ಹಿರಿಯ ಸಾಹಿತಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬಾಲ ಸಾಹಿತ್ಯ ಕೊಟ್ಟ ಕೊಡುಗೆ ಎಲ್ಲರಿಗೂ ಗೊತ್ತಿದೆ. ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸಹಾ ಇವರು ಬಾಲ ಕೊಟ್ಟ ಕೊಡುಗೆಯನ್ನು ಗುರುತಿಸಿ ಬಾಲ ಸಾಹಿತ್ಯ ಪುರಸ್ಕಾರ ಘೋಷಿಸಿದೆ
ಯುವ ಬರಹಗಾರ ಲಕೂರು ಸಿ ಆನಂದ ಅವರ ‘ಬಟವಾಡೆಯಾಗದ ರಸೀತಿ’ ಕವನ ಸಂಕಲನಕ್ಕೆ ಯುವ ಸಾಹಿತ್ಯ ಪ್ರಶಸ್ತಿ ಘೋಷಿಸಲಾಗಿದೆ ಇಬ್ಬರಿಗೂ ‘ಅವಧಿ’ಯ ಅಭಿನಂದನೆಗಳು







ನವೋದಯ ಸಾಹಿತ್ಯದಲ್ಲಿ ಅನೇಕ ಪ್ರಮುಖ ಕವಿಗಳು ಎಳೆಯರಿಗಾಗಿ ಬರಹಗಳನ್ನು ಅತೀವ ಆಸಕ್ತಿಯಿಂದ ಮಾಡಿದರು.ಮಕ್ಕಳ ಬಾಯಲ್ಲಿ ಇಂದೂ ನಲಿಯುತ್ತಿರುವ ಹಾಡುಗಳು ಈ ಕವಿಗಳು ಬರೆದವು. ಕುವೆಂಪುರವರಂತೂ ‘ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ದಿವಿಜತ್ವಕೆ ಈ ಮನುಜ ಪಶು ‘ ಎಂದು ಅದಕ್ಕೊಂದು ಮೇಲಿನ ಸ್ಥಾನವನ್ನೇ ಕಲ್ಪಿಸಿದರು. ಅದರಲ್ಲಿ ರಾಜರತ್ನಂರವರ ಕಾಣಿಕೆ ಮರೆಯಲಾಗದ್ದು. ಮುಂದೆ ನವ್ಯರ ಕಾಲದಲ್ಲಿ ಮಕ್ಕಳ ಸಾಹಿತ್ಯ ಅವಗಣನೆಗೆ ಒಳಗಾಯಿತು. ಮಕ್ಕಳ ಸಾಹಿತಿಗಳು ಮಾತ್ರ ಮಕ್ಕಳಿಗಾಗಿ ಬರಹ ಎಂಬ ವಿಭಜನೆ ಸೃಷ್ಠಿಯಾಯಿತು. ಇದನ್ನು ಮೀರಿದ ,ಸಗಥೇಯಿಂದ ಮಕ್ಕಳ ಮನೋವಿಕಾಸಕ್ಕೆ ಕಾರಣರಾದ ಹೆಚ್ಚೆಸ್ವಿ ಯವರಿಗೆ ಪ್ರಶಸ್ತಿ ಸಂದದ್ದು ಬಹಳ ಸಂತೋಷ.ಅವರಿಗೆ ಅಭಿನಂದನೆಗಳು.ಇಂದು ಕಾನ್ವೆಂಟ್ ಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಲಭ್ಯವಾಗುವ ವಿಪುಲ ಸಾಹಿತ್ಯ ಹಾಗೂ ಕನ್ನಡದಲ್ಲಿನ ಕೊರತೆಗಳನ್ನು ನೋಡಿದರೆ ಕನ್ನಡ ಮಾಧ್ಯಮದ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಒದಗುವ ಮಿತಿಗಳ ಬಗ್ಗೆ ಚಿಂತೆಯಾಗುತ್ತದೆ.ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ವಿಶೇಷ ಾಸ್ಥೆ ವಹಿಸಬೇಕು. ಇದನ್ನು ಪುಸ್ತಕ ಪ್ರಾಧೀಕಾರದ ಅಧ್ಯಕ್ಷರಿಗಂತೂ ಸಿಕ್ಕಾಗೆಲ್ಲಾ ಗಮನಕ್ಕೆ ತಂದಿದ್ದೇನೆ. ಬಾಲ ಸಾಹಿತ್ಯ ಬೆಳೆಯದೆ ಕನ್ನಡ ನಾಡು ಬೆಳೆಯುವುದಿಲ್ಲ ೆಂಬುದನ್ನು ಎಲ್ಲರೂ ಮನಗಾಣಬೇಕಾಗಿದೆ.
ಅವಧಿ ಮತ್ತು ಜಿ ಎನ್ ಎಮ್ ಪ್ರೀತಿಗೆ ಹೇಗೆ ಸ್ಪಂದಿಸಲಿ?
ಒಲವಿನಿಂದ
ಎಚ್ಚೆಸ್ವಿ
ಎಚ್ ಎಸ್ ವಿ ಯವರಿಗೆ ಮತ್ತು ಆನಂದ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು… ಅತ್ಯಂತ ಅರ್ಹರಿಗೆ ದೊರೆತದ್ಪರಿಂದ ಪ್ರಶಸ್ತಿಯ ಮೌಲ್ಯ ಖಂಡಡಿತಕ್ಕೂ ಹೆಚ್ಚಿದೆ…
– ಸುಮಂಗಲಾ
ಅಭಿನಂದನೆಗಳು ಸರ್….
Congrats Sir. Congrats Anand.