ಭಾವೈಕ್ಯತೆ ಸಾರಿದ 'ರಾವಿ ನದಿಯ ದಂಡೆಯಲ್ಲಿ'

ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಶಿಕ್ಷಕರ ಕಲಾಸಂಘ (ರಿ) ಕೊಪ್ಪಳ, ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವರ ಸಹಯೋಗದಲ್ಲಿ ಪ್ರದರ್ಶಿಸಿದ ನಾಟಕ ಭಾವೈಕ್ಯತೆ ಸಾರಿತು. ಜನಮನಗಳಿಸಿ ಯಶಸ್ವಿ ಪ್ರದರ್ಶನವಾಯಿತು.
ಅಸಗರ್ ವಜಾಹತ್ ಅವರು ಬರೆದ ರಾವಿ ನದಿಯ ದಂಡೆಯಲ್ಲಿ ನಾಟಕವನ್ನು ಕನ್ನಡಕ್ಕೆ ಡಾ. ತಿಪ್ಪೇಸ್ವಾಮಿ ಅವರು ಅನುವಾದಿಸಿದ್ದಾರೆ. ಈ ನಾಟಕದ ಪ್ರದರ್ಶನವನ್ನು ಇತ್ತೀಚೆಗೆ ಸಾಹಿತ್ಯ ಭವನದಲ್ಲಿ ಪ್ರದರ್ಶನವಾಯಿತು. ಪೈಲ್ವಾನ್ ಸಮಾಜ ಸೇವೆಯಲ್ಲಿ ಬದುಕಲು ಹಾತೊರೆದರೆ, ಸಿಖಂದರ್ ಮಿರ್ಜಾ ನೂ ಹಿಂದೂ ಮುದುಕಿಯನ್ನು ಮನೆಯಿಂದ ಓಡಿಸಿ ಬದುಕಲು ಮುಂದಾಗುತ್ತಾನೆ.

ಧರ್ಮಗಳ, ಜಾತಿಗಳ ಹೆಸರಿನಲ್ಲಿ ಅವರನ್ನು ಕಟ್ಟಿಹಾಕಲಾಗುತ್ತದೆ. ಆದರೆ ಅವೆಲ್ಲವುಗಳನ್ನು ಮೀರಿ ಬದುಕನ್ನು ಕಟ್ಟಿಕೊಳ್ಳುವ ರೋಚಕ ಕತೆ ಬಿತ್ತರಗೊಳ್ಳುತ್ತದೆ. ಪಾಕಿಸ್ತಾನದಲ್ಲಿ ಹಿಂದೂ ಮುದುಕಿಯೊಬ್ಬಳು ಸತ್ತಾಗ, ಹಿಂದೂ ಪದ್ಧತಿ ರೀತಿಯಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾದ ಮೌಲ್ವಿಗಳ ನಡೆಗೆ, ಧರ್ಮೀಯ ವಾದಿಗಳು ಮೌಲ್ವಿಗಳನ್ನು ಸಾಯಿಸುವುದರೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರೀತಿಗೆ ಸಾಕ್ಷಿಯಾಗಿ, ಪ್ರೇಕ್ಷಕರು ಪ್ರತಿ ದೃಶ್ಯದ ನಂತರವು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು ವಿಶೇಷ.
ನಾಟಕದ ನಿರ್ದೇಶನವನ್ನು ವಿಸ್ತಾರ ರಂಗ ಶಾಲೆಯ ಪ್ರಾಚಾರ್ಯರಾದ ಲಕ್ಷ್ಮಣ ಪೀರಗಾರ ಮಾಡಿದ್ದರು. ರಂಗ ವಿನ್ಯಾಸ್ ಕುಮಾರಲಾಲ್, ಸಂಗೀತ ನರೇಶ ಡಿಂಗ್ರಿ, ಸಹಾಯಕರಾಗಿ ರವೀಂದ್ರ, ಫಕೀರಪ್ಪ ಗುಳದಳ್ಳಿ ನಿರ್ವಹಿಸಿದರು.

ನಾಟಕದ ಪ್ರದರ್ಶನಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಹಸಿರು ಶಾಲೆಗೆ ಪ್ರಶಸ್ತಿ ನೀಡಿದರು, ೭೫ ವರ್ಷದಿಂದ ಗೋವುಗಳ ರಕ್ಷಣೆಗಾಗಿ ನಿಂತ ಕೊಪ್ಪಳ ಗೋಶಾಲೆ ಬಳಗದ ಅಭಯಕುಮಾರ ಜೈನ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಹೊಸದಾಗಿ ನೌಕರರ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ರೆವಿರೆಂಡ್ ರವಿಕುಮಾರ ಸಭಾಪಾಲಕರು, ಜನಾಬ್ ಸೈಯದ್ ಅಹ್ಮದ್ ಮೌಲ್ವಿಗಳು, , ರಾಮಣ್ಣ ಚೌಡ್ಕಿ ಜಿ.ಪಂ ಸದಸ್ಯರು, ಮಂಜುನಾಥ ಡಿ.ಡೊಳ್ಳಿನ, ರಾಜಶೇಖರ ಅಂಗಡಿ, ಶರಣಬಸನಗೌಡ, ಶಂಭುಲಿಂಗನಗೌಡ, ಸುರೇಶ ಅರಕೇರಿ, ಪಾಂಡುರಂಗ ಅಲ್ಲೂರ, ಹೊಳಿಬಸಯ್ಯ, ಇನ್ನಿತರರು ಹಾಜರಿದ್ದರು. ರಾಮಣ್ಣ ಶ್ಯಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿರೇಶ ಮೇಟಿ ಸ್ವಾಗತಿಸಿದರು, ಮಂಜುನಾಥ ಪೂಜಾರ ನಿರೂಪಿಸಿದರು, ವಿಜಯಲಕ್ಷ್ಮೀ ವಂದಿಸಿದರು.

‍ಲೇಖಕರು avadhi

September 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: