ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಳುವಾರ್ ಹೊಸ ಕೃತಿ ಅಂಬೇಡ್ಕರ್ ಬಗ್ಗೆ..

ಪ್ರಸಾದ್ ರಕ್ಷಿದಿ 

ಹಿರಿಯ ಗೆಳೆಯ ಬೊಳುವಾರು ಮಹಮದ್ ಕುಂಞಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ, ಬೊಳುವಾರರಿಗೆ ಫೋನಾಯಿಸಿ ಅಭಿನಂದಿಸಿದೆ…

“ಸರ್ ನಿಮಗೆ ಪ್ರಶಸ್ತಿ ಬಂತು ಅನ್ನುವ ಜೊತೆಗೆ ನನಗೆ ಇಷ್ಟವಾದ ಕಾದಂಬರಿಗೆ ಬಂದಿದೆ, ಅನ್ನುವುದು ಇನ್ನೂ ಹೆಚ್ಚು ಖುಷಿ” ಎಂದೆ. ಹೀಗೇ ಮಾತಾಡುತ್ತ ಅವರು ಅಂಬೇಡ್ಕರ್ ಬಗ್ಗೆ ಬರೆಯುತ್ತಿರುವ ಸೂಚನೆ ನೀಡಿದರು.

“ಯಾವಾಗ ನಮ್ಮಕೈಗೆ ಕೊಡುತ್ತೀರಿ? ಎಂದೆ”.
“ನೋಡೋಣ ನಾನು ನೀವೂ ಬದುಕಿದ್ದರೆ ಇನ್ನಾರು ತಿಂಗಳಲ್ಲಿ” ಎಂದರು.
“ಏನೂ ಯೋಚನೆ ಮಾಡಬೇಡಿ ಸರ್ ನನಗೆ ನಂಬಿಕೆಯಿದೆ…..ಈ ದೇಶ ಖಂಡಿತ ನಮ್ಮನ್ನು ಉಳಿಸಿಕೊಳ್ಳುತ್ತದೆ” ಎಂದೆ.
“ಒಳ್ಳೆಯ ಮಾತು” ಎಂದು ನಕ್ಕರು…

ಈಬಾರಿ ಕನ್ನಡಕ್ಕೆ ಜ್ಞಾನಪೀಠ ಬರಲಿಲ್ಲವೆಂದು ಕೆಲವರು.. ಬಾರದಿದ್ದದೇ ಒಳ್ಳೆಯದೆಂದು ಇನ್ನು ಕೆಲವರು ಹೇಳುತ್ತಿದ್ದಾರೆ.
ನಮ್ಮದು ಪ್ರಜಾರಾಜ್ಯ. ಖಾಸಗಿ ಅಬ್ಬರ ಹೆಚ್ಚುತ್ತಿರುವ ಪ್ರಜಾರಾಜ್ಯ,…

ಖಾಸಗಿ ಜ್ಞಾನ ಪೀಠಕ್ಕಿಂತ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಿಗಿಲಾದುದು.

ಅದು ಬೊಳುವಾರು ಅವರಿಗೆ ಸಂದಿದೆ. ನನಗಂತೂ ಖುಷಿಯಾಗಿದೆ..

‍ಲೇಖಕರು Admin

25 December, 2016

1 Comment

  1. H.R.Basavaraju

    We are also happy that Sri Boluvaru has rightfully got the Kendra Sahitya Academy Award.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading