ಪುರಾವೆ
– ಬಸವರಾಜ ಸೂಳಿಬಾವಿ
ನನ್ನ ಮುಂದೆ ಏನೂ ಇಲ್ಲ ಹಿಂದೆಯೂ.. ಈಗ ಕೂಡುವ ಮಾತನ್ನಷ್ಟೇ ಅಡೋಣ ಬೇಡ ಮುರಿದ ಭಾಷೆಯನ್ನು ಸಾಕ್ಷಿ ಮಾಡಿಕೊಳ್ಳುವುದು ಗುಳೆಹೋದ ಸ್ವಪ್ನಗಳ ಕರೆದು ಮಾತಿಗೆ ಕೂಡೋಣ ಬಾ.. ಆಡುವ ಮನಸಿರದಿದ್ದರೂ ಮಾತು ಮರೆತು ಎದುರುಬದುರಾಗಿ ಒಂದು ಕ್ಷಣ ನಿಲ್ಲೋಣ ಎದೆಯ ನಿಜರೂಪ ತೋರುವ ಕಂಗಳ ತೆರೆದಿಟ್ಟು ಒಮ್ಮೆ ಸುಮ್ಮನೆ ನೀನು ನನಗಾಗಿ ನಾನು ನಿನಗಾಗಿ ಬರೆದ ಕವಿತೆ ಸಂಜೆಗೆ ರಂಗೇರಿಸಿದ ನಿನ್ನ ಹಾಡು ಕೈತೋಟದ ಒಂಡಿಯ ಮೇಲೆ ಕಲೆತ ದೇಹಗಳ ಪಿಸುಮಾತು ನೆನೆಯೋಣ!
ಕೊನೆಯ ಸಲ ಅಂದುಕೊಂಡೇ
ಜಡಿಮಳೆಗಿಂತ ರಭಸವಾಗಿ
ನಮ್ಮ ನಡುವೆ ಹರಿದಾಡಿದ
ಸಂದೇಶ ಅಕ್ಷರಗಳ ತೆಪ್ಪದಲಿ
ಒಂದು ಸುತ್ತು ತೇಲೋಣ!
ನಮ್ಮ ಅಗಣಿತ ಪತ್ರಗಳ ಅಕ್ಷರಗಳೊಡಲಲ್ಲಿ ನಗುವ
ರಾಗರತಿಯ ಸದ್ದು ಕೇಳದಷ್ಟು
ನಮ್ಮ ಕಿವಿಗಳಿನ್ನೂ ಕಿವುಡಾಗಿಲ್ಲ!
ನಮ್ಮ ಮಿಲನದ ಹಾಸಿಗೆಯ ಸುಕ್ಕು
ಬದಲಾಗುವ ಮುನ್ನ
ತುಸುದೂರ ನಿಂತೇ ನೋಡೋಣ!
ಇದ್ದಲ್ಲಿಗೇ ಬಂದು
ನಿನ್ನ ಪಾವು ಜಾಗದಲ್ಲಿ
ನನ್ನ ಚಿಗುರಲು ಬಿಡು
ಬದುಕು ಕಟ್ಟಲು ಅವಕಾಶ ಕೊಡು
ಅಂದವಳ ದನಿಗೆ ಅರಳಿದ
ದೇಹದ ಸಂಭ್ರಮ ಇನ್ನೂ ಅಳಿದಿಲ್ಲ
ಛಪ್ಪನ್ನಾರು ಬಣ್ಣ ಕಲಿಸಿ
ಮೆಲ್ಲನೆ ಬೆನ್ನ ಸವರಿ
ಉಳಿದ ಚಳಿಗಾಲಕ್ಕಿರಲೆಂದು
ನೀ ಕೊಟ್ಟ ಕಂಬಳಿ ಹಳೆಯದಾಗಿಲ್ಲ!
ಬೆರಳ ತುದಿಯಲಿ ಬದುಕಿನ ಪುರಾವೆಗಳು
ಕಂದುಗಟ್ಟುವ ಸಮಯ ಬಂದಿದೆ
ಈ ಗಳಿಗೆಯಲ್ಲಿ ನಸೀಬಿನ ಮಾತು ಬೇಡ
ನಿನ್ನ ನಂಬುತ್ತೇನೆ
ನೀ ನನಗೆ ಹೊಸ ಜನ್ಮ ಕೊಟ್ಟಾಕೆ
ಅದನ್ನು ಮರಳಿಸಿಬಿಡು ಎಂದರೆ
ಇಲ್ಲವೆನ್ನಲು ನಾನ್ಯಾರು?!
ಇಷ್ಟಾದಮೇಲೂ
ಬರಬಾರದೆನಿಸಿದರೆ ಅಲ್ಲೇ ಇರು
ನಿನ್ನ ಗೈರುಹಾಜರಿಯಲ್ಲಿ
ಹೃದಯ ಜೀವಂತವಿದೆ ಎಂದಾದರೆ
ನೀನಿನ್ನೂ ಇರುವೆ
ಸಖಿ, ಈ ಜನ್ಮಕ್ಕಿಷ್ಟು ಸಾಕು!]]>







Bahala dinagal nantara nimma kavana odide sir. Olleya kavana.
chennagide