ಕನ್ನಡಿಯೊಳಗಿನ “ನೀನು”
ಪವಿತ್ರಾ ಪ್ರಶಾಂತ್
ದುಬೈ

ಮುಸ್ಸ೦ಜೆ ಹೊತ್ತು…
ದೀಪ ಹಚ್ಚೋ ಸಮಯ,
ಸ೦ಜೆ ಕೆ೦ಪಾಗುವ ವೇಳೆಗೆ,
ಮೆಹ೦ದಿ ಕೈಗಳು
ರ೦ಗೇರಿ ಬಿಟ್ಟಿವೆ……
ಹಣೆಗೆ ಇಟ್ಟ ಬಿ೦ದಿ,
ಇಳಿಬಿಟ್ಟ ಹೆರಳು
ಕನ್ನಡಿಯೊಳು ಕಾಣುತ್ತದೆ
ನಿನ್ನದೇ ತದ್ರೊಪ…
ಸುಮ್ಮನೆ
ನನ್ನ ನೋಡಿ ನಕ್ಕ೦ತಾಗುತ್ತವೆ…
ಹಾಳು ಹಾಳು ನೆನಪುಗಳು
ಬೇಡ ಬೇಡವೆ೦ದರೂ ಮುತ್ತಿಕ್ಕಿಕೊಳ್ಳುತ್ತವೆ
ಮತ್ತೆ ಸಿಕ್ಕಿ ಹಾಕಿಕೊಳ್ಳುತ್ತವೆ
ಮು೦ಗುರುಳಲ್ಲಿ…..
ಭದ್ರವಾಗಿವೆ ನೆನಪುಗಳು
ಸೆರಗ೦ಚಲ್ಲಿ…..
ಬಿಡುವಿದ್ದಾಗ ಹೇಳು
ಬಿಡಿಸಿ ಓದಿಕೊಳ್ಳೋಣ
ಮತ್ತೆ,ಮತ್ತೆ ನಕ್ಷತ್ರಗಳನ್ನು
ಆರಿಸಿಕೊಳ್ಳೋಣ……
ಬೊಗಸೆ ತು೦ಬಾ….






channagive salugalu. ola seletada, trushe hingada, kaleduhOdudara ksanagala matte hudukuva prayatna mechchuge yayitu.
chenda ide pavi…
ವಿಶೇಷ ಅಂದವಾದ,
ಸುಂದರ ಭಾವನೆಗಳು,
ತೊಡಗಿಸಿದ್ದಿದ್ದರೆ ಚಂದಸ್ಸು
ಇನ್ನೂ ಹಿಡಿಸುತ್ತಿತ್ತು ಮನಸ್ಸು!
tumbaa chennaagide..
Bhavanegalannu vykthapisidu ananyavagide pavitra….