ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೊಗಸೆ ತುಂಬ ಮೌನ ಹೊತ್ತು..

ಲಡಾಯಿ ಬಸು

ಲಡಾಯಿ ಪ್ರಕಾಶನ

ಜೇಲಿನ ಸರಳುಗಳಲ್ಲಿ

    ಜೇಲಿನ ಸರಳುಗಳಲ್ಲಿ ಕೂಡಿಹಾಕಿದ ದಿನ ನನ್ನ ಬಳಿ ಸಮಯವಿತ್ತು ಆದರದು ಮಗಳ ಮುನಿಸ ರಮಿಸಲು ಗೆಳತಿ ಕಳಿಸಿದ ಇಷ್ಟದ ಪುಸ್ತಕ ಓದಲು ಊರ ದಾರಿಯ ಮರಗಳೊಂದಿಗೆ ಸುತ್ತಲು ಬರುವುದಿಲ್ಲ! ಈಗದು ನನ್ನ ನೆನಪು – ನೋವುಗಳ ಜೊತೆಗಾರ! ಪಹರೆ ಕಾಯುವ ಬೂಟುಗಾಲಿನ ಸಪ್ಪಳದಲ್ಲಿ ಬೊಗಸೆ ತುಂಬ ಮೌನ ಹೊತ್ತು ಹಗಲ ಗಳಿಗೆಗಳು ಕರಗುತ್ತಿವೆ! ಎಲ್ಲೋ ಕುಂತು ವ್ಯೂಹ ರಚಿಸುವ ಕಪ್ಪು ಶಕ್ತಿಗಳು ಗಾಳಿಯೂದುತ್ತಿವೆ ನನ್ನೊಳಗಿನ ಖಿನ್ನ ಕಿಚ್ಚಿಗೆ! ನನ್ನ ಕಣ್ಮುಂದೆ ಡುಬ್ಬದ ಮೇಲೆ ಖಾಲಿ ದಿನದ ಹೆಣ ಹೊತ್ತು ಸಮಯ ಜೇಲಿನ ಗೋಡೆಗಳ ಮೇಲೆ ಇಳಿ ಬೀಳುವ ನೆರಳ ಕೆಳಗೆ ತೆವಳುತ್ತಿದೆ ಹೆಜ್ಜೆ ಗುರುತಿಲ್ಲದೆ!   ಈ ದಿನಕ್ಕಾಗಿಯೇ ಹೊಸೆದ ಕನಸುಗಳು ಹೋಗಬೇಕಾದ ಊರು ಹತ್ತಿರದವರ ಬಳಿ – ಆಡಬೇಕಾದ ಮಾತು ಕೊಂಡಿ ಕಳಚಿ ಏಕಾಂತದಲ್ಲಿ ಕುಂಟೋಬಿಲ್ಲೆಯಾಡುತ್ತವೆ…! ಒಂದು ಕ್ಷಣ ಕಣ್ಣೊಳಗೆ ಆಕಾರವಿರದ ಚಿತ್ರಗಳು ಮೂಡುತ್ತವೆ. ಮರೆಯಾಗುತ್ತಿಲ್ಲ: ಈ ದಿನ, ರಿಪೇರಿಗೆ ಬಿಡುವುದಿತ್ತು ಮಗಳ ಪೆಡಲ್ ಮುರಿದ ಸೈಕಲ್ಲು! ಹೊಲಿದುಕೊಳ್ಳುವದಿತ್ತು ಹರಿದ ಚಪ್ಪಲಿಯ ಉಂಗುಟ! ಹಿಡಿಯಬೇಕಿತ್ತು ದಿನಗೂಲಿಗಳ ರ್‍ಯಾಲಿಯ ಕೆಂಬಾವುಟ!!   ಜೇಲಿನ ಸರಳುಗಳಲ್ಲಿ ಕೂಡಿ ಹಾಕಿದ ದಿನ ನನ್ನ ಬಳಿ ಸಮಯವಿತ್ತು…!]]>

‍ಲೇಖಕರು G

25 March, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading