
ಟಿ ಕೆ ತ್ಯಾಗರಾಜ್
ಅದೇಕೋ ಕೆಲವು ಪತ್ರಿಕೆಗಳು ಮಂಗಳಮುಖಿಯರು ಎಂಬ ಶಬ್ದ ಬಳಕೆಗೆ ಇನ್ನೂ ಕೊನೇ ನಮಸ್ಕಾರ ಹಾಕಿಲ್ಲ.
ಈ ಬಳಕೆ ಕೂಡ ಮೌಢ್ಯವನ್ನು ಪೋಷಿಸುತ್ತದೆ. ಈ ಹಿಂದೆ ದಿನಪತ್ರಿಕೆಯೊಂದರ ಸಂಪಾದಕರಾಗಿದ್ದ ವ್ಯಕ್ತಿ ತನ್ನ ಮೌಢ್ಯಕ್ಕೆ ತಕ್ಕಂತೆ ಈ ಶಬ್ದದ ಬಳಕೆ ಆರಂಭಿಸಿದ್ದರು.
ಮಂಗಳಮುಖಿ ಎಂದು ಕರೆಯುವ ಸಮುದಾಯಕ್ಕೆ ಸೇರಿದವರ ಮುಖ ನೋಡಿದರೆ ಒಳ್ಳೆಯದಾಗುತ್ತದೆ, ಅವರನ್ನು ಕರೆಸಿ ಅಂಗಡಿಯಲ್ಲಿ ಪೂಜೆ ಮಾಡಿಸಿದರೆ ಚೆನ್ನಾಗಿ ವ್ಯಾಪಾರವಾಗುತ್ತದೆ ಎಂಬ ಮೂಢ ನಂಬಿಕೆ ಇಂಥ ಬಳಕೆಗೆ ಮುಖ್ಯ ಕಾರಣವಾಗಿದೆ.
ಆದರೆ ಸುಪ್ರೀಂ ಕೋರ್ಟ್ ಈ ಸಮುದಾಯವನ್ನು “ತೃತೀಯ ಲಿಂಗಿ”ಗಳೆಂದು ಕರೆದಿರುವುದು ಹೆಚ್ಚು ಸೂಕ್ತ. ಈ ಶಬ್ದವನ್ನು ಮಾಧ್ಯಮಗಳು ಬಳಸುವುದು ಉಚಿತ ಅನ್ನಿಸುತ್ತಿದೆ.






0 Comments