ಹೊಸ ಗೆಳತಿ ಸಿಕ್ಕಳು

 ರಾಜೀವ್ ಚೀರನಹಳ್ಳಿ 

ನಲವತ್ತರ ತಳಮಳದಲ್ಲಿ
ಹೊಸ ಗೆಳತಿ ಸಿಕ್ಕಿದ್ದಾಳೆ
ನಿನ್ನೆಯವರೆಗೂ ಆಕೆ
ನನ್ನೊಂದಿಗೇ ಇದ್ದಳು
ನನ್ನೊಟ್ಟಿಗೆ ಬೆಳೆದಳು
ಆದರೆ, ಗೆಳತಿಯಾಗಿರಲಿಲ್ಲವಷ್ಟೇ !

ಆಕೆಯದು-ನನ್ನದು
ದಶಕದ ನಂಟು
ಮೊದಲಿನಿಂದಲೂ ಆಕೆ
ನನ್ನ ಉಸಿರಾಗಿದ್ದಳು;
ಬದುಕಿನ ಭಾಗವೇ ಆಗಿದ್ದಳು
ಆದರೆ,ಗೆಳತಿಯಾಗಿರಲಿಲ್ಲವಷ್ಟೇ

ಏನೆಂದು ಕರೆಯಲಿ ಆಕೆಗೆ ?
ಹತ್ತು ಸಂವತ್ಸರ ಕಾಲ
ಜತನದಿಂದ ಜತೆಗಿದ್ದಳು
ಕೈ ಹಿಡಿದ ಕರುಳ ಬಳ್ಳಿಯೇ ಆಗಿದ್ದಳು
ಆದರೆ, ಗೆಳತಿಯಾಗಿರಲಿಲ್ಲವಷ್ಟೇ !

ಹೊಸ ಸಂಬಂಧಕ್ಕೆ
ಹೆಸರೊಂದು ಹುಡುಕಿ ಸುಸ್ತಾದ ಹೊತ್ತಲ್ಲಿ
ಮೊನ್ನೆಯಾಡಿದ ಆಕೆಯ ಮಾತು ನೆನಪಾಯಿತು
ಯಾವುದೋ ಮಾತಿಗೆ
ಆಕೆ ಹೇಳಿದಳು- “ಅಪ್ಪಾ, ನಿನಗಂತೂ ಬುದ್ದಿ ಇಲ್ಲ’’
ತಕ್ಷಣ ನನ್ನಮ್ಮ ಕೂಗಿದಳು
“ಮಗನೇ, ಅವಳೀಗ ನಿನ್ನ ಮಗಳಲ್ಲ, ಗೆಳತಿ !”

ಆಕೆ ಪ್ರೀತಿ !
ಪ್ರೀತಿಗಿಂತಲೂ ಭಾರವಾದ ಪ್ರೀತಿ
ಬರೀ ಪ್ರೀತಿ ಎಂಬ ಭಾವವಲ್ಲ,
ನನ್ನ ಪಾಲಿನ ಪ್ರೀತಿಯ ಅನುಭಾವ
ಆಕೆಯ ಚಿಕ್ಕಪ್ಪನ ಉಸಿರು
ಇಬ್ಬರು ತಂಗಿ-ತಮ್ಮರ ಹಸಿರು

ನಿನ್ನಯ ತನಕ ಮಗಳು
ಇಂದಿನಿಂದ ಪ್ರೀತಿಯ ಗೆಳತಿ
ನಾಳೆ ಆಕೆ ನನ್ನ ತಾಯಿಯೇ ?
ಇಲ್ಲ- ನಮ್ಮಿಬ್ಬರಿಗೂ ಅಮ್ಮ
ಎನ್ನುತ್ತಿದ್ದಾಳೆ-ನನ್ನ ಜೀವದ ಗೆಳತಿ
ಅವರಮ್ಮ !

‍ಲೇಖಕರು Admin

December 25, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: