ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಸರದ ಬಾವಿಗೆ ಪಾತಾಳ ಗರಡಿ

– ಹಾರೀತ


ಮೆಟ್ಟಿಲಾಚೆ, ತಗ್ಗಿನ ಕೊನೆಗೆ ಕಾಣುವ ನೀರು
ಆಕಾಶದ ಚೂರು ಮೋಡಗಳು ಪ್ರತಿಫಲಿಸಿ
ಕದಡುತ್ತಾ ನಿಂತ ನೋಟ
 
ಚೈತನ್ಯವೆಲ್ಲ ಆಳದ ಹುದುಗಿನಲ್ಲಿ ಕಳೆದುಹೋಗಿದೆ ನೋಡಿ
ಪಾತಾಳಗರಡಿಗೆ ಸಿಕ್ಕಿದ್ದೆಲ್ಲ
ಹಳೆಯ ಪ್ಲಾಸ್ಟಿಕ್ ಬಿಂದಿಗೆ, ಚೊಂಬು , ತಾತನ ಕಂಚಿನ ಕಾಫಿ ಲೋಟ
ವರ್ತಮಾನಕ್ಕೊದಗದ ನೆನಪುಗಳ ಕಂತೆ
 
ಬೇಸಿಗೆಯ ತಾಪಕ್ಕೆ ಮಳೆನೀರಿನ ಕನವರಿಕೆಯಂತೆ
ಕಾದು ಕೂತೆ ನಿಶ್ಚಲ ಕುಣಿಕೆಯ ಬೀಸಿ
ಜೀವ ಸಿಗುವ ಆಶಯದಲ್ಲಿ
 
ಚಂಚಲ ನೆನಪುಗಳೆಲ್ಲ ತೆರೆಮರೆಯಲ್ಲಿ
ಸುಧಾರಿಸಿಕೊಳ್ಳುತಿರುವಾಗ,
ಹುಡುಕುವುದೇನಿದೆ ರಂಗದಮೇಲೆ
ಕಾಣದ ಕನಸುಗಳು ಮೈ ತುಂಬಿ ಕುಣಿಯುವತನಕ.
 

‍ಲೇಖಕರು G

28 October, 2014

6 Comments

  1. mmshaik

    koneya saalugaLu hidisidvu..

  2. Aparna Kalley

    Really loved the metaphor of ‘Paathala garadi’ for reminiscing memories or searching for something which makes the search worthwhile. I wish you write more. Enjoyed the rich imagery and got in touch with the emotions it evoked. Thanks

  3. Madhavi

    chennagide. melunotakke saralavagi kandaru
    layered mattu nuanced aagide.

  4. hari prasad k r

    kaanada kanasugalu mytumbi kuniyuva tavaka agabekeno….

  5. hema

    chennagide haritha..ishta aytu tumbha 🙂

  6. Anitha

    eshtu chenda bariteera…innu ashtu bareeri anna…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading