ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬೋದಿವೃಕ್ಷದ ಬಳಿ ಯಶೋಧರ ಕಾದಿದ್ದಳು…'

ಕಳೆದುಕೊಡವರು

ಸ್ವಾಮಿ ನ. ಕೋಡಿಹಳ್ಳಿ


ಉಳ್ಳವರ ಶಿವಾಲಯಕ್ಕೆ ಶಿವನಿಲ್ಲದ ಗುಡಿ
‘ಲಿಂಗ’ ಮಜ್ಜನಗೊಂಡು
ಸೆಟೆದುನಿಂತಿದೆ
ದಿಗಂಬರನ ಮೌನದಲಿ
ಕಾಲಕ್ಕೆ ಶರಣಾಗಿ
ಮಾತು ಮುಜುಗರದ ಬೆನ್ನೇರಿದೆ
ಕೇಳಲೆಂದು ಬುದ್ಧನನ್ನರಸಿ ಹೊರಟೆ
ಬೋದಿವೃಕ್ಷದ ಬಳಿ ಯಶೋಧರ ಕಾದಿದ್ದಳು!
 
ಬುದ್ಧ, ಜಗವೆಲ್ಲ ಮಲಗಿರಲು
ತಾನೊಬ್ಬನೇ ಎದ್ದಾಗ
ಮನೆಮುಂದೆ ರಂಗೋಲಿ
ಬಿಸಿನೀರು ಮಜ್ಜನಕ್ಕೆ
ಸ್ಯಾರೆ ನುಚ್ಚಕ್ಕಿ-ಬೆಲ್ಲ
ಬಿಟ್ಟು ಬಂದಿದ್ದಕ್ಕೆ ಹಸಿವನ್ನು
ರಾಹುಲನ ಕಳುಹಿಸಿದಳು ಕೊಟ್ಟುಬರಲು
 
ದೇವರಿಗೆ ದುಂಬಾಲು ಬಿದ್ದು
ಕಟ್ಟುತ್ತೇವೆ ಗುಡಿ, ಚಚರ್ು, ಮಸೀದಿ
ಒಡೆದ ಮನಸ್ಸುಗಳಲ್ಲಿ ಎಡೆಬಿಚ್ಚಿ
ಅರಗಿಸಿಕ್ಕೊಳ್ಳಲಾಗದ ಧರ್ಮದಲ್ಲಿ ಕರಗುತ್ತಿದ್ದೇವೆ
ಹೋಮದಲ್ಲಿ ಬೆಂದು ಬಂದಾಗ
ರಾಹುಲ ಕಾದು ಕುಳಿತ್ತಿದ್ದಾನೆ ಉಪದೇಶಕ್ಕೆ
ಬಾಹುಬಲಿಯ ನೆರಳಲ್ಲಿ ಹುತ್ತಕಟ್ಟುತ್ತಿದೆ.
 
ಊರಮಂದಿಯ ಸಡಗರ
ಸಾವಿನ ಸತ್ಕಾರ ದೇವರ ಹೆಣ ಹೆತ್ತು
ಧರ್ಮದ ಗುಡಿಯ ಸುತ್ತ ಮೂರು ಸುತ್ತು
ಬುದ್ಧ ಬಂದಿದ್ದಾನೆ ಮೋಕ್ಷ ನೀಡಲು
ಯಶೋಧರ-ರಾಹುಲರ ಶಾಪದಲ್ಲಿ
‘ಬುದ್ಧಂ ಶರಣಂ ಗಚ್ಚಾಮೀ………
 

‍ಲೇಖಕರು G

1 March, 2015

5 Comments

  1. mmshaik

    rupakagaLu gamana seLeyuttave..nice very nice..

  2. Swarna

    Very nice

  3. Rohini Satya

    Manushyara hinde avara kari neralirutte.
    Mahaatmara benna hinde avara parivaarada neraloo…..
    kavana chennaagide.

  4. Prakash B

    nice lines…

  5. Renuka A. kathari

    nice poetry…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading