ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭುವನೇಶ್ವರಿ ಹೆಗಡೆ, ಬೇಂದ್ರೆ ಕ್ಷಮೆ ಕೋರಿ..

ಇಷ್ಟು ಬ್ಯಾಗ್ ಯಾಕ್ ಬಂದನವ್ವ ಭುವನೇಶ್ವರಿ ಹೆಗಡೆ   ಇಷ್ಟು ಬ್ಯಾಗ್ ಯಾಕ ಬಂದಾನವ್ವ ಆಪ್ಹೀಸಿಗೋದಾಂವಾ ಬರೋ ಮುಂದ ಲೇಟ ಆಗ್ತೈತಿ ಅಂದು ನಡೆದ್ದಾಂವಾ ಅಟ್ಟ ಹತ್ತಿ ಸ್ವಚ್ಚ ಮಾಡಲು ಬರ್ತೇನಂದಂವಾ ಗುಟ್ಟಲ್ ಗೆಳೆಯನ ಮನೆಗೆ ಹೋಗಿ ಕೈಯಾ ಕೊಟ್ಟಾಂವಾ   ಮಾವಾಗ ಮೆಲ್ಲಗ ಬೆಣ್ಣೀ ಹಚ್ಚಿ ಕಾರು ಪಡದಂವಾ ಅತ್ತಿಯ ಒಲಿಸಿ ಕುತ್ತಿಗೆ ತನಕ ತಿಂದು ತೇಗಾಂವಾ ಟವಲ್ಲು ಸೋಪು ಕೈ ಮ್ಯಾಲಿಟ್ರೆ ಸ್ನಾನಕ ಹೋಗಾಂವಾ ಬಚ್ಚಲು ಮನೇಲಿ ಕೆಟ್ಟ ದನಿಲೆ ಹಾಡ ಹಾಡಾಂವಾ   ಉಪ್ಪಿಟ ಮಾಡಿ ಕೊಟ್ರೆ ಮಾರಿ ಸೊಟ್ಟಗ ಮಾಡಾಂವಾ ತಾಳಿ ಪಟ್ಟು ದಂ ರೂಟಂದ್ರೆ ಪಟ್ಟಾಗಿ ಹೊಡೆಯಾಂವಾ ಮಾತಿನ ಮಲ್ಲ ತಿಂಡಿಪೋತ ಕೆಲಸಕ ಬಾರದಂವಾ ಚಕ್ಕುಲಿ ಉಂಡೆ ಜಾಡು ಹಿಡಿದು ಜಾಡಿ ಹುಡುಕಾಂವಾ   ಅನಿತಾ ವನಿತಾ ಲಲಿತ ಗೀತಾ ನೋಡ್ರೆ ನನ್ನವ್ವ ಆರಕ್ಕೆ ಬರೋವ್ನು ಮೂರು ಗಂಟೆಗೆ ವಕ್ಕರಿಸ್ಯಾನ್ರವ್ವ. ಪ್ಲೇಟಾಗ ಚಿಪ್ಸು ಕೈಯಾಗ ಕೋಕು ಟೀವ್ಯಾಗ ಕ್ರಿಕೆಟ್ಟವ್ವಾ ನಂಗಿನ್ನಿವತ್ತು ಸೀರಿಯಲ್ಲ್ಯಾವ್ದು ನೋಡಾಂಗಿಲ್ರವ್ವಾ..        ]]>

‍ಲೇಖಕರು G

9 January, 2012

10 Comments

  1. D.RAVIVARMA

    tumba chennagideri. namaskara.
    ravi varma hospet

  2. anupavanje

    ahhhhaaaa…………ಸೂಪರ್ ಕ್ಯೂಟ್ ಆಗಿದೆ….:)))))))))))))))

  3. Ahalya Ballal

    ಗೃಹಿಣಿ ಗೀತೆ :):)

  4. B.Harishchandra Bhat

    Chennaagi Sedu theriskolli.Eega avaan barithaane joke !

  5. Tejaswini Hegde

    ಭುವನಕ್ಕ….
    ಸಕತ್… 🙂 ಅದೆಷ್ಟ್‌ಸಲ ಅದೆಷ್ಟ್‌ ಹೆಣ್ಮಕ್ಳು ಹೀಂಗೆ ಹಾಡ್ಕೊಂಡಿದ್ದಾವೋ ಏನೋ… :):):-p

  6. ಟೀನಾ ಶಶಿಕಾಂತ್ (@tinashashikanth)

    ಕೆಟ್ ಕೆಟ್ನಾಗಿ ನಗಾಡ್ಕೊಂಡ್ ಕೂತಿದೀನಿ!! ಹಹಹಹ!!!! ತೇಜಸ್ವಿನಿ ಹೆಗಡೆ ಹೇಳಿದ್ದು ನಿಜವೇ ಕಣ್ರಿ!! ಭುವನೇಶ್ವರಿ ಹೆಗಡೆಯವರಿಗೆ – ಸುಸ್ತಾಗೋವಷ್ಟು ನಗ್ಸಿದ್ದಕ್ಕೆ ಥ್ಯಾಂಕ್ಸ್ ಮ್ಯಾಡಮ್!!!

  7. Anitha Naresh Manchi

    ಭುವನಂ ಮಧುರಂ .. 🙂

  8. Sharadhi

    ನಂಗಿನ್ನಿವತ್ತು ಸೀರಿಯಲ್ಲ್ಯಾವ್ದು ನೋಡಾಂಗಿಲ್ರವ್ವಾ..- oh idu nimma samasye!, arthavaayithu bidi!

  9. savitri

    ಬೇಂದ್ರೆ ತಾತಾ ನಗ್ತಾ ಇದ್ರು… ನೋಡೀ‌ರೇನವ್ವಾ??!!!:-)

  10. prakash.b. jalahalli

    nimma desi datiy kavite tumba chennagide meadm.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading