'ಭಿನ್ನಾಭಿಪ್ರಾಯ ವೈಯಕ್ತಿಕ ನಿಂದೆಯ ಮಟ್ಟಿಗೆ ಇಳಿಯಬಾರದು' – ಸಿಎನ್ನಾರ್

ನಿನ್ನೆ ಪುರೂರವ ಅವರು ಬರೆದ ’ಇಷ್ಟಕ್ಕೂ ಕುಂವೀ ಹೇಳಿದ್ದೇನು’ ಎನ್ನುವ ಬರಹಕ್ಕೆ ಸಿ ಎನ್ ಆರ್ ಪ್ರತಿಕ್ರಯಿಸಿದ್ದಾರೆ. ಅದು ಹೀಗಿದೆ…

ಸಿ ಎನ್ ರಾಮಚಂದ್ರನ್

ಪ್ರಿಯ ಪುರೂರವ ಅವರಿಗೆ:
ಕುಂವೀ ಅವರು ಹೇಳಿದ್ದೇನು ಎಂಬುದನ್ನು ಮತ್ತು ಅವರ ಮಾತಿನ ಹಿನ್ನೆಲೆಯನ್ನು ನೀವು ವಿವರಿಸಿದ್ದೀರಿ; ಧನ್ಯವಾದಗಳು. ಈ ವಿಷಯದ ಬಗ್ಗೆ ನನ್ನ ನಿಲುವು ಇದು:
ಕುಂವೀ ಹೇಳಿದ ಮೊದಲ ಭಾಗಕ್ಕೆ –ಎಂದರೆ ’ಇಂದು ಜ್ಞಾನಪೀಠ ಪ್ರಶಸ್ತಿ ವಿಜೇತರ ವೈಭವೀಕರಣ ನಡೆಯುತ್ತಿದೆ; ಇದು ಅಷ್ಟೇನೂ ಉಚಿತವಲ್ಲ’ ಎಂಬ ಮಾತಿಗೆ — ನನ್ನ ಒಪ್ಪಿಗೆಯಿದೆ. ರಾಷ್ಟ್ರೀಯ-ಸ್ಥಳೀಯ ಪ್ರಶಸ್ತಿ ಪಡೆದವರು, ಪಡೆಯದವರು ನೂರಾರು ಮಂದಿ ಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರೆ; ಆ ಕಾರಣದಿಂದ ಎಲ್ಲೆಡೆಯೂ ಕೇವಲ ಎಂಟು ಜನರ ಭಾವಚಿತ್ರಗಳನ್ನು ಪ್ರದರ್ಶಿಸಿ, ಅವರ ಸಾಧನೆಗಳನ್ನು ಕೀರ್ತಿಸುವುದು ಪ್ರಬುದ್ಧ ಸಮಾಜದ ಲಕ್ಷಣವಲ್ಲ.

ಕುತೂಹಲದ ಸಂಗತಿಯೆಂದರೆ, ಈ ಮಾತನ್ನು ಸ್ವತಃ ಕಾರ್ನಾಡರೇ ಹೇಳಿದ್ದಾರೆ, ಹೇಳುತ್ತಾರೆ. ಆರು ತಿಂಗಳ ಹಿಂದೆ (?) ಕ. ಸಾ. ಪರಿಷತ್ತು ಒಂದು ಕಾರ್ಯಕ್ರಮವನ್ನು ಆಯೋಜಿಸಿ, ಅದರ ಭಾಗವಾಗಿ ಈಗಿರುವ ಮೂವರು ಜ್ಞಾ.ಪ್ರ. ವಿಜೇತರನ್ನು ಸನ್ಮಾನಿಸಲು ಉದ್ದೇಶಿಸಿದ್ದಾಗ, ಕಾರ್ನಾಡರು ಅದರಲ್ಲಿ ಭಾಗವಹಿಸಲು ಒಪ್ಪಲಿಲ್ಲ. ನಾನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದರಿಂದ ಅವರ ಅನುಪಸ್ಥಿತಿಯ ಬಗ್ಗೆ ಕೇಳಿದಾಗ ಅವರು ಹೇಳಿದ್ದುದು ಇದು: “ಜ್ಞಾನಪೀಠ ಒಂದು private organisation; ಆ ಸಂಸ್ಥೆ ಕೊಡುವ ಪ್ರಶಸ್ತಿಯೇ ಹಿರಿಮೆಯ ಮಾನದಂಡವಾಗಬಾರದು. ಆ ಪ್ರಶಸ್ತಿ ಸಿಗದ ನೂರಾರು ಮಹನೀಯರು ಇಲ್ಲೇನು?”
ಇನ್ನು, ಮುಂದುವರೆದು ಕುಂವೀ ಹೇಳಿದರೆಂದು ಪತ್ರಿಕೆಗಳಲ್ಲಿ ಬಂದ
’ಇವರು ಲಾಬಿ ಮಾಡಿ ಪ್ರಶಸ್ತಿ ಗಳಿಸಿದ್ದಾರೆ’ ಇತ್ಯಾದಿ ವೈಯಕ್ತಿಕ ನಿಂದೆ ಕುಂವೀ ಅವರಿಂದ ಬಂದುದು ದುರದೃಷ್ಟಕರ. ಸಾಹಿತ್ಯದ ಬಗ್ಗೆ ಭಿನ್ನಾಭಿಪ್ರಾಯಗಳು ಇರುವುದು ಸಹಜ; ಆದರೆ, ಆ ಭಿನ್ನಾಭಿಪ್ರಾಯ ವೈಯಕ್ತಿಕ ನಿಂದೆಯ ಮಟ್ಟಿಗೆ ಇಳಿಯಬಾರದು. ಆ ಸಂದರ್ಭದ ಆವೇಗದಲ್ಲಿ ಕುಂವೀಯವರು ಮಾಡಿರಬಹುದಾದ ಈ ವೈಯಕ್ತಿಕ ನಿಂದೆಗಾಗಿ ಅವರು ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದರೆ, ಅದು ಅವರ ಹಿರಿಮೆಗೂ ಸಾಕ್ಷಿಯಾಗುತ್ತದೆ. ಇದರ ಬಗ್ಗೆ ಅವರು ಯೋಚಿಸುವುದು ಸೂಕ್ತ ಎಂದು ನನಗೆ ತೋರುತ್ತದೆ.
ಕುಂವೀ ಅವರ ಅಭಿಮಾನಿ,
ರಾಮಚಂದ್ರನ್
 

‍ಲೇಖಕರು G

February 12, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. nagraj.harapanahalli

    ಕಾರ್ನಾಡರನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಜೊತೆ ಎರಡು ತಾಸು ತಲೆದಂಡ, ತುಘಲಕ್ ನಾಟಕ ಕುರಿತು ಧಾರವಾಡದ ಮನೋಹರ ಗ್ರಂಥಮಾಲೆಯ ಕಚೇರಿಯಲ್ಲಿ ಕುಳಿತು ಚರ್ಚಿಸಿದ್ದೆ. ಕಾರ್ನಾಡರು ಈ ಸಮಾಜದ ಪಲ್ಲಟಗಳಿಗೆ ಪ್ರತಿಕ್ರಿಯಿಸಿದ್ದನ್ನು ನಾವು ನೋಡಿದ್ದೇವೆ. ಹಾಗಾಗಿ ಕುಂವೀ ಆವೇಶದಲ್ಲಿ ಮಾತನಾಡಬಾರದಿತ್ತು. ರಾಮಚಂದ್ರನ್ ಸರ್ ….ಎಂಥ ತೂಕದ ಮಾತು ಆಡಿದ್ದೀರಿ….ನಿಜಕ್ಕೂ ಸಂತೋಷವಾಗುತ್ತಿದೆ.

    ಪ್ರತಿಕ್ರಿಯೆ
  2. srinivasamurthy

    ಕರ್ಲಮಂಗಲಂ ಶ್ರೀಕಂಟಯ್ಯನವರ ಸಾದನೆಗಳನ್ನು ಗುರುತಿಸಿ ಅವರ ನೆನಪಿಗಾಗಿ ಕಲ್ಕತ್ತೆಯ ಶಾಂತಿಪ್ರಸಾದ್ ಜೈನ್ ಜ್ಞಾನಪೀಟ ಪ್ರಶಸ್ತಿಯನ್ನು ಆರಂಬಿಸಿದರು. ಈ ಪ್ರಶಸ್ತಿಯನ್ನು ಪಡೆದ ಹೆಚ್ಚಿನವರು ಕರ್ಲಮಂಗಲಂ ಶ್ರೀಕಂಟಯ್ಯನವರ ಬರಹದ ಕುರಿತು ಮಾಡಿದ ಕೆಲಸಗಳನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದರೆ? ಇಲ್ಲ.
    ನಾನು 1- B.A ಹಂತದ ತರಗತಿಗಳಲ್ಲಿ ಒಂದು ದಿನವೂ ಈ ಮಹಾತ್ಮರ ಬರಹದ ಕುರಿತು ಅರಿತುಕೊಳ್ಳಲು ಆಗಿಯೇ ಇಲ್ಲ. ಹೀಗಿರುವಾಗ ಅಂತಹ ಮಹಾನೀಯರ ಸಾದನೆಗಳನ್ನೇ ಹಿಂದಕ್ಕೆ ತಳ್ಳಿದವರನ್ನು, ಈಗಲೂ ಹೆಚ್ಚು ಹಲವು ನೆಲೆಗಳಲ್ಲಿ ತೊಡಗಿಕೊಂಡಿರುವ ಸಾಹಿತಿಗಳನ್ನು ಪರಿಗಣಿಸದವರನ್ನು ಹೀಗೆ ಕುಂವೀಯವರು ಹೇಳಿದರಲ್ಲಿ ತಪ್ಪು ಇಲ್ಲವೇ ಇಲ್ಲ ಮತ್ತೂ ಅವರು ಪ್ರಕಟಿಸಿದ ನಿಲುವು ಒಂದು ಮಾದರಿಗೆ ಮಾತ್ರ ಸೀಮಿತವಾಗಿರುವುದು. ಅವರು ಹೇಳಿರೋದನ್ನು ವಯಕ್ತಿಕವೆಂದು ಗುರುತಿಸುವುದು ಸರಿಯಲ್ಲ.

    ಪ್ರತಿಕ್ರಿಯೆ
  3. Dr.S.B.jogur

    yaare aadida maatugalu ella kaalakkoo salabekendenoo illa.. haageye baravanige koodaa. kumvi maatanaadiruva bagge saarvajanikavaagi kshme kelabennuvudaralliye ondu bageya ottaddavide.prajaasatteyalli nambugeyiruvavaru abhivyakti svaatamtryavannu saarvajanika kshamege odduvudu eshtu sari..?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: