ಬ್ರೇಕಿಂಗ್ ನ್ಯೂಸ್: ಮದುಮಗಳು ಇನ್ನು ಕುಪ್ಪಳಿಗೆ


ಕನ್ನಡ ರಂಗಭೂಮಿಯಲ್ಲಿ ಮಹತ್ವದ ಪ್ರಯೋಗವಾದ ಸಿ ಬಸವಲಿಂಗಯ್ಯ ನಿರ್ದೇಶನದ ‘ಮಲೆಗಳಲ್ಲಿ ಮದುಮಗಳು’ ಈಗ ಕುಪ್ಪಳಿಯತ್ತ ಮುಖ ಮಾಡಿ ನಿಂತಿದ್ದಾಳೆ. ಮೈಸೂರಿನಲ್ಲಿ ರಂಗಾಯಣಕ್ಕಾಗಿ ಬಸವಲಿಂಗಯ್ಯ ನಿರ್ದೇಶಿಸಿದ ಆಹೋರಾತ್ರಿ ನಾಟಕ ಅಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ನಾಡಿನ ಎಲ್ಲೆಡೆಯಿಂದ ಜನರು ಅಲ್ಲಿಗೆ ಹೋಗಿ ನಾಟಕ ನೋಡಿ ಬಂದಿದ್ದರು.
ಆ ನಂತರ ಬಸವಲಿಂಗಯ್ಯ ಆಯ್ಕೆಮಾಡಿಕೊಂಡದ್ದು ಬೆಂಗಳೂರನ್ನು. ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಯ ಆಸಕ್ತಿಯ ಕಾರಣದಿಂದಾಗಿ ಸುಮಾರು ಎರಡು ತಿಂಗಳ ಕಾಲ ೧೩  ಎಕರೆ ವಿಶಾಲವಾದ ಕಲಾಗ್ರಾಮದ ರಂಗ ಆವರಣದಲ್ಲಿ ನಾಟಕ ಪುನರ್ ಪ್ರದರ್ಶನಕ್ಕೆ ಸಜ್ಜಾಯಿತು.
ಈಗ ಮದುಮಗಳನ್ನು ಕುವೆಂಪು ಅವರ ಕುಪ್ಪಳಿಗೆ ಕರೆದೊಯ್ಯಲು ಬಸವಲಿಂಗಯ್ಯ ಯೋಚಿಸಿದ್ದಾರೆ. ‘ಕುವೆಂಪು ನೆಲಕ್ಕೆ ಕುವೆಂಪು ಅವರ ಕೃತಿಯೊಂದನ್ನು ಕೊಂಡೊಯ್ಯುವುದು ಎಂತಹ ಸಾರ್ಥಕ ವಿಷಯ. ಹಾಗಾಗಿಯೇ ಅಲ್ಲಿಗೆ ಹೋಗಿ ಇದೇ ರೀತಿಯಲ್ಲಿ ಪ್ರದರ್ಶನ ನೀಡಲು ಯೋಚಿಸಿದ್ದೇನೆ. ಇದೇ ಕಲಾವಿದರು ಅಲ್ಲಿ ಪ್ರದರ್ಶನ ನೀಡಲಿದ್ದಾರೆ’ ಎಂದು ಬಸೂ  ‘ಅವಧಿ’ಗೆ ತಿಳಿಸಿದ್ದಾರೆ

 

‍ಲೇಖಕರು G

June 5, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. boranna b

    bahala kushiya sangathi sir,kalaagraamadalli naavu naataka nodalu oda dinave male bartha ithu.ondu divanthu sumaaru 11 ganteyavaregu kaaytha idvi adre malene bidlilla.mathondu dina hogi nodida kushiyalle innodu sala nodona anthidvi.adre basu sir’nataka nodade irorge avakaasha madikodi mathe mathe neevu bandu avarige iro avakaashana thappisabedi’ antha helthidru.heegaagi mathe malegalalli madhumagalu naataka noduva aaseyannu balavanthavaagi thadehididevu.mathomme kuppalliyalli malegalalli madhumagalu noduvudakke sigthale annuva kushi namagella.thank you basu sir…

    ಪ್ರತಿಕ್ರಿಯೆ
  2. BHARATH SA.JAGANNATHA

    ಕಲಾಗ್ರಾಮದಲ್ಲೇ ಮಲೆಗಳನ್ನು ಅದ್ಭುತವಾಗಿ ಸೃಷ್ಟಿಸಿದ್ದರು. ಅಂಥದ್ರಲ್ಲಿ ಕುಪ್ಪಳ್ಳಿಯ ಸುಂದರ ಪರಿಸರದ ಮಧ್ಯೆ ಮಧುಮಗಳನ್ನು ನೋಡಲು ಖಂಡಿತಾ ಆಸೆ ಇದೆ. ಕಾಯುತ್ತಿರುತ್ತೇವೆ….

    ಪ್ರತಿಕ್ರಿಯೆ
  3. na.. damora shetty

    madumagalu malenaadininda bandavalu. matte yaake allige hogthaale? hoo! gottaaythu. Thavaru manege. Hogibarli paapa.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: