ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಲಾಗ್ ಪಿಕ್: 'ಹೇಳತೇವ ಕೇಳ' ಓದಿದ ಮೇಲೆ…

ಮಾಲತಿ ಶೆಣೈ

ನೆನಪಿನ ಸಂಚಿಯಿಂದ

ನಾನು ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ ಕೆಲಸ ಮಾಡ್ತಾ ಇದ್ದಾಗ ನಡೆದಿದ್ದು. ನಮ್ಮ ಆಫಿಸ್ ಪಕ್ಕದಲ್ಲಿ ಒಂದು ಫ್ಯಾಮಿಲಿ ಕೌಂನ್ಸೆಲ್ಲಿಂಗ್ ಸೆಂಟರ್ ಇತ್ತು. ನಮ್ಮ ಆಫಿಸ್ ಗೆ ನಾನೇ ಮೊದಲು ಹೋಗಿ ಬಾಗಿಲು ತೆಗಿತಿದ್ದೆ. ಅ ಒಂದು ದಿನ ಬೇಗ ಬೇಗ ಬಸ್ ಸಿಕ್ಕಿದ್ದು ನಾನು ಎಂದಿನಕ್ಕಿಂತ ಬೇಗನೆ ತಲುಪಿದೆ. ಪಕ್ಕದ ಕೌಂನ್ಸೆಲ್ಲಿಂಗ್ ಸೆಂಟರ್ ನ ಬಾಗಿಲು ಇನ್ನೂ ತೆರೆದಿರಲಿಲ್ಲ. ಒಂದು ಮುದ್ದಾದ ದನಿ ’ನಾನು ಇಲ್ಲಿ ಒಳಗೆ ಬಂದು ಕೂರಬಹುದಾ ಮೇಡಂ ಅಂತ ಕೇಳಿತು. ಸಾಧಾರಣ 28-30 ವರ್ಷದ ಮಹಿಳೆ. ನಾನು ಏನು ಎತ್ತ ಕೇಳಿಕೊಂಡು, ಒಳಗಡೆ ಕೂರಲು ಅನುಮತಿಯಿತ್ತೆ. ಹೀಗೆ ಪರಿಚಯ ಆಗಿ ಅವಳು ಪ್ರತೀ ಸಲ ಪಕ್ಕದ ಆಫಿಸ್ ಗೆ ಬಂದಾಗಲೆಲ್ಲ ನನ್ನನ್ನು ಮಾತನಾಡಿಸಿ ಹೋಗುತ್ತಿದ್ದಳು. ನಮ್ಮ ಸಂಸ್ಥೆಯಿಂದ ಒಂದು ಪೇಪರ್ ಬ್ಯಾಗ್ ಮೇಕಿಂಗ್ ಕೋರ್ಸ್ ಹಮ್ಮಿಕೊಂಡಾಗ ಆಕೆಗೂ ಹೆಳಿದೆ. ಅದನ್ನು ಎಟೆಂಡ್ ಮಾಡಿದ್ದಳು.

ಚಿತ್ರ : ರೂಪ ಹಾಸನ್

ಒಂದು ದಿನ ಹೀಗೆ ಮಾತಿಗೆ ಮಾತು ಬಂದು ಆಕೆಗೆ ‘ಯು ಆರ್ ಸೋ ಕ್ಯೂಟ್’ ಅಂದೆ. ತಕ್ಷಣ ಆಕೆಯ ಮುಖ ಬಾಡಿ ಹೋಯ್ತು. ನನ್ನ ಕತೆ ಕೇಳಿದ್ರೆ ಯು ವೋಂಟ್ ಥಿಂಕ್ ಮಿ ಕ್ಯೂಟ್, ನೀವು ನನ್ನ ಜತೆ ಮಾತು ಆಡಲ್ಲ ಅಂದು ಬಿಟ್ಲು. ನಾನು ತಮಾಷೆಯಾಗಿ ನೀನು ಕೊಲೆ ಮಾಡಿದ್ರೂ ಐ ವಿಲ್ ಟಾಕ್ ಟು ಯು ಅಂದೆ.
ಎರಡು ವರ್ಷದ ಹಿಂದೆ ನನಗೆ 5 ಜನ ರೇಪ್ ಮಾಡಿದ್ರು. ನನ್ನ ಕಾಲೇಜ್ ನ ಒಬ್ಬ ಹುಡುಗನ ಮುಖದ ಹಾಗೆ ಒಬ್ಬನ ಮುಖ ನನಗೆ ಕಾಣಿಸಿದರು ಕತ್ತಲೆಯಲ್ಲಿ ಐ ವಾಸ್ ನಾಟ್ ಶೂರ್. ಆ ದಿನ ಕರೆಂಟ್ ಹೋಗಿ ನಮ್ಮ ಮನೆ ಇರೋದು ಸ್ವಲ್ಪ ನಿರ್ಜನ ಪ್ರದೇಶ. ಅಂದ್ರೆ ಟೌನ್ ಶಿಪ್ ಅಂತ ಇದ್ರೂ, ನಮ್ಮ ಮನೆಯೆ ಅಲ್ಲಿ ಮೊದಲಿಗೆ ಕಟ್ಟಿದ್ದು. ಉಳಿದ ನಿವೇಶನಗಳಲ್ಲಿ ಅರ್ಧ / ಮುಕ್ಕಾಲು ಕಟ್ಟಿದ ಮನೆಗಳು ಮಾತ್ರ ಅಲ್ಲಿದ್ದದ್ದು. ಕರೆಂಟ್ ಹೋದ ದಿನ ಚಂದ್ರ ಕೂಡ ಇರಲಿಲ್ಲ ಅಷ್ಟು ಕತ್ತಲು. ಎಲ್ಲಿಂದ ಬಂದು ಎರಗಿದರು ಅರ್ಥವೇ ಆಗಲಿಲ್ಲ. ಅಲ್ಲೆ ಅರ್ಧ ಕಟ್ಟಿದ ಮನೆ ಒಂದಕ್ಕೆ ನನ್ನನ್ನು ದೂಡಿಕೊಂಡು ಹೋದರು. ಆಗ ಮೊಬೈಲ್ ಎಲ್ಲ ಇರಲಿಲ್ಲ ನಮ್ಮ ಬಳಿ. ಸಿಗರೇಟ್ ಹಚ್ಚುವಾಗ ಆ ಬೆಳಕಿನಲ್ಲಿ ಒಬ್ಬನ ಮುಖ ಕಾಣಿಸಿತು ಅಷ್ಟೆ. ಅವನೆ ನನ್ನ ಕಾಲೀಜಿನವ ಅಂತ ನನ್ನ ಅನುಮಾನ. 5 ಜನ ನನ್ನ ಮೇಲೆ ಪಶುಗಳಂತೆ ಒಂದಾದ ಮೇಲೆ ಒಂದರಂತೆ ಬಂದೆರಗಿದರು. ನನಗೆ ಕಿರುಚಿಕೊಳ್ಳಲಾಗದಂತೆ ಬಾಯಿ ಒತ್ತಿ ಹಿಡಿದಿದ್ದರು. ಯಾವಾಗ ಪ್ರಜ್ಝೆ ತಪ್ಪಿತೋ ಗೊತ್ತಾಗಲಿಲ್ಲ. ಪ್ರಜ್ಞೆ ಮರುಕಳಿಸಿದಾಗ ಕರೆಂಟ್ ಬಂದಿತ್ತು. ಕಷ್ಟ ಪಟ್ಟು ಎದ್ದೆ. ಆದಷ್ಟು ಬಟ್ಟೆ ಬರೆ ಸರಿಮಾಡಿಕೊಂಡೆ. ತಲೆ ಕೂದಲು ಕಣ್ಣಲೆಲ್ಲ ಮರಳು.
ಮನೆ ಬಳಿ ಅಮ್ಮ ನನ್ನನ್ನು ಕಾಯ್ತಾ ಇದ್ದಳು. ನಾನು ಎಲ್ಲ ಹೇಳಿದೆ. ಅಮ್ಮ ನನ್ನನ್ನು ಕ್ರಿಮಿಯನ್ನು ನೋಡಿದ ಹಾಗೆ ನೋಡಿ, ಮೊದಲು ಸ್ನಾನ ಮಾಡು ನಡಿಯೇ ಅಂದ್ರು, ಪೋಲಿಸ್ ಅಂದಿದ್ದಕ್ಕೆ ನಮ್ಮ ಮಾನಾನೆ ಹೋಗೋದು ಅಂದ್ಳು. ನಾನು ಉಜ್ಜಿ ಉಜ್ಜಿ ಮೈ ಎಲ್ಲ ಗಾಯಗಳಿದ್ದರು ಲೂಫಾದಿಂದ ಚರ್ಮ ಸುಲಿದುಹೋಗುವಷ್ಟು ಹೊತ್ತು ಸ್ನಾನ ಮಾಡಿದೆ. ಹೊರಗೆ ಬಂದಾಗ ಅಪ್ಪ ಅಮ್ಮ ಗುಸು ಗುಸು ಮಾತಾಡ್ತಿದ್ದರು. ಅವರಿಬ್ಬರೂ ನನ್ನ ಜತೆ ಮಾತು ಕಡಿಮೆ ಮಾಡಿದರು. ನನ್ನ ತಪ್ಪೇನೂ ಇಲ್ಲ ಅಂದ್ರೂ ನನ್ನನ್ನೆ ತಪ್ಪಿತಸ್ಥಳನ್ನಾಗಿ ಮಾಡಿದರು. ನಾನು ಮಂಕಾದೆ. ನನಗೂ ಕಾಲೇಜ ನಲ್ಲಿ ಬ್ಯೂಟಿ ಕ್ವೀನ್, ಸ್ವೀಟಿ, ಕ್ಯೂಟಿ ಅಂತೆಲ್ಲ ಹೇಳ್ತಿದ್ದರು. ಆತ್ಮ ಹತ್ಯೆಗೆ ಮಾಡುವ ಅಂದ್ರೆ ಧೈರ್ಯ ಬರಲಿಲ್ಲ. ಆಮೇಲೆ ನನಗೆ ಟ್ರೀಟ್ ಮಾಡಿದ ಲೇಡಿ ಡಾಕ್ಟರ್ ನನಗೆ psychiatrist ನ್ನು ಕಾಣಲು ಹೇಳಿದರು. ನನ್ನ ತಂದೆ ದೊಡ್ಡ ಪೋಸ್ಟ್ ನಲ್ಲಿದ್ದವರು. ಅವರಿಗೆ ಅವರ ಮರ್ಯಾದೆ ಮುಖ್ಯ ಆಗಿತ್ತು. ಹಾಗಾಗಿ ನಾವು ಆ ಮನೆ ಮಾರಿ ಇಲ್ಲಿಗೆ ಬಂದೆವು.
ನನ್ನ psycho-therapy session ನಲ್ಲಿ ನನ್ನ ಕತೆ ಕೇಳಿದ ಒಬ್ಬ ನನ್ನನ್ನು ಮದುವೆಯಾಗಲು ಬಂದ. ಅವನೂ ಯಾವುದೋ ಮಾನಸಿಕ ಕ್ಷೋಭೆಗೆ ತುತ್ತಾಗಿ ಟ್ರೀಟ್ ಮೆಂಟ್ ಗೆಂದೆ ಬರುತ್ತಿದ್ದರಿಂದ ಅವನನ್ನು ಮದುವೆಯಾಗೋದು ನನಗಿಷ್ಟ ಇರಲಿಲ್ಲ. ಆದರೆ ಅಪ್ಪ ಅಮ್ಮನ ಸಿಟ್ಟು ಸೆಡವು ಇನ್ಸಲ್ಟ್ ಬ್ಲ್ಯಾಕ್ ಮೈಲ್ ಬೈಗುಳು ಕೇಳಿ ಕೊನೆಗೂ ಹೂಂ ಅಂದೆ. ಮೊದಲೆರಡು ವರ್ಷ ಎಲ್ಲ ಚೆನ್ನಾಗಿತ್ತು. ಆದರೂ ಕೆಲವೊಮ್ಮೆ ಅಪರೂಪಕ್ಕೆ ಅವರ ಫ್ರೆಂಡ್ಸ್ ನಮ್ಮ ಮನೆಗೆ ಊಟಕ್ಕೆ ಬಂದಾಗ ಎಲ್ಲರಿಗೂ ಇವಳು ರೇಪ್ ಗೆ ತುತ್ತಾದವಳು ಅಂತ ಪರಿಚಯಿಸ್ತಿದ್ದ, ತಾನೇನೋ ನನ್ನನ್ನು ಮದುವೆಯಾಗಿ ಮಹತ್ ಸಾಧನೆ ಮಾಡಿದ ಪೋಸ್ ಕೊಡುತ್ತಿದ್ದರು. ಮುಜುಗರ ಆದ್ರೂ ತಡೆದುಕೊಳ್ಳುತ್ತಿದ್ದೆ . ಒಂದೆರಡು ಸಲ ಸೂಕ್ಷ್ಮವಾಗಿ ತಿಳಿಸಿದರೂ ‘ನನಗೆ ಅವರೆಲ್ಲರ respect ಬೇಕು, ಮತ್ತು ನಿಜ ತಾನೆ ನಾನು ಹೇಳೋದು ಏನು ತಪ್ಪು ಇದರಲ್ಲಿ ಅಂತ ನನಗೆ ಸುಮ್ಮನಾಗಿಸಿದರು. ಇತ್ತೀಚಿಗೆ ಅವರ ಮಿತ್ರರೊಬ್ಬರು ಇವರು ಆಫಿಸ್ ಹೋದಾಗ ಏನೋ ನೆವ ಮಾಡಿಕೊಂಡು ನನ್ನನ್ನು ಮುಟ್ಟಲು ಬಂದರು. ನಾನು ಬೈದಿದಕ್ಕೆ ‘ನಾಯಿ ಮುಟ್ಟಿದ ಮಡಕೆ’ ಅಂತ ಹೇಳಿ ಹೊರತು ಹೋದರು. ನನಗೆ ನಾಚಿಕೆಯಿಂದ ತಲೆ ಎತ್ತಲಾಗಲಿಲ್ಲ. ಇದೇ ವರ್ತನೆ ಬೇರೆ ಇನ್ನಿಬ್ಬರಿಂದ ಪುನರಾವರ್ತಿಸಿದಾಗ ಇವರಿಗೆ ಹೇಳಿದೆ, ಆಮೇಲೆ ಗೊತ್ತಾದದ್ದು ನನ್ನನ್ನು ಮದುವೆಯಾದವನೆ ಅವರನ್ನು ಇಲ್ಲಿಗೆ ಕಳುಹಿಸಿದಾನೆಂದು. ಆ ಮೇಲೆ ನಾನು ಪ್ರೆಗ್ನೆಂಟ್ ಆದೆ. ಖುಶಿ ಪಡಲು ಆಗಲಿಲ್ಲ ನನ್ನಿಂದ ಯಾಕಂದರೆ ನನ್ನ ಗಂಡ ನನಗೆ ಕೇಳಿದ ಮೊದಲ ಪ್ರಶ್ನೆ ‘ಯಾವನಿಂದ’ ಪ್ರೆಗ್ನೆಂಟ್ ಆದೆ ಅಂತ.
ಕೊನೆಗೊಂದು ದಿನ ಅವನ ಅಮ್ಮ ನಮ್ಮ ಜತೆ ಇರಲು ಬಂದಳು. ಆಗಲೆ ನನಗೆ ನಾಲ್ಕನೆ ತಿಂಗಳು ನಡೆಯುತ್ತಿತ್ತು. ಅತ್ತೆಗೆ ನನ್ನ ಬಗ್ಗೆ ಹೆಚ್ಚ್ಚೇನೂ ಹೇಳಿರಲಿಲ್ಲ ಮಹಾನುಭಾವ ಆದ್ದರಿಂದ ಆಕೆ ಚೆನ್ನಾಗೆ ನನ್ನನ್ನು ನೋಡಿ ಕೊಂಡಳು. ಆದರೆ ಗಂಡನ ಮಿತ್ರರಿಂದ ನನ್ನ ರೇಪ್ ಬಗ್ಗೆ ಗೊತ್ತಾಗಿ ಒಂದು ದಿನ ನನ್ನನ್ನು ಮೆಟ್ಟಿಲ ಮೇಲಿನಿಂದ ದೂಡಿ ಬಿಟ್ಟರು. ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದೆ. ನಾನು ತಂದೆ ತಾಯಿ ಯಾವುದೇ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಆಸ್ಪತ್ರೆಯಲ್ಲಿನ ಸಿಬ್ಬಂಧಿ ಸಹಾಯದಿಂದ ನಾನು xyz ಸೇವಾಶ್ರಮ ಸೇರಿಕೊಂಡೆ. ಆದರೆ ನನಗೆ ಗರ್ಭಪಾತ ವಾಯಿತು. ಅಲ್ಲಿ ನನಗೆ ಹೊಲಿಗೆ, ಕ್ಯಾಂಡಲ್ ಗ್ರೀಟಿಂಗ್ ಕಾರ್ಡ್ ಎಲ್ಲ ಮಾಡೋದನ್ನು ಹೇಳಿ ಕೊಡುತ್ತಿದ್ದಾರೆ. ನಿಮ್ಮ ಸಂಸ್ಥೆಯಿಂದ ಪಡೆದ ಟ್ರೈನಿಂಗ್ ನಿಂದ ನನಗಿನ್ನೂ ಸಹಾಯ ಆಗಿದೆ. ನ್ಯೂಸ್ ಪೇಪರ್ ಬ್ಯಾಗ್ ಗೆ ಒಳ್ಳೆ ಡಿಮಾಂಡ್ ಇದೆ. ನನಗೆ ಕಮಾಯಿ ಯಿದೆ. ಚೆನ್ನಾಗಿ ನೋಡಿಕೊಳ್ತಾರೆ ಮಾತ್ರವಲ್ಲ ಅಲ್ಲಿನ Administrative ಕೆಲಸಗಳನ್ನು ಒಂದೊಂದಾಗಿ ನನಗೆ ಹಚ್ಚಿ ಸಂಬಳ ಅಂತ ನನ್ನ account ಗೆ ಜಮಾ ಆಗ್ತದೆ.
ನನಗಂತು ನಿಜಕ್ಕೂ 4-5 ನಿಮಿಷ ಮಾತೇ ಹೊರಡಲಿಲ್ಲ. ಆ ಮೇಲೆ ಕೆಲ ದಿನ ನಮ್ಮ ಆಫಿಸ್ ಕಡೆ ಬರಲಿಲ್ಲ ಆಕೆ. ಅವಳು ಕೊಟ್ಟ ನಂಬರ್ ನಾಟ್ ವ್ಯಾಲಿಡ್ ಅಂತ ಬರುತ್ತಾ ಇತ್ತು. ಕಡೆಗೆ 4-5 ತಿಂಗಳು ಬಿಟ್ಟು ಖುಶಿ ಖುಶಿಯಿಂದ ಬಂದ್ಲು. ಇನ್ನೊಂದು ಮದುವೆಯಾಗಿ ಹೊರ ದೇಶಕ್ಕೆ ಹೋಗಲಿಕ್ಕೆ ತಯಾರ್ ಆಗಿದ್ದಳು. ಡಿವೋರ್ಸ್ ಅದು ಇದು ಅಂತ ಬಿಸಿ ಇದ್ದೆ. ನನ್ನ ನಂಬರ್ ಚೇಂಜ್ ಆಗಿದೆ ಅಂದ್ಲು. ಹೊರ ದೇಶಕ್ಕೆ ಹೋದ ಮೇಲೆ ನಾವು ಮೈಲ್ ನಲ್ಲಿ ಸಂಪರ್ಕ ಇಟ್ಟು ಕೊಂಡಿದ್ದೇವೆ.ಅವಳೀಗ ಹೆಸರು ಬದಲಾಯಿಸಿಕೊಂಡಿದ್ದಾಳೆ. ಎರಡು ಪುಟಾಣಿ ಮಕ್ಕಳ ತಾಯಿ. ಅಲ್ಲಿ ಅವಳ ಗಂಡ ರಾಂಚ್ (Ranch) ಒಂದರಲ್ಲಿ ಮ್ಯಾನೆಜರ್. ಇವಳು ತರಕಾರಿ ಮಾರುವ ಸೂಪರ್ ಸ್ಟೋರ್ ಇಟ್ಟುಕೊಂಡಿದ್ದಾಳೆ ’ಹೇಳತೇವ ಕೇಳ’ ದ ಬಗ್ಗೆ ಸ್ಥೂಲವಾಗಿ ಹೇಳಿದ್ದೆ. ನನ್ನ ಕತೆ ಕೂಡ ಬರೀಬಹುದು ಅಂದ ಮೇಲೆ ಬರೀತಾ ಇದ್ದೀನಿ. ಇಲ್ಲದಿದ್ದರೆ let sleeping dogs lie ಅಂತ ಸುಮ್ಮನಿದ್ದೆ. ಅವಳು ಅಲ್ಲಿ ನೊಂದ ಮಹಿಳೆಯರಿಗಾಗಿ ರೂಪಿಸಿರುವ ವಿಶೇಷ ಸಂಸ್ಥೆಯಲ್ಲಿ ವಾರದಲ್ಲಿ ಮೂರು ಗಂಟೆ ಮೀಸಲಿಡುತ್ತಾಳಂತೆ. ತನ್ನ ಕತೆ ಅಲ್ಲಿ ಯಾವುದೇ ನಿರ್ಭೀಡೆ ಇಲ್ಲದೆ ಶೇರ್ ಮಾಡ್ತಾಳಂತೆ.

ಅವಧಿ ಅಂತರ್ಜಾಲ ಪತ್ರಿಕೆ ದೆಹಲಿಯಲ್ಲಿ ಜರುಗಿದ ದೌರ್ಜನ್ಯವನ್ನು ವಿರೋಧಿಸಿ ಲೇಖನಗಳನ್ನು ಕಳುಹಿಸಲು ಕೇಳಿದಾಗ ಫೇಸ್ ಬುಕ್ ನಲ್ಲಿರುವ ಸಖೀಯರು ಹಲವಾರು ಲೇಖನಗಳನ್ನು-ಸ್ವಾನುಭವ, ಅಕ್ಕ ಪಕ್ಕ ದಲ್ಲಿ ನಡೆದಿರುವಂತದ್ದು etc… ಬರೆದಿದ್ದರು..ನಾನು ಕೆಲವು ದಿನ ಊರಲ್ಲಿರಲಿಲ್ಲ. ಆಗ ನನಗೆರಡು ಎಸ್ ಎಮ್ ಎಸ್ ಬಂದಿತ್ತು: ನೀವು ಅವಧಿಗೆ ಬರೆಯುದಿಲ್ಲವಾ ಅಂತ’ ಆಗ ನನಗೆ ಏನು ಅಂತ ಅರ್ಥವಾಗಿರಲಿಲ್ಲ. ಹಾಗೂ ನಾನು ಕೆಲ ದಿನ ಮೈಲ್/ಫೇಸ್ ಬುಕ್ ನಿಂದ ದೂರ ಇದ್ದೆ. ಬಂದ ಮೇಲೆ ಸಖೀಯರ ಕೆಲ ಲೇಖನಗಳನ್ನು ಅವಧಿಯಲ್ಲಿ ಓದಿ, ನನ್ನ ಪ್ರೆಂಡ್ ಗೆ ಪ್ರಾಮಿಸ್ ಮಾಡಿದ್ದೆ, ಖಂಡಿತ ಬರೀತೀನಿ ಅಂತ. ಆಮೇಲೆ ಅದನ್ನು ಹಾಗೆ ಬಿಟ್ಟು ಬಿಟ್ಟೆ. ಈಗ ಪುಸ್ತಕ ಓದಿದ ಮೇಲೆ ಹಾಗೂ ಪರವಾನಗಿ ಸಿಕ್ಕ ಮೇಲೆ ನಿಮ್ಮ ಮುಂದೆ ಈ ವಿಷಯ ಬಹಿರಂಗ ಪಡೆಸಿದ್ದೇನೆ. ಇಲ್ಲಿ ಒಂದು special feature ಅಂದ್ರೆ ಸುಖಾಂತ್ಯ ದಲ್ಲಿ ಕೊನೆಗೊಂಡಿದ್ದು.
ಅಭಿನವ ಪ್ರಕಾಶನದ ನ. ರವಿಕುಮಾರ್ ‘ಅವಧಿ’ಯ ಆ ಲೇಖನಗಳನ್ನೆಲ್ಲ ಒಟ್ಟುಗೂಡಿಸಿ ‘ಹೇಳತೇವ ಕೇಳ’
ಎಂಬ ಶೀರ್ಷಿಕೆಯಡಿ ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.
ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
ಪುಸ್ತಕದ ಹೆಸರು: ಹೇಳತೇವ ಕೇಳ-
ಬೆಲೆ: Rs 100/–
ಅಭಿನವ ಪ್ರಕಾಶನ
ಮುಖಪುಟ ವಿನ್ಯಾಸ: ಎಂ. ಆರ್. ಗುರುಪ್ರಸಾದ್
 

‍ಲೇಖಕರು avadhi

7 May, 2013

1 Comment

  1. malathi S

    Thank you Avadhi for carrying this. a friend told me that my post had appeared here. there were 145 readers in a day which is a record of sorts for my post.
    Illustration by Roopa Hassan is very apt.
    thank you
    malathi S

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading