ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್ : ಮಡಿಕೇರಿ ಸಮ್ಮೇಳನದ ನಿರ್ಣಯಗಳು ಇಲ್ಲಿವೆ

ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿ, ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ನಾಡಗೀತೆ ಕಡ್ಡಾಯ ಮಾಡಿ

ಮಡಿಕೇರಿ ಸಾಹಿತ್ಯ ಸಮ್ಮೇಳನದ ಆರು ನಿರ್ಣಯಗಳು

ಮಡಿಕೇರಿಯ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರೀಕ್ಷೆಯಂತೆ ಕೇವಲ ೬ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ನಿರ್ಣಯಗಳು ಕನ್ನಡಪರವಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಒತ್ತು ನೀಡಲಾಗಿದೆ.
 
ನಿರ್ಣಯಗಳು
೧. ಕನ್ನಡ ವಿರೋಧಿ ಧೋರಣೆ ಪ್ರದರ್ಶಿಸುತ್ತಿರುವ ಶಾಸಕ ಸಂಭಾಜಿ ಪಾಟೀಲ್‌, ಉಮೇಶ್‌ ಕತ್ತಿ ವರ್ತನೆಗೆ ಖಂಡನೆ
೨. ನಾಡಗೀತೆಯನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ ಹಾಡಬೇಕು.
೩. ಗಡಿನಾಡ ಶಾಲೆಗಳನ್ನು ಮುಚ್ಚಬಾರದು.
೪. ಶಾಲೆಗಳಿಗೆ ಪುಸ್ತಕಗಳನ್ನು ಕೊಡಬೇಕು.
೫. ಪಶ್ಚಿಮ ಘಟ್ಟ ಅಭಿವೃದ್ಧಿ ಕುರಿತಾದ ಡಾ.ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಬೇಕು.
೬. ಹೈಕೋಟ್‌೯ನಲ್ಲಿ ನಡಾವಳಿಗಳು ಕನ್ನಡದಲ್ಲಿರಬೇಕು.
 

‍ಲೇಖಕರು G

9 January, 2014

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. ರವಿಪ್ರಕಾಶ

    ಡಾ.ಕಸ್ತೂರಿ ರಂಗನ್‌ ವರದಿಯೇ ಗಾಡ್ಗೀಳ್ ವರದಿಯನ್ನು ಸೋಸಿ ತಯರಿಸಿದ್ದು. ಕಸ್ತೂರಿ ರಂಗನ್‌ ವರದಿಯನ್ನು ತಿರಸ್ಕರಿಸುವಲ್ಲಿ ಪುಂಡ ರಾಜಕಾರಣಿಗಳ(ಗಣಿ, ಮರಗಳ್ಳ , ಭೂಗಳ್ಳ) ಕೈ ಮೇಲಾಗಿರುವುದ ಖೇದಕರ.
    ಇರುವ ಪರಿಸರ ಉಳಿಯದೆ ಬದುಕು ಸಾಹಿತ್ಯ ಉಳಿಯುವುದೇ?

  2. ರಮೇಶ್ ಹಿರೇಜಂಬೂರು

    ಉತ್ತಮ ನಿರ್ಣಯಗಳು. ಇವು ಆದಷ್ಟು ಬೇಗ ಜಾರಿಗೆ ಬರಲಿ…
    -ರಮೇಶ್ ಹಿರೇಜಂಬೂರು

  3. Harshakumar Kugwe

    ನಿಜ ಎಂದರೆ ಸಾಹಿತ್ಯ ಸಮ್ಮೇಳನವು ಕಸ್ತೂರಿ ರಂಗನ್ ವರದಿಯ ಪರವಾಗಿ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಆದರೆ ಕಾಫಿ ನಾಡಿನಲ್ಲಿ ಪ್ಲಾಂಟರ್ ಗಳ ಹಿತವಲ್ಲದೇ ಜೀವಜಾಲದ ಬಗೆಗೆ ಕರುಣೆ ಹೇಗೆ ಬರಲು ಸಾಧ್ಯ? ನಮ್ಮ ಸಮಾಧಾನ ಎಂದರೆ ಸಮ್ಮೇಳನಾದ್ಯಕ್ಷರಾದ ನಾ.ಡಿಸೋಜಾ ಸರಿಯಾದ ಸ್ಥಳದಲ್ಲಿ ಸರಿಯಾಗಿ ಮಾತನಾಡಿದ್ದು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading