ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭೂಮಿಯ ಕೆಳಗೂ ಮಳೆ..

ಎಲ್ ಸಿ ನಾಗರಾಜ್

‘water womb ‘ ಎಂಬುದೊಂದು ಪರಿಕಲ್ಪನೆಯಿದೆ – ಇದನ್ನ ಜಲಗರ್ಭ ಅಥವಾ ಜಲಮಂಡಲ ಎಂಬುದಾಗಿ ತಿಳಿಯಬಹುದು.

ನೈಸರ್ಗಿಕ ಬೇಸಾಯದ ಬಗ್ಗೆ ಕಾವ್ಯಮಯ ದರ್ಶನವನ್ನ ಕಟ್ಟಿರುವ ಜಪಾನಿ ಝೆನ್ ಮಾಸ್ಟರ್ ಮೊಸಾನೊಬು ಫುಕುವೋಕ ಅವರ ‘ Natural way of farming ‘ ಪುಸ್ತಕದಲ್ಲಿರುವ ಅಧ್ಯಾಯವೊಂದರ ಸಾಲುಗಳು ‘ Rain falls not only from above but it falls from below as well ‘ ಎಂಬ ವಾಕ್ಯ ನನ್ನ ತುಂಬಾ ಯೋಚಿಸುವಂತೆ ಮತ್ತು ಅದನ್ನ ಹುಡುಕುವಂತೆ ಮಾಡಿತು;

ನನ್ನ ಗೆಳೆಯರೊಬ್ಬರು ಈ ವಾಕ್ಯದಲ್ಲಿರಬಹುದಾದ ಸಾಮಾಜಿಕ ಆಯಾಮಗಳನ್ನ ಹುಡುಕುತ್ತ ‘ಬಸವಣ್ಣನ ಕಾಯಕ ತತ್ವವೂ ಹಿಂಗೇ ಅಲ್ವಾ !? ‘ ಎಂದಿದ್ದರು

ಈ ವಾಕ್ಯದ ಪರಿಸರ ಆಯಾಮದ ಅರ್ಥ ಮಾತ್ರ ತಡಕಾಡುತ್ತಿದ್ದ ನನಗೆ ಅದೂ ಸರಿ ಎನಿಸಿತ್ತು.

ಒಬ್ಬ ಝೆನ್ ಮಾಸ್ಟರ್ ಏಕಾರ್ಥದಲ್ಲಿ ಏನಾದರೂ ಹೇಳಿರುತ್ತಾನ ?

ಮಾಧ್ಯಮಿಕ ಶಾಲೆಯಲ್ಲಿರುವಾಗ ಪುಸ್ತಕ , ಜಾಮೆಟ್ರಿ ಬಾಕ್ಸ್ ಇವುಗಳನ್ನೆಲ್ಲ ಒಂದು ಮಂದಲಿಕೆಯ ಮೇಲೆ ಹರವಿಕೊಂಡು ಮೇಷ್ಟರು ಕೊಟ್ಟ assignment ಗಳನ್ನೆಲ್ಲ ಮುಗಿಸಿ ಮಧ್ಯಾಹ್ನ 3 ರ ವೇಳೆಗೆ ಮಂದಲಿಕೆ ಸುತ್ತುವಾಗ ಅಲ್ಲಿ ಸಣ್ಣ ಹಿಮಮಣಿಗಳಂತ ಜಲಬಿಂದುಗಳ ಸಂಚಯವಾಗಿರುತ್ತಿತ್ತು .

ಫುಕುವೋಕನ ‘rain falls from below as well’ ಅಂದರೆ ಇದೇನ? ಈ ಪರಿಕಲ್ಪನೆಯ ಸುಳಿವಿಗಾಗಿ ಬಾಲ್ಯಕಾಲದ ಈ ಮಂದಲಿಕೆ ನೆನಪಾಯಿತು .

ಚಳಿಗಾಲ ಕಳೆದು ವಾತಾವರಣದ ಉಷ್ಣತೆ ಏರಿಕೆಯಾಗುತ್ತ ಹೋದಂತೆ ಸಿಮೆಂಟ್ ನೆಲದ ಮೇಲೆ ಹಾಸಿದ ಮಂದಲಿಕೆಯ ಕೆಳಗೆ ಸಂಚಯವಾಗುವ ಪಸೆಯ ಪ್ರಮಾಣ ಕೂಡ ಹೆಚ್ಚಾಗುತ್ತದೆ

ಭೂಮಿಯ sub surface ಎಂದರೆ ಶಿಥಿಲಗೊಂಡ ಶಿಲಾಪದರ ಮತ್ತು ಮಣ್ಣಿನ ಸಂಗಮ ವಲಯದ ತೇವ ಆವಿಯಾಗಿ ಮಣ್ಣಿನ ಹಿರಿರಂಧ್ರಗಳ( gravitational pore spaces ) ಮೂಲಕ ಹೊರಬಂದು ಮಂದಲಿಕೆಯ ಕೆಳಗೆ ಸಂಚಯವಾಗುತ್ತದೆ.

ಗಿಡಗಳ ಪಾತಿಗಳಲ್ಲಿ ಯಾವ ಕಳೆಯೂ ಇಲ್ಲದಂತೆ ಮಣ್ಣನ್ನ ಬೆತ್ತಲು ಮಾಡಿದಾಗ ಈ ನೀರಾವಿ ವಾತಾವರಣಕ್ಕೆ ತಪ್ಪಿಸಿಕೊಳ್ಳುತ್ತದೆ ; ಗಿಡದ ಪಾತಿಗೆ ಮಂದಲಿಕೆ ಹಾಸಿದಂತೆ ಕಳೆಗಳಿದ್ದರೆ ಅಥವಾ ಆ ಕಳೆಗಳನ್ನ ಕಿತ್ತು ಅಲ್ಲೇ ಮಂದಲಿಕೆಯಂತೆ ಹಾಸಿದರೆ ಭೂಮಿಯ sub surface ನಿಂದ ಬರುವ ನೀರಾವಿ ಈ ಮಂದಲಿಕೆಯ ಕೆಳಗೆ ಸಂಚಯವಾಗಿ ಮಣ್ಣಿನ ಜೈವಿಕ ಚಟುವಟಿಕೆಯನ್ನ ಜೀವಂತವಾಗಿಡುತ್ತದೆ ; ಮಣ್ಣು ಮತ್ತು ಮಂದಲಿಕೆಯ ನಡುವಿನ ನೆಂಟಸ್ತಿಕೆಯ ಅಂಟು (Viscocity) ಮಣ್ಣಿನ ಪರಿಮಳವನ್ನ ಕೂಡ ಹೆಚ್ಚಿಸುತ್ತದೆ.

ಧೃವಫಸಲು ಅಥವಾ ಶಾಶ್ವತ ಕೃಷಿ ಕುರಿತಂತೆ ಸುದೀರ್ಘ ಅಧ್ಯಯನ ಮಾಡಿರುವ ಬಿಲ್ ಮೊಲಿಸನ್ ಗಿಡಗಳಿಗೆ ಯಾವಾಗ ಎಷ್ಟು ನೀರು ಕೊಡಬೇಕು ಅಂತಾ ನಿರ್ಧರಿಸಲು ಆಳವಾದ ಬೇರುಗಳುಳ್ಳ ಗಿಡಗಳ ಬುಡದಲ್ಲಿ ತುಂಡುಬೇರಿನ ಸಸ್ಯಗಳಿರಬೇಕು ಅಂತಾ ವಾದಿಸಿದ್ದಾರೆ ; ಅದು ಹೀಗೆ

ಆಳ ಬೇರಿನ ಸಸ್ಯದ ಬುಡದಲ್ಲಿರುವ ಸಣ್ಣ ಬೇರಿನ ಸಸ್ಯಗಳು ಮಣ್ಣಿನ ತೇವಾಂಶ ಪ್ರಮಾಣದ ಸೂಚ್ಯಂಕಗಳು; ಅಡಿಕೆ ಮರದ ಬುಡದಲ್ಲಿರುವ ಒಂದು ಹುರುಳಿ ಸಸ್ಯ ಬಾಡಿದರೆ ಅದು ಮಣ್ಣನಲ್ಲಿ ತೇವಾಂಶ ಕೊರತೆ ಉಂಟಾಗಿರುವ ಸೂಚನೆ ; ಆಗ ನೀರು ಕೊಡಬೇಕು.

ತರುಣ ರೈತರು ಅಡಿಕೆ ಮರಗಳಿಗೆ ನೀರನ್ನ ತುಂಬುಗಟ್ಟುವುದನ್ನ ನೋಡಿ ಇದನ್ನ ಬರೆಯಬೇಕಾಯಿತು.

ನೀರನ್ನ ತುಂಬುಗಟ್ಟಿದಾಗ ಭೂಮಿಯ sub surface ನಲ್ಲಿರುವ ಸೋಡಿಯಂ ಕ್ಲೋರೈಡ್ ನೀರಿನೊಂದಿಗೆ ರಾಸಾಯನಿಕ ವಿನಿಮಯ ಕ್ರಿಯೆ ನಡೆದು ( Ion exchange ) ಸೋಡಿಯಂ ಅಣುಗಳು ಮೇಲ್ ಮಣ್ಣಿನಲ್ಲಿ ಸಂಚಯವಾಗುತ್ತವೆ ; ಇದರಿಂದ ಫಲವತ್ತಾದ ಮಣ್ಣು ಕ್ಷಾರೀಯವಾಗಿ ಪರಿವರ್ತನೆಯಾಗುತ್ತದೆ ;
ಕೆಸರುಗದ್ದೆ ಮಾಡಿ ಬತ್ತ ಬೆಳೆಯುವ ಭೂಮಿಯಲ್ಲಿ ಕೂಡ ಕ್ಷಾರೀಯತೆ ( alkalinity ) ಉಂಟಾಗುವುದು ಹೀಗೆ

ಆದ್ದರಿಂದ ಹನಿ ನೀರಾವರಿ ( micro irrigation ) ಸೂಕ್ತ

ಭೂಮಿಯ ಕೆಳಗಿನಿಂದ ಹೊಮ್ಮುವ ಮಳೆಯ ಬಗ್ಗೆಯೂ ಗಮನ ಕೊಡಿ

‍ಲೇಖಕರು avadhi

21 March, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading