ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭಾಜಪ ಇನ್ಯಾಕಾ?

ನಾಗೇಶ ಹೆಗಡೆ

ಇದು ಜನೌಷಧ ವಿಷಯ. ಇದರಲ್ಲಿ ರಾಜಕೀಯ ಬರಲೇಬಾರದಿತ್ತು. ಕಂಪನಿಗಳ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ದುಬಾರಿ ಔಷಧಗಳ ಬದಲು ಆಯಾ ಔಷಧ ಸಂಯುಕ್ತಗಳ ಹೆಸರಿನಲ್ಲಿ ಸರಕಾರವೇ ಅತಿ ಕಡಿಮೆ ಬೆಲೆಯಲ್ಲಿ ಮಾರುವ ಯೋಜನೆ ಜಾರಿಗೆ ಬಂದಿದೆ. ಕೋಟ್ಯಂತರ ಜನರಿಗೆ ಅಗ್ಗದ ದರದಲ್ಲಿ ಔಷಧಗಳು ಸಿಗತೊಡಗಿವೆ.

ಮೂವತ್ತು ವರ್ಷಗಳ ಹಿಂದೆಯೇ ಹೀಗೆ ಮಾಡಬೇಕೆಂಬ ಒತ್ತಾಯವಿತ್ತು. ಬಾಂಗ್ಲಾದೇಶದಲ್ಲಿ ಆಗಲೇ ಇದು ಜಾರಿಗೆ ಬಂದಿತ್ತು. ಆದರೆ ಬೇರೆ ಬೇರೆ ಸರಕಾರಗಳು ಬೇರೆ ಬೇರೆ ಕಾರಣಗಳಿಂದಾಗಿ ಈ ಪ್ರಸ್ತಾವನೆಯನ್ನು ಮುಂದೂಡುತ್ತ ಬಂದಿದ್ದವು.

ಮೋದಿ ಸರಕಾರ ಅದನ್ನು ಜಾರಿಗೆ ತಂದಿತು. ಶಾಭಾಸ್. ಆದರೆ ಹಾಗೆ ಮಾರುವ ಔಷಧಗಳ ಮೇಲೆ ‘ಭಾರತೀಯ ಜನಔಷಧ ಪರಿಯೋಜನಾ’ (ಭಾಜಪ) ಹೆಸರಿನ ಲೇಬಲ್ ಅಂಟಿಸಿ ಮಾರುತ್ತಿದ್ದಾರೆ.

ವಿಶೇಷವಾಗಿ ಭಾಜಪ ಮೂರು ಅಕ್ಷರಗಳನ್ನು ದಪ್ಪ, ಬೇರೆ ವರ್ಣದಲ್ಲಿ ಮುದ್ರಿಸಿ ಮಾರಲಾಗುತ್ತಿದೆ. ಮಾರುವವರೂ ಅದಕ್ಕೆ ‘ಮೋದಿ ಔಷಧ’ ಎಂದು ಸ್ಪಷ್ಟವಾಗಿ ಹೇಳಿಯೇ ಮಾರುತ್ತಿದ್ದಾರೆ.

ಇಂಥ ಜನೌಷಧದ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನಿಸಿಯೇ ಇರಬೇಕು, ಈಗ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲೂ ಅದನ್ನು ಮಾರುವುದಾಗಿ ಬಿಬಿಎಂಪಿ ಘೋಷಿಸಿದೆ. ಅದರ ಮೇಲೂ ‘ಭಾಜಪ’ ಮುದ್ರೆ ಇರುತ್ತದೆಯೆ? ಅಥವಾ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಹೆಸರನ್ನೇ ಹೃಸ್ವ ಮಾಡಿ ‘ಇನ್ಯಾಕಾ’ ಎಂದು ಮತ್ತೆ ಮೂರು ಅಕ್ಷರಗಳನ್ನು ಮುದ್ರಿಸುತ್ತಾರೆಯೆ?  😊

‍ಲೇಖಕರು Avadhi GK

3 March, 2018

3 Comments

  1. Suma Kalasapura

    ಪ್ರಚಾರ ಪ್ರಿಯತೆ.

  2. shiva simha

    ellarigu navu mathra vembha amullu eride…..

  3. Shivakumar Gowda

    ಹೆಗಾದರು ಬರೆಯಲಿ ಬಿಡಿ ಸರ್, ಒಟ್ಟಿನಲ್ಲಿ ಒಳ್ಳೆ ಕೆಲಸ ಮಾಡಲಿ. ಕಾ೦ಗ್ರೆಸ್ ನವರು ಬೇಕಾದರೆ ಹೆಸರು ಹಾಕಿಕೊಳ್ಳಲಿ. ನಮಗು ಕಾದು ಕಾದು ಸಾಕಾಗೊಗಿದೆ, ನಿಮ್ ಹೆಸರು ಹಾಕಬೇಡಿ ಅ೦ದ್ರೆ ಏನು ಮಾಡಲ್ಲ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading