ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಚದ ಕಾಲುಗಳಿಗೆ ಸಣ್ಣಗೆ ಬಿಸಿಯೇರುತ್ತಿತ್ತು..

raja m b

ರಾಜಾ ಎಂ ಬಿ

1

ಮನೆತನಕ ಬಂದವರನ್ನ ಅಪಮಾನಿಸಿ
ಕಳಿಸಬಾರದು. ಗೋರಿಗಳು ಇವತ್ತಿನವರೆಗೂ ಒಬ್ಬನೇ
ಒಬ್ಬನನ್ನ ವಾಪಾಸು ಕಳಿಸಿದ ಉದಾಹರಣೆಗಳಿವೆಯಾ??

head of roses

 

 

 

 

2

linesಜೋಡಿಗಳ ಸಲ್ಲಾಪದ ರೀತಿಗೆ
ಮಂಚದ ಕಾಲುಗಳಿಗೆ ಸಣ್ಣಗೆ
ಬಿಸಿಯೇರುತ್ತಿತ್ತು.

head of roses

 

 

 

 

 

3

ಅವಳ ಬೆರಳಸಂದುಗಳಲ್ಲಿ
ಬೆಸೆದುಕೊಂಡೆ.
ಹೊಸದೊಂದು ಲೋಕ ತೆರೆದುಕೊಂಡಿತು.

head of roses

 

 

 

 

 

4

ದೇವರು ಕಲ್ಲಾಗಿದ್ದೇ ಸರಿ.ಕೋಮುಗಲಭೆಗಳ
ಕಲ್ಲೇಟಿಗೆ ಗಾಯಗೊಂಡಿದ್ದರೆ, ರಕ್ತದ
ಗುಂಪನ್ನ ಎಲ್ಲಿ ಅಂತ ಹುಡುಕೋದು.

head of roses

 

 

 

 

 

5

ಹಳಸಿದ್ದನ್ನೇ ಕವಿ ಪದೇ ಪದೇ ಉಣಿಸುತ್ತಿದ್ದಾನೆಂದರೆ
ಆತನ ‘ಕವಿತ್ವ’ ಸನ್ಮಾನದ ಶಾಲುಗಳಲ್ಲಿ
ಗಡದ್ದಾಗಿ ನಿದ್ರಿಸುತ್ತಿರಬಹುದು.

head of roses

 

 

 

 

 

 

6

ಕಾಮಹಿನ್ನಲೆಯ ಪ್ರೇಮ ಕಾಗದದ
ದೋಣಿ ಇದ್ದಂತೆ. ಮೈಯೊಳಗಿನ ಬಿಸಿ
ಇಳಿದ್ದಿದ್ದೇ ತಡ ಮುಂದಕ್ಕೆ ಚಲಿಸದು.

head of roses

 

 

 

 

 

 

7

ಹಳೆಯ ಪ್ರೇಮಪತ್ರಗಳನ್ನ ಹುಡುಕುತ್ತಿರುವೆ,
ಪುರಾತನ ಪಳಿಯುಳಿಕೆಗಳ
‘ಶೋಧಕ’ ಎಂದು ಹೀಯಾಳಿಸುತ್ತಾಳೆ..

‍ಲೇಖಕರು admin

10 December, 2015

3 Comments

  1. Paramesh

    Super Sir………..

  2. ಮುಗಿಯದ ಮೌನ- GKN

    wonderull,,,,,,,, bhavanaatmaka kavitegalu,

  3. ನೂರುಲ್ಲಾ ತ್ಯಾಮಗೊಂಡ್ಲು

    ಚೆಂದವಾಗಿವೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading