ನೋಡಲೇಬೇಕಾದ ‘ನಲ್ ಪಗಲ್ ನೇರತ್ತು ಮಯಕಂ’

ಮಂಜುನಾಥ ಚಾರ್ವಾಕ

ವೇಲಂಕಣಿ ಚರ್ಚಿನ ಜಾತ್ರೆಗೆ ಸಂಸಾರ ಸಮೇತ ಊರವರೊಂದಿಗೆ ಹೋಗುವ ಮುಮಟಿ, ಮರಳಿ ಬರುವಾಗ ಯಾವುದೋ ಕನಸಿಗೆ ಜಾರುವವನಂತೆ ತಮಿಳುನಾಡಿನ ನಾಲ್ಕು ಚಕ್ರದ ಗಾಡಿ ಓಡಾಡಲಾಗದಷ್ಟು ಕಿರಿದಾದ ಓಣಿಗಳುಳ್ಳ ಸಣ್ಣ ಹಳ್ಳಿಯೊಂದರಲ್ಲಿ ಎರಡು ವರ್ಷಗಳ ಹಿಂದೆ ಮನೆಗೆ ಮರಳಿ ಬಾರದವನೊಬ್ಬನ ಮನೆಗೆ ತಾನೇ ಅವನು ಎನ್ನುವವನ ಹಾಗೆ ಹೋಗಿ ಒಂದೆರಡು ದಿನ ಕಳೆವ ಕತಾ ಎಳೆಯ ಸುತ್ತ ತೆಗೆದಿರುವ ಚಿತ್ರವೇ ‘ನಲ್ ಪಗಲ್ ನೇರತ್ತು ಮಯಕಂ’

ಮೇಲ್ನೋಟಕ್ಕೆ ಮುಮಟ್ಟಿಯ ಸುತ್ತಲೇ ತೆಗೆದಿರುವ ಚಿತ್ರವಾಗಿ ಕಂಡರೂ, ಇದು ತಮ್ಮ ತಮ್ಮ ಸರಳ ಜೀವನಗಳ ದೈನಂದಿನ ಲಯದಲ್ಲಿ ಮುಳುಗಿ ಹೋದ ಜನರ ಕತೆ ಮತ್ತು ಸಹ ಜೀವಿಗಳ ಬಗೆಗೆ ಮನುಷ್ಯ ತೋರಬಹುದಾದ ಆರ್ದತೆ, ಅಂತಕರಣಗಳ ಚಿತ್ರಣದ ಕತೆ.

ಯಾರೋ ಅನಾಮಿಕ ಇದ್ದಕಿದ್ದ ಹಾಗೆ ಮನೆಗೆ ಬಂದರೆ ಎದುರಾಗಬಹುದಾದ ಅಸಂಬದ್ದ ಪರಿಸ್ಥಿತಿ ಸೃಷ್ಟಿಸಿ ತನ್ಮೂಲಕ ನಿರ್ದೇಶಕ ಮನುಷ್ಯನ ಭಾವನೆಗಳ ಭಾಷೆ , ಧರ್ಮ, ದೇಶಕಾಲಗಳ ಮೀರಿದ ಯೂನಿವರಿಸಾಲಿಟಿಯನ್ನು ಹೇಳುತ್ತಾ ಹೋಗುವ ರೀತಿ ಅದ್ಬುತ.

ಅಬ್ಬರ ಗದ್ದಲಗಳೇ ಸಿನೆಮಾ ಎಂದಾಗುತ್ತಿರುವ ಈ ಕಾಲದಲ್ಲಿ, ಒಂದು ಬಿಂದುವಿನಿಂದ ಶುರುವಾಗಿ ಇನ್ನೊಂದು ಬಿಂದುವಿನಲಿ ಕೊನೆಯಾಗಲೇ ಬೇಕಾದ ಕತಾ ಹಂದರಗಳ ಜೇಡರಬಲೆಯಲಿ ಸಿಲುಕಿರುವ ಸಿನೆಮಾ ಮಾದ್ಯಮದ ಕತಾ ನಿರೂಪಣೆಯ ಮಿತಿಗಳನ್ನು ಮೀರಿ ನಿರ್ದೇಶಕನ ಧೈರ್ಯ ಮೆಚ್ಚಲೇ ಬೇಕು.

ಅಂದಹಾಗೆ, ಈಗಾಗಲೇ V L Narasimhamurthy ಮತ್ತು Sripad Bhat ಅವರು ಹೇಳಿದ ಹಾಗೆ ಇದು ಮಾರ್ಕ್ವೆಜನ ಮಕಾಂಡೋದ ಬೇಸಗೆಯ ಮದ್ಯಾಹ್ನದ ಕಿರುನಿದ್ದೆಯಲ್ಲಿ (ಸಿನೆಮಾ ಹೆಸರಿನ ಅರ್ಥ ಕೂಡ ಅದೇ) ಜರುಗುವ ಸ್ವಪ್ನಲೋಕವೇ ಹೌದು .

ಸಿನೆಮಾ ತಿಯೇಟರಿನಲಿ ನೋಡಿ ಎರಡು ಮೂರುದಿನ ಅದೇ ಗುಂಗಿನಲ್ಲಿದ್ದೆನಾದರೂ, ಏನೂ ಬರೆಯಲಾಗಿರಲಿಲ್ಲ

ಈಗ ನೆಟ್‌ಫ್ಲಿಕ್ಸ್‌ನಲ್ಲಿದೆ , ಒಮ್ಮೆ ನೋಡಿ.

‍ಲೇಖಕರು avadhi

March 2, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: