ಭಾವನೆಗಳ ಛಾಯೆಯಲ್ಲಿ
ನಾ ದಿವಾಕರ್
ಭಾವನೆಗಳೇ ಹಾಗೆ
ಎಲ್ಲವನ್ನೂ ಮರೆಸಿಬಿಡುತ್ತವೆ
ಅಂತರಂಗದ ಅವ್ಯಕ್ತ ಚಿಂತನೆಗಳನ್ನು
ಮನದಾಳದ ನೋವು ಹತಾಶೆಗಳನ್ನು
ಭೂತ ವಾಸ್ತವಗಳನ್ನು
ಭವಿಷ್ಯದ ಕನಸುಗಳನ್ನು
ಎಲ್ಲವನ್ನೂ !
ಕರಿ ಮೋಡದ ಹಿಂದಿನ
ಚುಕ್ಕೆಗಳು ನೊಂದ
ಹೃದಯದ ಕವಾಟದಲಿ
ಕುಳಿತು ಗಹಗಹಿಸುತ್ತವೆ ;
ಚಿಂತನೆಗಳ ಆವರಣದಲಿ
ಮನ ಹುಚ್ಚೆದ್ದು ಕುಣಿವಾಗ
ಬಂಧನದ ಸರಳುಗಳು
ಬಿಗಿದಪ್ಪುತ್ತವೆ
ಮಿಡಿತಗಳನ್ನು
ತುಡಿತಗಳನ್ನು !
ಒಂದು ಅಪ್ಪುಗೆ ಸಾಕಲ್ಲವೇ
ಮಿಲನವೆನ್ನಲು ;
ಆತ್ಮಗಳ ಸಮ್ಮಿಲನಕೆ
ನಂಟುಗಳ ಹೊರೆಯೇಕೆ ;
ಪಯಣದಂಚಿನ ಗಾಲಿಗೆ
ಕೀಲಿನ ಹಂಗೇಕೆ ;
ಕಣ್ಣಂಚಿನ ಹನಿಗಳಲಿ
ಸ್ನೇಹದ ಬೀಜಾಂಕುರವಾದಾಗ
ಬಂಧನಗಳ ಹಂಗೇಕೆ
ಭಾವವೊಂದೇ ಸಾಕು !
ಸರಿದು ಹೋಗಲಿ ಮನದ
ಪೊರೆ ಭೂತಗಳನಳಿಸಿ
ನಾಳೆಗಳನೆಣಿಸುತ್ತಾ
ಹರಿದು ಹೋಗಲಿ ಪೊರೆ ;
ಆತ್ಮಗಳ ಸಂವಹನಕೆ
ಆದಿ ಅಂತ್ಯಗಳೆಲ್ಲಿ
ಎಲ್ಲವೂ ಮುಕ್ತ
ವ್ಯೋಮಾಕಾಶದಲ್ಲಿನ
ಗೆರೆಗಳಂತೆ ;
ಉಳಿವುದೊಂದೇ ಭಾವ
ಸ್ನೇಹ ಪ್ರೀತಿ
ಸದ್ಭಾವ !






beautiful
nice one..
ನಾ.ದಿವಾಕರ್ ಅವರ ’ಪ್ರಖರ’ ಶೈಲಿಯ ಬರಹಗಳನ್ನು ನಾನು ಅವಧಿಯಲ್ಲಿ ಆಗಾಗ ಓದುತ್ತೇನೆ, ಮೆಚ್ಚುತ್ತೇನೆ. ಬಹಳ ಚೆನ್ನಾಗಿ ಮನಮುಟ್ಟುವಂತೆ ಬರೆಯುತ್ತಾರೆ. ಅವರದು ಸಮತೂಕದ ಬರವಣಿಗೆ ಎಂದು ನನಗೆ ಅನಿಸುತ್ತದೆ. ಪ್ರಸ್ತುತ ಈ ಕವನವೂ ಬಹುಶಃ ‘ತುಂಬಾ ಚೆನ್ನಾಗಿದೆ!’ ಕ್ಯಾಟೆಗರಿಯದೇ ಇರಬೇಕು. ಆದರೆ “poetry is not my cup of ಕಷಾಯ” ಆದ್ದರಿಂದ ನಾನು ಇಲ್ಲಿ ಒಂದು ಪ್ರಾಮಾಣಿಕ ಅನಿಸಿಕೆ/ಸಂದೇಹವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ನಾ.ದಿವಾಕರ್ ಅವರ ಕಾವ್ಯಸೃಜನಶೀಲತೆಯ ಬಗ್ಗೆ ಕೊಂಕು ಎಂದು ಯಾರೂ ತಿಳಿಯಬಾರದಾಗಿ ಕೋರುತ್ತೇನೆ.
ನನ್ನ ಸಂದೇಹವೇನೆಂದರೆ (ಇದು ಕಾವ್ಯರಸಾಸ್ವಾದನೆಯ ಶಕ್ತಿ ನನ್ನಲ್ಲಿಲ್ಲವಾದ್ದರಿಂದ ಹೊರಹೊಮ್ಮಿದ ಸಂದೇಹವೆಂದು ಬೇರೆ ಹೇಳಬೇಕಿಲ್ಲ), ನಾ.ದಿವಾಕರ್ ಅವರ ಇದೇ ಕವನವನ್ನು ಈ ಕೆಳಗಿನಂತೆ ಒಂದು ಪ್ಯಾರಗ್ರಾಫ್ ರೀತಿಯಲ್ಲಿ ಬರೆದರೆ ಅದು ಸ್ಫುರಿಸಬಹುದಾದ ಭಾವನೆಗಳು ಬೇರೆ (ಅಥವಾ ಹೆಚ್ಚು/ಕಡಿಮೆ) ಇರುತ್ತವೆಯೇ?
“ಭಾವನೆಗಳೇ ಹಾಗೆ ಎಲ್ಲವನ್ನೂ ಮರೆಸಿಬಿಡುತ್ತವೆ- ಅಂತರಂಗದ ಅವ್ಯಕ್ತ ಚಿಂತನೆಗಳನ್ನು, ಮನದಾಳದ ನೋವು ಹತಾಶೆಗಳನ್ನು, ಭೂತ ವಾಸ್ತವಗಳನ್ನು, ಭವಿಷ್ಯದ ಕನಸುಗಳನ್ನು ಎಲ್ಲವನ್ನೂ!
ಕರಿ ಮೋಡದ ಹಿಂದಿನ ಚುಕ್ಕೆಗಳು ನೊಂದ ಹೃದಯದ ಕವಾಟದಲಿ ಕುಳಿತು ಗಹಗಹಿಸುತ್ತವೆ ; ಚಿಂತನೆಗಳ ಆವರಣದಲಿ ಮನ ಹುಚ್ಚೆದ್ದು ಕುಣಿವಾಗ ಬಂಧನದ ಸರಳುಗಳು ಬಿಗಿದಪ್ಪುತ್ತವೆ- ಮಿಡಿತಗಳನ್ನು, ತುಡಿತಗಳನ್ನು! ಒಂದು ಅಪ್ಪುಗೆ ಸಾಕಲ್ಲವೇ ಮಿಲನವೆನ್ನಲು? ಆತ್ಮಗಳ ಸಮ್ಮಿಲನಕೆ ನಂಟುಗಳ ಹೊರೆಯೇಕೆ? ಪಯಣದಂಚಿನ ಗಾಲಿಗೆ ಕೀಲಿನ ಹಂಗೇಕೆ? ಕಣ್ಣಂಚಿನ ಹನಿಗಳಲಿ ಸ್ನೇಹದ ಬೀಜಾಂಕುರವಾದಾಗ ಬಂಧನಗಳ ಹಂಗೇಕೆ ಭಾವವೊಂದೇ ಸಾಕು! ಸರಿದು ಹೋಗಲಿ ಮನದ ಪೊರೆ ಭೂತಗಳನಳಿಸಿ ನಾಳೆಗಳನೆಣಿಸುತ್ತಾ ಹರಿದು ಹೋಗಲಿ ಪೊರೆ; ಆತ್ಮಗಳ ಸಂವಹನಕೆ ಆದಿ ಅಂತ್ಯಗಳೆಲ್ಲಿ ಎಲ್ಲವೂ ಮುಕ್ತ ವ್ಯೋಮಾಕಾಶದಲ್ಲಿನ ಗೆರೆಗಳಂತೆ ; ಉಳಿವುದೊಂದೇ ಭಾವ ಸ್ನೇಹ ಪ್ರೀತಿ ಸದ್ಭಾವ!”
[ವಿ.ಸೂ: ಇದು ’ಕಾವ್ಯ ರಸಾಸ್ವಾದನೆಯನ್ನು ಕಲಿಯಲೆತ್ನಿಸುವ ವಿದ್ಯಾರ್ಥಿಯೊಬ್ಬನ ಪ್ರಶ್ನೆ’ ಎಂದು ಭಾವಿಸಿ ಯಾರಾದರೂ ಬಲ್ಲವರು ವಸ್ತುನಿಷ್ಠವಾಗಿ ಉತ್ತರಿಸಿದರೆ ಅದನ್ನು ಸಂತೋಷದಿಂದ ಅರ್ಥಮಾಡಿಕೊಳ್ಳುತ್ತೇನೆ.]
If some one answers joshiji in right spirit and perspective i too welcome it as it will expose my weakness. In fact I will never consider myself as a poet unless i am considered so by recognised poets.But some of my poetries are highly appreciated by some eminents.Anyway Joshi has raised a pertinent question and I too am eager to get a right answer from right person.
divakar
ನಾನು ಗಂಭೀರ ಸಾಹಿತ್ಯದ ವಿದ್ಯಾರ್ಥಿಯಲ್ಲ. ನನ್ನ ಗ್ರಹಿಕೆ ಹೀಗಿದೆ. ಕವಿತೆ ಇಂತದ್ದನ್ನೇ ಹೇಳುತ್ತೇನೆ ಎನ್ನುವಂತಿದ್ದರೆ ಅದು ಗದ್ಯವಾಗುತ್ತದೆ, ಅಥವಾ ಒಂದು ಟ್ಯಾಬ್ಲಾಯ್ಡ್ ನ ವರದಿಯಾಗುತ್ತದೆ. ತೀರಾ ವಾಚ್ಯವಾಗುತ್ತದೆ. ಒಂದೇ ನಿಖರ ವಿಷಯವನ್ನು (ಒಂದೇ ಎಂದರೆ ನಿಖರವಾಗಿ ಒಂದೇ) ಕಾವ್ಯಾತ್ಮಕ ಭಾಷೆಯಲ್ಲಿ ಬರೆದರೆ ಅದು ಕಾವ್ಯವಾಗುವುದಿಲ್ಲ. ಒಂದನ್ನು ಹೇಳಿದಂತೆ, ಇನ್ನೊಂದನ್ನು ಸೂಚಿಸಿದಂತೆ ಮತ್ತೇನನ್ನೋ ಯೋಚಿಸಿದಂತೆ, ಅನೇಕ ಅರ್ಥಗಳನ್ನು ಹೊಮ್ಮಿಸುವಂತೆ ವಾಕ್ಯಾರ್ಥ, ಭಾವಾರ್ಥ, ಲಕ್ಹ್ಸ್ನಾರ್ಥ, ಹಾಗೂ ದ್ವಾನ್ಯರ್ಥ – ಕನಿಷ್ಠ ಇವುಗಳ ಹದವಾದ ಮೇಲೈಸುವಿಕೆ ಇರಬೇಕು. ಇಲ್ಲಿ, “ಭಾವನೆಗಳೇ ಹಾಗೆ ಎಲ್ಲವನ್ನೂ ಮರೆಸಿಬಿಡುತ್ತವೆ” – ಇದರಲ್ಲಿ ಕಾವ್ಯವೇನೂ ಇಲ್ಲ, ಇದು ವಾಚ್ಯ. “ಪಯಣದಂಚಿನ ಗಾಲಿಗೆ ಕೀಲಿನ ಹಂಗೇಕೆ” ಇದರಲ್ಲಿ ಹಲವು ಪ್ರತಿಮೆಗಳು, ಹಾಗೂ ಲಕ್ಷ್ಯಾರ್ಥಗಳೂ ಅಡಗಿವೆ, ಕಾವ್ಯ ಈ ಒಂದು ಸಾಲಿನಲ್ಲಿದೆ.
Sharadhi ಅವರ ಉತ್ತರದಲ್ಲಿ ತಿರುಳಿದೆ, ಅರ್ಥಮಾಡಿಕೊಳ್ಳುವಂಥದಿದೆ ಎಂದು ನನಗೆ ಅನಿಸಿತು. ಇನ್ನಷ್ಟು ವಿವರಗಳೊಂದಿಗೆ, ಉದಾಹರಣೆಗಳೊಂದಿಗೆ ಯಾರಾದರೂ ವಿಶ್ಲೇಷಿಸುವವರಿದ್ದರೆ ಸ್ವಾಗತ!