ಪೊಟ್ಟಣದ ಮಂಗ
-ಮಾಲಾ ಮ ಅಕ್ಕಿಶೆಟ್ಟಿ
ದೇವರ ದರ್ಶನಕ್ಕೆಂದು
ಹತ್ತಿದೆವು ಗುಡ್ಡ ಅಂದು
ಸುತ್ತಲೂ ಹಚ್ಚ ಹಸಿರು
ಅಲ್ಲಲ್ಲಿ ಮಂಗಗಳ ಕಾರುಬಾರು
ದರ್ಶನ ಪಡೆದು ಇಳಿಯಲು
ತಿಂಡಿಪೊಟ್ಟಣ ಅಂಗಡಿಯಲಿ ಪಡೆದು
ತೆಗೆದು ತಿನ್ನಬೇಕು ಒಂದೊಂದು
ಆಸ್ವಾದಿಸಬೇಕು ಪ್ರತಿಯೊಂದು
ಉಲ್ಲಾಸದಿ ತಿನ್ನುವ ಚಿಂಟಿ
ತನಗೂ ಬೇಕೆಂದಿತು ಕಪಿ
ಗಪ್ಪನೆ ಪೊಟ್ಟಣ ಹಿಡಿಯಿತು ಹಾರಿ
ಗಾಬರಿಗೊಂಡ ಏನೂ ತಿಳಿಯದ ಪೋರಿ
ಪೊಟ್ಟಣ ಬಿಟ್ಟು ದೂರ ಸರಿದು
ಚೀರಿ ಚೀರಿ ಎಲ್ಲರ ಕರೆದು
ಹೆದರಿಸಿ ದೂರ ಓಡಿಸಿದರು ಜನ
ಶಾಂತವಾಯಿತು ಚಿಂಟಿಯ ಮನ
ಹೆದರಿಸಿದರೂ ಓಡಿಸಿದರೂ
ಪೊಟ್ಟಣ ಮಂಗನ ಕೈಯಲ್ಲಿ
ಆಗಲೇ ತೆಗೆದ ರುಚಿಕರ
ತಿಂಡಿಗಳು ಅಗಲವಾದ ಬಾಯಲ್ಲಿ






0 Comments