ಕನ್ನಡದ ಖ್ಯಾತ ವಿದ್ವಾಂಸ, ಸಂಶೋಧಕ ಡಾ. ಶ್ರೀನಿವಾಸ ಹಾವನೂರು ಇನ್ನಿಲ್ಲ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದರು.
ಬುಧವಾರ ಬೆಳಗ್ಗೆ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಬಳಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಿಡಲಾಗುವುದು
ಕರ್ನಾಟಕ ಮತ್ತು ಜರ್ಮನಿ ನಡುವಣ ಸೇತುವೆಯಂತಿದ್ದ ಹಾವನೂರು ಅವರು ಕನ್ನಡಕ್ಕೆ ಹರ್ಮನ್ ಮೊಗ್ಲಿಂಗ್, ರೆ. ಕಿಟ್ಟೆಲ್ ಅಂತಹ ಕ್ರೈಸ್ತ ಪಾದ್ರಿಗಳ ಕೊಡುಗೆಯ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದರು.
ಕನ್ನಡ ಪತ್ರಿಕೋದ್ಯಮಕ್ಕೂ ಸಹಾ ಇವರ ಸಂಶೋಧನೆಯಿಂದ ಅಪಾರ ಲಾಭವಾಗಿತ್ತು. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ದ ಬಗ್ಗೆ ಅವರು ಸಂಶೋಧನೆ ನಡೆಸಿದ್ದೂ ಅಲ್ಲದೆ ಅದರ ಪ್ರತಿಗಳ ನೆರಳಚ್ಚು ಕೃತಿಗಳನ್ನೂ ಕಾಪಿಡಲೂ ಕಾರಣರಾಗಿದ್ದಾರೆ. ಜರ್ಮನಿಯ ಬಾಸೆಲ್ ಮಿಶನ್ ಕನ್ನಡಕ್ಕೆ ಸಲ್ಲಿಸಿದ ಸೇವೆ ಇವರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.






May his soul rest in peace.
painful news. may his work inspire the future
I need to know more about Dr.Srinivasa havanuru especially their work. expecting more insight into their work. condolence to Sir.
ಹತ್ತು ವರ್ಷಗಳ ಹಿಂದಿನ ಮಾತು. ಆಗಿನ್ನೂ ಮೊಬೈಲ್ ಫೋನ್‍ಗಳ ಸಂಪರ್ಕವಿಲ್ಲದ ದಿನಗಳು. ಯುಗಾದಿ ಹಬ್ಬದ ಮರುದಿನ, ಕಚೇರಿ ಮುಗಿಸಿ ಸಂಜೆ ಮನೆಯಲ್ಲಿ ಕುಳಿತಿದ್ದ ಸಂದರ್ಭ. ಫೋನ್ ಕರೆ ಬಂದದ್ದು ನನಗೆಂದು ಹೆಂಡತಿ ರಿಸೀವರ್ ಕೊಟ್ಟಳು. ಅತ್ತ ಕಡೆಯಿಂದ ‘ನಾನು ಶ್ರೀನಿವಾಸ ಹಾವನೂರ ಮಂಗಳೂರಿನಿಂದ ಮಾತನಾಡ್ತಿರೋದು. ಏನ್ ಛಲೋದಾಗಿ ಇಂಟರ್‌ನೆಟ್ ಬಗ್ಗೆ ಸುಧಾದಲ್ಲಿ ಬರ್ದಿದೀರಪ್ಪ. ಒಂದ್ ಪುಟ ಬಿಡದೆ ಓದಿ ಮುಗ್ಸಿ, ಪತ್ರಿಕಾ ಕಚೇರಿಗ್ ಫೋನ್ ಮಾಡಿ ನಿಮ್ ನಂಬರ್ ತೊಗೊಂಡು, ನಿಮ್ ಕೂಡಾ ಮಾತಾಡ್ಬೇಕು ಅಂತ ಕುಂತೀನಿ. ಕನ್ನಡ್ದಾಗ ಟೆಕ್ನಾಲಜಿ ಬಗ್ಗೆ ಬರೆಯೋರ್ ಕಮ್ಮಿ. ನಿಮ್ಮ ಲೇಖನಗಳ್ ಹೀಗೆ ಬರ್ಲಿ’ ಎಂದು ಮಾತು ಮುಗಿಸಿದರು. ನಾನು ಒಂದಷ್ಟು ಕಾಲ ದಿಗ್ಭ್ರಾಂತನಾಗಿ ಕುಳಿತಿದ್ದೆ. ‘ಕರ್ಮವೀರ’, ‘ಕಸ್ತೂರಿ’ ಪತ್ರಿಕೆಗಳಲ್ಲಿ ನಿಯಮಿತವಾಗಿ ಅವರ ಲೇಖನಗಳನ್ನು ಓದಿದ್ದೆ. ಅಷ್ಟು ದೊಡ್ಡ ಸಂಶೋಧಕರು, ವಿದ್ವಾಂಸರು ನನ್ನಂಥ ಎಳಸು ಬರಹಗಾರನ ಬಗ್ಗೆ ಪ್ರಶಂಸೆ ಮಾಡುವಷ್ಟು ದೊಡ್ಡ ಗುಣ ಹೊಂದಿದ್ದಾರಲ್ಲ ಎಂದು ಅಚ್ಚರಿಯಾಗಿತ್ತು. ತಂದೆ ಯವರ್ಯು ಆಗ ಹೇಳಿದ ಮಾತು ‘ಹಾವನೂರು ಎಂದಿಗೂ ಬದಲಾಗೋಲ್ಲ. ಹಿಂದೆ ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ಗೆ ಹೋಗಿದ್ದವನು ಸಂಯುಕ್ತ ಕರ್ನಾಟಕಕ್ಕೆ ಬರೆದ ವರದಿಯಲ್ಲಿ ಅವರ ಬಗ್ಗೆ, ಅವರ ಗ್ರಂಥಾಲಯದ ಬಗ್ಗೆ ಪ್ರಸ್ತಾಪಿಸಿದ್ದೆ. ಆ ಕಾಲದಲ್ಲೇ ಅವರು ನನಗೆ ಫೋನ್ ಹಚ್ಚಿ ಅಭಿನಂದನೆ ಸಲ್ಲಿಸಿದ್ದರು. ಅದು ಅವರ ದೊಡ್ಡ ಗುಣ’. ಮುಂದೆ ಹಾವನೂರ ಅನೇಕ ಬಾರಿ ನನ್ನೊಂದಿಗೆ ಫೋನ್‍ನಲ್ಲಿ ಮಾತನಾಡಿದರು. ದಾಸ ಸಾಹಿತ್ಯವನ್ನು ಇಂಟರ್‌ನೆಟ್‍ಗೆ ಸೇರಿಸುವ ಸಾಧ್ಯತೆಯ ಬಗ್ಗೆ ಚರ್ಚಿಸಿದ್ದರು. ಕೊನೆಗೊಮ್ಮೆ ಅದರಲ್ಲಿ ಸಫಲರೂ ಆಗಿಬಿಟ್ರು. ನಾನಿನ್ನೂ ಕಂಪ್ಯೂಟರ್, ಇಂಟರ್‌ನೆಟ್ ಬಗ್ಗೆ ತಿಳಿದುಕೊಳ್ತಿದೀನಿ ಅಂತಿದ್ದವರು ಮೂರೇ ವರ್ಷದಲ್ಲಿ ಕುವೆಂಪು ವಿಶ್ವವಿದ್ಯಾಲಯದ ತಂತ್ರಜ್ಞಾನ ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಿದರು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸೇರಿದಂತೆ ಅನೇಕ ಸಭಾಂಗಣಗಳಲ್ಲಿ ಕಂಡೊಡನೆ ಓಡಿ ಬಂದು ವಿಶ್ವಾಸದಿಂದ ಮಾತನಾಡಿಸುತ್ತಿದ್ದರು. ‘ನನ್ನ ಮಗ ಸಂಜಯ ಕೂಡಾ ನಿಮ್ಹಂಗ ವಿಜ್ಞಾನ ಲೇಖನ ಬರೀತಿದ್ದ. ಈಗ ಬಿಸಿಯಾಗಿಬಿಟ್ಟಾನ’ ಎಂದು ಹೇಳಿಕೊಳ್ಳುವುದರಲ್ಲಿ ಖುಶಿ ಪಡ್ತಿದ್ದರು. ಎಷ್ಟೋ ಮಂದಿ ದೊಡ್ಡ ಸಾಹಿತಿಗಳಿಗೆ ನನ್ನ ಪರಿಚಯ ಮಾಡಿಸುವಾಗ ಪ್ರಶಂಸೆಯ ಮಾತುಗಳನ್ನು ಹೇಳುವುದನ್ನು ಮರೆಯದವರು. ಹಾವನೂರ ಇನ್ನಿಲ್ಲ ಎಂದೊಡನೆ ಮನಸ್ಸು ಭಾರವಾಗುತ್ತದೆ.
‘ಪ್ರಜಾವಾಣಿ’ ಬಳಗಕ್ಕೆ ಕಾರ್ಯನಿರ್ವಾಹಕ ಸಂಪಾದಕರಾಗಿದ್ದವರು ಜಿ.ಎನ್.ರಂಗನಾಥರಾವ್. ‘ಸುಧಾ’, ‘ತರಂಗ’ ಪತ್ರಿಕೆಗಳಿಗೆ ಒಂದಷ್ಟು ಮುಖಪುಟ ಲೇಖನಗಳನ್ನು ಬರೆದು, ‘ಸುಧಾ’ದಲ್ಲಿ ‘ವಿಜ್ಞಾನಕ್ಕೊಂದು ಬೆಳಕಿಂಡಿ’
It is a great loss to Kannada literature in particular, and literature in general. Let his soul rest in peace…