ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’

ಪತ್ರಕರ್ತ ಮಂಜುನಾಥ್ ಚಾಂದ್ ಸಾಹಿತ್ಯ ಲೋಕದಲ್ಲಿಯೂ ಗಟ್ಟಿ ಹೆಜ್ಜೆಯೂರಿದ್ದಾರೆ

ಇವರ ಇತ್ತೀಚಿನ ಕೃತಿ ‘ಕಾಡ ಸೆರಗಿನ ಸೂಡಿ’

ಈ ಕಾದಂಬರಿ ಬೆಳಕು ಕಂಡ ಕೆಲವೇ ದಿನಗಳಲ್ಲಿ ಎರಡನೆಯ ಮುದ್ರಣಕ್ಕೆ ಸಿದ್ಧವಾಗಿದೆ.

ಈ ಕುರಿತು ‘ಅವಧಿ’ ನಡೆಸಿದ ಫಟಾ ಪಟ್ ಸಂದರ್ಶನ ಇಲ್ಲಿದೆ.

‘ಕಾಡ ಸೆರಗಿನ ಸೂಡಿ’ ಸೂಡಿ ಹಿಡಿಯಲು ಯಾವಾಗ ಹೋಗಿದ್ರಿ ?
 ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೂಡಿ ಹಿಡಿದು ಮೂರೂವರೆ ತಿಂಗಳಲ್ಲಿ ಅದನ್ನ ಬೆಳಗಿದ್ದೆ.

ಮಂಜುನಾಥ್ ಗೆ ‘ಚಾಂದ್’ ಕೈ ಕುಲುಕಿದ್ದು ಯಾವಾಗ ?
 ಬಹುಶಃ ಹುಟ್ಟುವಾಗ್ಲೆ. ನನ್ನ ತಂದೆ ರಂಗಭೂಮಿ ಯಕ್ಷಗಾನ ಕಲಾವಿದರಾಗಿದ್ದರು. ಅವರಿಗೆ ಆ ಹೆಸರು ಬಂದದ್ದು ನನಗೂ ಮುಂದುವರೆದಿದೆ.

ಕಾಡ ಸೆರಗಿನ ಸೂಡಿ. ಮುಂದೆ ‘ನಾಡ ಒಡಲ ಮೋಡಿ’ ಬರಬಹುದಾ ?
 ಇಲ್ಲ. ಬೇರೆ ವಿಷಯಗಳು ಇವೆ.

ಮಂಜುನಾಥ ಕೈಲಾಸ ಬಿಟ್ಟು ಇಲ್ಲೇನ್ ಮಾಡ್ತಿದಾರೆ ?
 ಮಂಜುನಾಥ ಕೈಲಾಸ ಸೇರಲೇ ಇಲ್ಲ. ಮೊದಲಿನಿಂದಲೂ ಧರೆಯಲ್ಲಿಯೇ ಇದ್ದವನು.

ಮುಂದಿನ ಪಯಣ ?
 ನಾನೊಬ್ಬ ಅಕ್ಷರ ಪ್ರೇಮಿ. ಈ ಅಕ್ಷರ ಪ್ರೇಮದೊಳಗೆ ಮುಂದುವರೆಯುವುದು.

‍ಲೇಖಕರು avadhi

21 August, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading