ಮಂಡ್ಯ ರಮೇಶ್ ಕಾಲಂ : ರಾಜಕುಮಾರ್ ರಂಗಾಯಣಕ್ಕೆ ಬಂದಿದ್ರು

ಸೃಜನ ವೇದಿಕೆ ಅಂತಾ ಕಥೆ, ಕವನ, ಅನುಭವಗಳನ್ನು ಬರೆಯೋ ಒಂದು ವೇದಿಕೆಯನ್ನು ಕಾರಂತರು ಆರಂಭಿಸಿದ್ರು, ಹುಡುಗರ ಬರೆಯೋ ಹವ್ಯಾಸಕ್ಕೆ ಪುಷ್ಟಿ ಸಿಗಲಿ ಅಂತಾ ಅವರ ಆಸೆ. ಒಮ್ಮೆ ಬರೆದು, ಓದೋ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಯಾಗಿದ್ದ ಬಳಿಗಾರ್ ಬಂದು, ಪದ್ಯ ಬರೆದು ಓದಿ, ನಮ್ಮನ್ನು ಚಕಿತಗೊಳಿಸಿದರು. ಚದುರಂಗರೂ ಪುಟ್ಟ, ಪುಟ್ಟ ಪದ್ಯ ಓದಿ ಎಲ್ಲರನ್ನೂ ಹಿಂಸಿಸಿದ್ದರು…. ಕ್ರಮೇಣ ವರ್ಷದ ನಂತರ ಒಂದಿಷ್ಟು ತಲೆಗಳು ಕೆಲಸಮಾಡಿ ‘ಗೋಡೆಪಾಡು’ ಅನ್ನೋ ಗೋಡೆ ಪತ್ರಿಕೆಯನ್ನು ಆರಂಭಿಸಿದರು. ಹುಡುಗರದ್ದೇ ಕಾರುಬಾರು… ಒಂದು ಒಳ್ಳೆ ರಂಗಭೂಮಿ ಬುಲಿಟಿನ್ ಆಗಬೇಕು ಅನ್ನೋ ದೊಡ್ಡ ಆಸೆ…
ನನ್ನನ್ನು ಆಗಾಗ ಬರೆಯಲು, ತೋಡಿಕೊಳ್ಳಲು ಗೋಡೆಪಾಡು ಹುರಿದುಂಭಿಸಿದ್ದಂತೂ ನಿಜ. ನಟರು ಓದಲೇಬೇಕೆಂದು ಕಾರಂತರು ಪ್ರತಿದಿನ ತಮ್ಮ ಸ್ವಂತ ಖಚರ್ಿನಲ್ಲಿ ನ್ಯೂಸ್ಪೇಪರ್, ತರಂಗ, ತುಷಾರ, ಸುಧಾ, ಫ್ರಂಟ್ಲೈನ್, ಟುಡೇ…. ಎಷ್ಟೊಂದು ಪತ್ರಿಕೆಗಳನ್ನು ಕೊಡುತ್ತಿದ್ದರು. ಓದುತ್ತಿದ್ದಾರೆಯೇ ಎಂದು ವಿಚಾರಿಸುತ್ತಿದ್ದರು. ರಂಗಭೂಮಿಯ ಸುದ್ಧತಿಯನ್ನು ಕತ್ತರಿಸಿ, ಎಲ್ಲರೂ ಓದಲಿ ಅಂತಾ ರಂಗಾಯಣದಲ್ಲಿ ಡಿಸ್ಪ್ಲೇ ಮಾಡುವ ಪದ್ಧತಿ ಬೆಳಸಿದ್ದಾರೆ….! ಇಷ್ಟೆಲ್ಲಾ ಅಲ್ಲದೇ ಆರಂಭದಿಂದಲೇ ಎಲ್ಲರಿಗೂ ನೂರಾರು ರೂಪಾಯಿಗಳ ತುಂಬಾ ಒಳ್ಳೆಯ ರಂಗಶಿಕ್ಷಣ, ಸಾಹಿತ್ಯ, ನಾಟಕಗಳ ಪುಸ್ತಕಗಳನ್ನು ಕೊಡಿಸಿದ್ದಾರೆ. ಬಹುತೇಕ ಎಲ್ಲಾ ಹುಡುಗರಿಗೂ ಸಂಗ್ರಹಿಸುವ ಒಳ್ಳೆಯ ಅಭಿರುಚಿ ಬೆಳೆದುಬಿಟ್ಟಿತ್ತು! ಸಾಕಲ್ವೇ…!??
ಇಲ್ಲಾ ಸಾಲದು. ಕಾರಂತರಿಗೆ ಇಷ್ಟು ಸಾಲದು!! ನಮ್ಮ ರಂಗಭೂಮಿಯ ಪರಂಪರೆಯನ್ನು ದಾಖಲಿಸುವ ಮ್ಯೂಸಿಯಂ ಆಗಬೇಕು. ಕಾಲಘಟ್ಟವನ್ನು ಚಿತ್ರಿಸುವ ಜೀವಂತ ಪಾತ್ರಗಳು ಅಲ್ಲಿರಬೇಕು… ಈ ಥರ ನೂರರು ಕನಸುಗಳು.
ತಿರುಕನ ಕನಸು ಅಂದುಕೊಳ್ಳಬೇಕಾದುದ್ದಿಲ್ಲ.! ಅಲ್ಲಿ ತಿರುಕ ರಾಜನಾದರೂ, ಕ್ರಿಯೇಟಿವಿಟಿ ಇಲ್ಲದೇ, ತನ್ನ ಅಹಂನಿಂದಾಗಿ ಮತ್ತೆ ಅದೇ ಸ್ಥಿತಿಯಲ್ಲಿದ್ದ. `ಕಲಾವಿದ ಸದಾ ತಿರುಕನಾಗಿರಬೇಕು… ಆಗ ಆತ ಸೃಜನಶೀಲನಾಗಲು ಸಾಧ್ಯ’ ಅನ್ನೋದು ಕಾರಂತರ ಅಂಬೋಣ. ರಂಗಾಯಣಕ್ಕೆ ವಿನಯದಿಂದ ಎಲ್ಲರನ್ನೂ ಬೇಡಿಕೊಳ್ಳುವ, ಸಂಸ್ಥೆಯ ಸೌಕರ್ಯಕ್ಕಾಗಿ ಎಲ್ಲರನ್ನೂ ಬೇಡಿಕೊಳ್ಳುವ ತಿರುಕ…. ಈ ಕಾರಂತ.
ನಾವು ಮಕ್ಕಳಿಗಾಗಿ ತಿರುಕನ ಕನಸು ನಾಟಕ ತಯಾರುಮಾಡಿದ್ದೆವು. ಸಹಪಾಠಿಗಳಿಬ್ಬರ ಜವಾಬ್ದಾರಿ, ನೇತೃತ್ವದಲ್ಲಿ, ತಂಡ, ಹಾಡು, ಕುಣಿತ ಇತ್ಯಾದಿ ಬಳಸಿಕೊಂಡು ಸರಳವಾಗಿ, ಆದರೆ ದೃಶ್ಯ ವೈಭವದ ಎಲ್ಲಾ ಕಲ್ಪನೆಗಳನ್ನು ಮೂರ್ತಗೊಳಿಸುತ್ತಾ ನಾಟಕವನ್ನು ತಯಾರು ಮಾಡುತ್ತಾ ಹೋದೆವು. ಕವನ-ಕಾವ್ಯ ಇತ್ಯಾದಿಗಳನ್ನು ದೃಶ್ಯೀಕರಿಸುವಾಗ ನರೇಟೀವ್ ಆಗಿರಬೇಕೆ, ಬೇಡವೆ? ಪ್ರತಿಮೆಗಳನ್ನು ಯಾವ ಪ್ರಮಾಣದಲ್ಲಿ ಬಳಸಬೇಕು? ಮಕ್ಕಳಿಗೆಂದು ಸರಳ ಮಾಡಿಬಿಟ್ಟರೆ ಕವನದ ಆಳ ಕಣ್ಮರೆಯಾಗಿಬಿಡುತ್ತದೆ… ಕನಸನ್ನು ನಾಟಕೀಯವಾಗಿ, ಕ್ಲೀಷೆಗಳಿಲ್ಲದೆ ತೋರಿಸುವುದು ಹೇಗೆ? ಮುಪ್ಪಿನ ಷಡಕ್ಷರಿಯ ತತ್ವಕ್ಕೆ ನಾವೇನು ಹೊಸ ದೃಷ್ಟಿಯಲ್ಲಿ ಆಲೋಚಿಸಬಲ್ಲೆವು?…. ಹೀಗೆಲ್ಲಾ ಚರ್ಚಿಸುತ್ತಾ ನಾಟಕ ಸಿದ್ಧವಾಗತೊಡಗಿತ್ತು. ಆನೆ, ಮದುವೆಮಂಟಪ, ಛತ್ರಿಚಾಮರಗಳನ್ನು ಹುಡುಗರೇ ತಯಾರಿಸಿದ್ದರು. ಸಂಗೀತರಾಗಗಳನ್ನು ಯೋಗಣ್ಣನವರು ಸಂಯೋಜಿಸಿ, ಅವರೇ ಹಾರ್ಮೋನಿಯಮ್ ಮುಂದೆ ಕುಳಿತಿದ್ದರು. ಮೇಳವನ್ನು ಬಳಸಿ, ಕನಸನ್ನು ಪಾತ್ರವಾಗಿ ಮಾಡಿ ನಾಟಕ ಕಟ್ಟಿದ್ದೆವು.. ನಗಬೇಡಿ… ನಾನೂ ನಾಟಕದಲ್ಲಿ ಹಾಡಿದ್ದೆ!
ಹೊಸದಾಗಿ ನಿರ್ಮಿತವಾಗಿದ್ದ ಜನಪದ ರಂಗದಲ್ಲಿ ಅಪಾರಪ್ರೇಕ್ಷಕರ ಮುಂದೆ ತಿರುಕನ ಕನಸು ಮೊದಲ ಪ್ರದರ್ಶನವಾಯಿತು. ನಾಟಕ ತೋಪಾಯಿತು! ಆ ರಾತ್ರಿ ಊರಿಗೆ ಬಂದಿದ್ದ ಕಾರಂತರು, ಮಾರನೆ ದಿನ ಚೆನ್ನಾಗಿ ರಿಪೇರಿ ಮಾಡಿದ್ದರು. ಕಾರಂತರ ಕೈಯ ಮಾಂತ್ರಿಕ ಸ್ಪರ್ಶಕ್ಕಾಗಿ ನಾಟಕ ಕಾದಿತ್ತು! ಅವತ್ತಿನಿಂದಲೇ ನಾಟಕ ಶಿಸ್ತು, ಲವಲವಿಕೆಯಿಂದ ಹೊಸ ರೂಪ ಪಡೆದು ಅಪಾರ ಜನಾಕರ್ಶಣೆಗೆ ಒಳಗಾಯಿತು. ಈ ನಾಟಕಕ್ಕೆ ರಂಗಮಂದಿರ ತುಂಬಿ, ನೂರಾರು ಜನ ವಾಪಾಸ್ಸಾದ ಪ್ರಸಂಗಗಳೂ ಇವೆ.
ನನಗಿದ್ದ ಮತ್ತಿಬ್ಬರು ಉಪನ್ಯಾಸಕರೆಂದರೆ, ಶ್ರೀ ಬಸವಲಿಂಗಯ್ಯ ಹಾಗು ಶ್ರೀ ಗಂಗಾಧರಸ್ವಾಮಿ. ಇಬ್ಬರೂ ಸಮುದಾಯ ತಂಡದ ನೆಲೆಯಿಂದ ಹೊರಟು ಕೆಲಸ ಮಾಡಿದವರು. ಬಸವಲಿಂಗಯ್ಯ ಎನ್.ಎಸ್.ಡಿ ಮುಗಿಸಿ, ಉತ್ತರ ಕನರ್ಾಟಕದ ಹಳ್ಳಿಗಳಿಗೆ ನುಗ್ಗಿ ನಾಟಕ ಮಾಡಿಸಿದರು. ನಮಗೆ ಒಂದಿಷ್ಟು ತಿಂಗಳು ರಿಯಲಿಸ್ಟಿಕ್ ನಟನೆ ಅಭ್ಯಾಸ ಮಾಡಿಸಲು ಕೆಲವು ಆಟಗಳನ್ನು ಆಡಿಸಿ, ಶುರುಮಾಡಿದ್ದರು. ಅಷ್ಟೇ… ಮತ್ತೆ ಅವಕಾಶ ಸಿಗಲೇ ಇಲ್ಲ… ಜವಬ್ದಾರಿ ಬಿದ್ದಾಗ ಎಷ್ಟೇ ಕಷ್ಟವಾದರೂ ನಿಭಾಯಿಸಲು ಈತ ಯತ್ನಿಸುತ್ತಿದ್ದುದ್ದನ್ನು ನಾನು ನೊಡಿದ್ದೇನೆ. ಹಿಪ್ಪೋಲಿಟಸ್, ಜೋಗಿ, ಚೆರ್ರಿ ತೊಟದ ಸೆಟ್ ಕೆಲಸ ಮಾಡುವಾಗ ಈತ ತೆಗೆದುಕೊಂಡ ರಿಸ್ಕ್ ತೆಗೆದುಕೊಂಡಿದ್ದನ್ನು ನಾನು ಕಂಡಿದ್ದೇನೆ. ಶ್ರೀ ಗಂಗಾಧರಸ್ವಾಮಿ ಕುಡ, ರಾತ್ರಿ ನಿದ್ದೆಗೆಡುವುದೆಂದರೆ ಇವರಿಗೆ ಬಹುಪ್ರಿಯವಾದ ಕೆಲಸ. ಸಾಕಷ್ಟು ವರ್ಷ ರಮಗಭೂಮಿಯ ಬೇರೆ ಬೇರೆ ಬಗೆಗಳಲ್ಲಿ ಕೆಲಸ ಮಾಡಿ, ಹೆಚ್ಚು ಅನುಭವಸ್ಥರಾದರು… ಒಂದೆರಡು ಆಕ್ಟಿಂಗ್ ಕ್ಲಾಸ್ಗಳನ್ನು ನಮಗೆ ತೆಗೆದುಕೊಂಡಿದ್ದರು…. ಇರುವ ಜಾಗವೊಂದನ್ನು ಹೇಗೆ ರಂಗಸ್ಥಳವನ್ನಾಗಿ ಪರಿವರ್ತಿಸಬೇಕೆಂಬ ಅಭ್ಯಾಸವೊಂದು ಉಪಯುಕ್ತ ಎಂದು ನೆನಪಿದೆ. ಅಂತೂ ಇವರ ದೆಸೆಯಿಂದ ನಮಗೆ ಟಿ ಸ್ಕೇರ್, ಡ್ರಾಯಿಂಗ್ ಬೋಡರ್್ ಇತ್ಯಾದಿ ಇಂಜಿನಿಯರಿಂಗ್ ವಸ್ತುಗಳು ತಲರತಿಂದಿದ್ದೂ ಹೌದು… ಸ್ವಾಮಿ ಲೈಟ್ ಕಟ್ಟಿಸುತ್ತಾರೆ ಅಂತಾ ಕೇಳಿದೊಡನೆ ಹುಡುಗರು ಬೆಚ್ಚುತ್ತಿದ್ದೆವು.

ಅದು ಹಾಗಿರಲಿ… ಒಂದ್ಸಲ ನಮ್ಮ ಪ್ರೀತಿಯ ರಾಜಕುಮಾರ್ ರಂಗಾಯಣಕ್ಕೆ ಬಂದು ಭೆಟ್ಟಿಯಾಗಿ ಅಚ್ಚರಿ ಹುಟ್ಟಿಸಿದ್ದರು.
ಆರ್.ಕೆ.ಲಕ್ಷ್ಮಣ್ ಬಂದು ವಿಶ್ವಾಸದಿಂದ ಮಾತನಾಡಿದ್ದರು. ಕೊಂಚಕಾಲ ನಮ್ಮ ಮೈಗೆ ಆಕಾರ ತರಲು ತಾಳ್ಮೆಯಿಮದ ನೃತ್ಯ ಕಲಿಸಿದ ನಂದಿನಿ ಈಶ್ವರ್ ಮತ್ತು ಬೆಣ್ಣೆ ನಂದಿನಿ, ಮೋನಿಕಾ… ಎಷ್ಟೊಂದು ಆಂಟಿಯರು.!
ನಮ್ಮ ಪ್ರತಿನಾಟಕದ ಫೋಟೋ ಸೆಷನ್ ಕಾರ್ಯಕ್ರಮ ಮಾತ್ರ ತಲೆಚಿಟ್ಟುಹಿಡಿಸುತ್ತಿತ್ತು…. ಆದರೆ ದಾಖಲಿಸುವ ಅನಿವಾರ್ಯತೆ ಇದ್ದೇ ಇದೆ ನೋಡಿ…. ವಾರ್ತಾ ಇಲಾಖೆಯ ಶಿವರುದ್ರಯ್ಯ, ಕುಂಚಿನಡ್ಕದ ಹುಡುಗ ಶಾಂ ಪ್ರಸಾದ್, ಇವರೆಲ್ಲ ಕೆಲವು ಅದ್ಭುತ ಫೋಟೋಗಳನ್ನಂತೂ ತೆಗೆದಿರೋದು ನಿಜ.
ಮೂರು ವರ್ಷಗಳಲ್ಲಿ ನಾವೆಲ್ಲರೂ ನವು ಮಾಡಿದ ನಾಟಕ ಕೃತಿಗಳ ಕುರಿತು ಬೇಕಾದಷ್ಟು ಓದುತ್ತಿದ್ದರೂ, ನಾಟಕಕ್ಕೆ ನೆರವಾಗುವ, ಅದಕ್ಕೆ ಸಂಭಂದಿಸಿದ ಯಾವುದೇ ಸಾಹಿತ್ಯ, ವಿಡಿಯೋ, ಚರ್ಚೆ, ಭೇಟಿ… ಎಲ್ಲವನ್ನೂ ತಪ್ಪದೇ ಮಾಟಲು ಯತ್ನಿಸಿದ್ದೆವು….. ಈ ರ್ಷಗಳಲ್ಲಿ ವಿಶೇಷವಾಗಿ ಯಾವ ಪುಸ್ತಕ ಓದಿದ್ದೀರಿ ಎಂದರೆ, ನೆನಪಲ್ಲಿ ಉಳಿದಿರೋದು ಹೇಳ್ತೇನೆ. ಆಲನಹಳ್ಳಿಯ ಭುಜಂಗಯ್ಯ, ಕಾರ್ನಾಡರ ತಲೆದಂಡ, ಕೋಲ ಕಾರಂತರ ಮುಸ್ಸಂಜೆ ನೆನಪುಗಳು, ಬೋಳುವಾರರ ತಟ್ಟುಚಪ್ಪಾಳೆ….. ಸಂಕಲನ, ತೇಜಸ್ವಿಯವರ ಪರಿಸರದ ಕಥೆ, ಮರಳುಸಿದ್ದಪ್ಪನವರ ಕನ್ನಡ ನಾಟಕ ವಿಮರ್ಶೆ… ಇದಲ್ಲದೇ ನೀನಾಸಂ ಹೊರಡಿಸಿದ ಅನೇಕ ರಂಗಶಿಕ್ಷಣದ ಪುಸ್ತಕಗಳನ್ನು ಓದಿದ್ದು ನೆನಪಿದೆ. ಕನ್ನಡ ಸಾಹಿತ್ಯದ ಅತ್ಯಂತ ವಿಶಿಷ್ಟ ಕೃತಿ ದೇವನೂರರ ಕುಸುಮಬಾಲೆಯನ್ನು ಓದಿ ಪ್ರತೀ ಅಕ್ಷರದ ಹಿಂದಿನ ಪ್ರತಿಮೆ, ಕುಸುರಿತನಕ್ಕೆ ರೋಮಾಂಚಿತನಾಗಿದ್ದೇವೆ, ಎಲ್ಲರೂ…!
ಅಂತೂ ಬಂದ; ಈ ಮುದುಕ ಫಿಟ್ಸ್ ಬೆನವಿಟ್ಸ್!
ನಾನು ನನ್ನ ಕಾಲುಸೆಂಚುರಿಯ ಜಿವನದಲ್ಲಿ ಇಂತಹ ಒಬ್ಬ ಮನುಷ್ಯನ್ನೂ ಕಂಡಿರಲಿಕ್ಕಿಲ್ಲ. ಅರವತ್ತರ ಆಚೆ ವಯಸ್ಸು ಓಡುತ್ತಿದ್ದರೂ, ಅಪ್ಪಿ ತಪ್ಪಿ ಕೂಡ ಸುಸ್ತಿನ ಸುಳಿವಿಲ್ಲ. ಅವನ ಲವಲವಿಕೆ, ಹಾಸ್ಯ ಪ್ರಜ್ಞೆ, ಕೋಪ… ಇವೆಲ್ಲಕ್ಕಿಂತ ಹೆಚ್ಚು ದಂಗುಬಡಿಸುವುದು. ಎಂಥಾ ನಾಟಕಕ್ಕೂ, ಪ್ರತೀ ಪಾತ್ರಕ್ಕೂ ಉಸಿರು ಉಸಿರಿನಲ್ಲಿಯೂ ಸಮಕಾಲೀನತೆಯನ್ನು ವಿಶ್ಲೇಷಿಸುವ ಅವರ ಮಾನವೀಯ ಗುಣ. ಅಸಹಜ ಅಭಿನಯ ಕಂಡರೇ ಕೆಂಡವಾಗುತ್ತಾರೆ ಬೆನೆವಿಟ್ಸ್. ನಟನ ಎಲ್ಲಾ ಅಹಂಕಾರಗಳನ್ನು ಒದ್ದು ಚಿಂದಿ ಚಿಂದಿ ಮಾಡುವ, ನಿಧಾನವಾಗಿ ಪಾತ್ರ ಕಟ್ಟಿಸುತ್ತಾ ಹೋಗುತತಾರೆ ಭೂಪ. ಒಪಪಠ್ಯದ ವಿವರಗಳನ್ನು ನಟರಿಗೆ ತುಂಬುತ್ತಾ, ಬದುಕಿನ ನೂರೆಂಟು ಸಂಧರ್ಭಗಳಲ್ಲಿ ಭಾವನೆಗೆ ಪ್ರಚೋದಿಸುತ್ತಾ, ಹೂಂಕರಿಸುವ ಈ ಜರ್ಮನ್ ತಾತ ಕನ್ನಡ ಪದಗಳಿಗೆ ಭಾವತುಂಬಿ ಹೇಗೆ ಮಾತನಾಡುವುದೆಂದು ನಮ್ಮನ್ನು ತಿದ್ದುವುದು ಕಂಡರೇ…. ನಾವೆಷ್ಟು ಕಲಿಯುವುದಿದೆ ಎಂದು ಅರಿವಾಗುತ್ತದೆ. ಶೇಕ್ಸ್ಪಿಯರ್ನ ಹ್ಯಾಮ್ಲೆಟ್, ಮಿಡ್ಸಮರ್…. ಲಿಯರ್ಗಳ ಕೆಲ ತುಣುಕುಗಳನ್ನು ಮಾಡಿಸಿ, ಶೆಕ್ಸ್ಪಿಯರ್ನ ಬಗ್ಗೆ ಹೊಸ ದರ್ಶನ ಕೊಟ್ಟ ಮಹಾನ್ ಛಲಗಾರ ಈ ಫಿಟ್ಸ್. ನಟರನ್ನು ನಡುಗಿಸಿಬಿಡುವ ಕಲೆಯಲ್ಲಿ ಸಿದ್ಧ ಹಸ್ತರಾಗಿರುವಂತೆಯೇ, ಒಳ್ಳೆಯದನ್ನು ಕಂಡಾಗ ಅಪ್ಪಿ ಮುದ್ದಾಡಿ, ಕಾಲಿಗೆರಗಿ ಬಿಡುವಷ್ಟು ಮುಗ್ಧತೆಯನ್ನೂ ಹೊಂದಿದ್ದರು. ಹೊಳೆವ ಬಿಳಿ ಕೂದಲ, ತುಂಬು ಗೆನ್ನೆಯ ಈ ಮರ್ಕ್ಯುರಿ ಮುದುಕನಿಗಿರೋದು, ಒಂದೇ ಕಣ್ಣು!
ನಿಮಗೆ ನಾವಿನ್ನೂ ಅಸ್ಟ್ರೇಲಿಯಾದಿಂದ ಬಂದಿದ್ದ ಗ್ಲೆನ್ ಮತ್ತು ವೆಂಡಿ ಎಂಬಿಬ್ಬರ ಬಗ್ಗೆ ಹೇಳಿಲ್ಲ…. ಈ ಇಬ್ಬರೂ ವಯಸ್ಸಿನಲ್ಲಿ ಸಣ್ಣವರಾದರೂ ರಂಗ ಚಳುವಳಿಗೆಂದು ತಮ್ಮನ್ನು ತೊಡಗಿಸಿಕೊಂಡಿದ್ದರು. ಮನುಷ್ಯ ದೇಹದ ಎಲ್ಲಾ ಮಾಂಸಖಂಡಗಳ ಮೇದು ಸ್ಥಿತಿಗೆ ತಂದು., ದೇಹದ ಚಲನೆಗೆ ಸಲೀಸಾಗಿ ಅನುವಾಗಲು ಬೇಕಾದ ಸರಳ ವಿಧಾನ, ಅಭ್ಯಾಸಿಕೆಗಳನ್ನು ಕಲಿಸಿಕೊಟ್ಟರು.. ಮುಖವಾಡದ ಪ್ರಕ್ರಿಯೆಗಳ ಬಗ್ಗೆ…., ಮನಸ್ಸು ಓಡುವಾಗ, ಪೆನ್ನು ಪುಸ್ತಕದಲ್ಲಿ ಭರದಲ್ಲಿ ದಾಖಲಿಸುತ್ತಾ ಹೋದಗ, ನಮ್ಮ ಎಷ್ಟೋ ವಿಕೃತಿಗಳು ದಾಖಲಾಗುತ್ತವೆ… ಹೀಗೆ ಕುತೂಹಲಕಾರಿಯಾದ ಮಾನಸಿಕ ಅಭ್ಯಾಸಗಳನ್ನು ಮಾಡಿಸಿದರು. ಇದ್ದಷ್ಟುದಿನವೂ ನಮ್ಮೊಂದಿಗೆ ನಗುತ್ತಾ ಕಳೆದು ಊರಿಗೆ ವಾಪಾಸ್ಸಾದರು….
 

‍ಲೇಖಕರು avadhi

August 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. g.n.nagaraj

    ಫ್ರಿಟ್ಜ್ ಬೆನೆವಿಟ್ಸ್ ಅಪಾರ ರಂಗ ಪ್ರೀತಿಯ, ಪ್ರತಿಭೆಯ ನಿರ್ದೇಶಕ. ಅವರನ್ನು ನೆನಪಿಸಿಕೊಂಡಿದ್ದು ಒಳ್ಳೆಯ ಕೆಲಸ. ಹಾಗೇಯೇ ಈ ಎಲ್ಲ ಪ್ರತಿಭಾವಂತರ ತರಬೇತಿಯ ಸಾರ ಕನ್ನಡ ರಂಗ ಪ್ರಿಯರಿಗೆಲ್ಲಾ ಒಂದು ಪಠ್ಯದಂತೆ ಸಿಗುವಂತಾಗುವುದು ಕಾರಂತರು ಹಾಗೂ ರಂಗಾಯಣ ಪ್ರಯೋಗದ ಫಲವನ್ನು ಕನ್ನಡ ಸಾಂಸ್ಕೃತಿಕ ಲೋಕ ಬಹಳ ಕಾಲ ಪಡೆಯುವಂತಾಗುತ್ತದೆ.

    ಪ್ರತಿಕ್ರಿಯೆ
  2. ಎನ್.ನಾರಾಯಣಸ್ವಾಮಿ.

    ರಾಜ್ ಕುಮಾರ್ ಎಂದರೆ ರಂಗಭೂಮಿಯ ಅನರ್ಘ ರತ್ನವಲ್ಲವೇ?ಇಂತಹ ಒಂದು ಪ್ರಯತ್ನವನ್ನ ಈಗಿನ ನಟರಿಂದ ನಿರೀಕ್ಷಿಸಿ.ರಂಗಬೂಮಿಯೆಂದರೆ ಏನು?ಎನ್ನುತ್ತಾರೆ.

    ಪ್ರತಿಕ್ರಿಯೆ
  3. chethan

    rangaayana…. embha padave adhbuta shakthi ondide.. inna adara olagilina marmavannu kanda nimage naa danya… rangaayanada adbutha nenapugalu..matthu kalita pariyannu vivarisiruva nimma ee lekhana..nammantha putta ranga abhimaanigalige rasadoutanaviddhante………..

    ಪ್ರತಿಕ್ರಿಯೆ
  4. chethan

    innondu nanage thumbha santhasa koduva vishaya endare… nimage ranga shikshana kottta gangadha swaami gurugalu… nanagu gurugalaagiddharu…aadarsha film institutenalli….. avarinda kalita naanu kuda dhanya

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: