ಮೋಡ
ಇದು ತಿನ್ನುತಿಹುದು ನಮ್ಮ ನಾಡ
ಸಾಲು ಸಾಲು ಹಗರಣಗಳ ಮಾಲೆ
ಮಂತ್ರಿ ಮಹೋದಯರೂ ಈಗ ಜೈಲುಪಾಲೆ
 
ಕಾಸಿಗೆ ಬಾಯ್ಬಿಟ್ಟು ಮತ ಹಾಕುವ ನಮ್ಮ ಜನ
ಮರೆತಿಹರು ತಮ್ಮ ಜವಾಬ್ದಾರಿಯನ್ನ
ಹಳ್ಳಿಯಿಂದ ದಿಲ್ಲಿವರೆಗೆ ಕುರುಡು ಕಾಂಚಾಣದ ನರ್ತನ
ಪ್ರತಿಭಟಿಸಲೂ ಉಳಿದಿಲ್ಲ ನಮ್ಮಲ್ಲಿ ಗಡಸುತನ
 
ಕಣ ಕಣದಲೂ ಕಾಣುತ್ತಿದೆ ಸ್ವಾರ್ಥ
ಹೀಗೆ ಸಾಗಿದರೆ ಈ ಬದುಕಿಗೇನರ್ಥ ?
ಮಂದೆಯಲಿ ಒಂದಾಗಿ, ಸ್ವಂತತೆಯೇ ಬಂದಾಗಿ
ಕುರಿಗಳಂತೆ ನಾವ್ ಬದುಕಬೇಕಾ ?
 
ನೀವೇ ಹೇಳಿ ಸಾರ್…?
 

‍ಲೇಖಕರು G

20 October, 2013

1 Comment

  1. Anonymous

    anna nan nim kavite ivaga odidini tumbane chanagide matte adbutavagide brother nisar ahamad dara bendre yalla kavigalu bandu ogidare ninni kaviteli brother chanagi barita idiri mundu varesi brother

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading