ನಿರಂತರ
ಅಶ್ಫಾಕ್ ಪೀರಜಾದೆ

ಕಾರುಣ್ಯ ಉಕ್ಕಿಹರಿಯಬೇಕು!
ಸಾವಿನ ಬಳಿಗೆ ಹೋಗಿ
ಬದುಕು ಧೇನಿಸಿದಂತೆ
ದೇವರ ಸನ್ನಿಧಾನದಲಿ
ಪ್ರೀತಿಗೆ ಪ್ರಾರ್ಥಿಸುವಂತೆ
ಭಗ್ನಹೃದಯಿ ಶಾಯರನಾಗಿ
ಮಧುಶಾಲೆಯಲಿ ಮಧುರ
ಶಾಯರಿ ನಿವೇದಿಸಿದಂತೆ
ಭವಿಷ್ಯತ್ತಿನ ಚಿತ್ರ ಕನ್ನಡಿ
ಅಂಗೈಯಲಿ ಹುಟ್ಟಿದ ಹುಣ್ಣು
ಹೋಗಲಿರುವ ಜೀವಕ್ಕೆ ರಕ್ತ-
ತಪಾಸಣೆ, ಸ್ಕ್ಯಾನಿಂಗ ಎಲ್ಲ
ಆಸರೆಯ ಕಂಗಳಲಿ ಆತಂಕ
ಅಗಲುವ ಮನಗಳ
ಸ್ಮಶಾನ ಮೌನ ಸಂವಾದ
ಬದುಕು ಮಾಡಿದ ಯಡವಟ್ಟು
ತನ್ನದಲ್ಲದ ಯಾರದೋ ತಪ್ಪು ಬ್ರಹ್ಮ-
ವೈದ್ಯನ ಒಟ್ಟು ರಿಪೋರ್ಟದಿಂದ
ಮರಣದ ಮುಹೋರ್ತ ನಿಖರ

ಎಂದಾದರೊಮ್ಮೆ ಮಣ್ಣು
ಸೇರಲೇಬೇಕಾದ ದೇಹಕ್ಕೆ
ನಿತ್ಯ ಸತ್ತು ಸತ್ತು
ಬದುಕುವ ಅನುಭವ
ಕತ್ತರಿಸಿ ಗಾಯಗೊಳಿಸಿ
ಹರಿದ ಜೀವಕ್ಕೆ ತೇಪೆ
ಹಚ್ಚುವ ಕಸರತ್ತು
ಆಪರೇಷನ್ ಥೇಟರ
ತೀವೃ ನಿಗಾ ಘಟಕದಲ್ಲಿ
ಉಳಿಸಿಕೊಳ್ಳುವ ಸರ್ಕಸ್ಸು !
ಇಡೀ ವಿಶ್ವವೇ ಆಸ್ಪತ್ರೆ
ನಾವೆಲ್ಲ ರೋಗಿಗಳು !!
ಸಾವಿನ ವಿರುದ್ಧ ನಡೆಯುತಿದೆ
ಹೋರಾಟ ನಿರಂತರ!!!
ಉಳಿದ ಕೊನೆ ಕ್ಷಣಗಳಿಗೆ
ಪ್ರೀತಿಯನುಕಂಪ ಸಾಂತ್ವನದ
ನುಡಿಗಳು ಸಿಗರಬೇಕು
ಉರಿಯುವ ಕಣ್ಣಲ್ಲಿ ಕಾರುಣ್ಯ
ಉಕ್ಕಿ ಹರಿಯಬೇಕು
ಆಗಲೇ ಮರಣಶಯ್ಯೆಯಲ್ಲಿ
ಮಲಗಿದಾತ
ಉಸಿರಾದಷ್ಟೂ ಸಾರ್ಥಕ !
ಭಗ್ನಹೃದಯಿ ಶಾಯರನಾಗಿ…
ನಿಮಗೆ ಇವೂ ಇಷ್ಟವಾಗಬಹುದು…





0 Comments