ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬೆಸೆಯುತ್ತಾ ಬೆಳೆದ ಅಗ್ನಿಸಖ್ಯ…' – ಜ್ಯೊತಿ ಮಹಾದೇವ್ ಕವನ

ಅಗ್ನಿ ಬಂಧ

ಜ್ಯೊತಿ ಮಹಾದೇವ್

ಅಗ್ನಿಸಾಕ್ಷಿಯಾಗಿ ಕೈ ಹಿಡಿದವಳು
ತೆಳ್ಳಗೆ ಬೆಳ್ಳಗೆ ಬಳುಕುವ ಲತಾಂಗಿ
ಗಲ್ಲ ಹಿಡಿದೆತ್ತಿ ರಮಿಸಿ ಮುದ್ದಿಸಿ
ತುಟಿಗಿರಿಸಿದ್ದೇ ಕಾರಣವಾಗಿ ವಿನಾಸುಖ;
 
ಬೆಸೆಯುತ್ತಾ ಬೆಳೆದ ಅಗ್ನಿಸಖ್ಯ
ಸುಖಿಸುತ್ತಾ ಕೆರಳುತ್ತಾ ನರಳಿತು
ಒಳಗಿಳಿದವಳು ಒಳಸೆಳೆದವಳು
ಒಳಗೊಳಗೇ ಉರಿಸಿದ್ದು ಹೊಸಮುಖ
 
ಏರಿದ ಉನ್ಮತ್ತ ಮತ್ತ ನಶೆ ಹರಿದಾಗ
ದಾರ್ಶನಿಕನತ್ತ ವ್ಯಾಕುಲ ಚಿತ್ತ
ಹೊಸೆಯದ ಅಗ್ನಿಬಂಧ ಮುಕ್ತಿಧಾಮದತ್ತ
ವಿಚ್ಛೇದಿತ ಪರಿವೃತ್ತ ದತ್ತ ಮೊತ್ತ
ಛೇದಿಸಿದರೂ ವಿಚ್ಛಿನ್ನ ಬಂಧ
ಎದ್ದೇಳದ ಛಿದ್ರಛಿದ್ರ ಪಾಶಶೇಷ

‍ಲೇಖಕರು G

6 July, 2013

3 Comments

  1. Tejaswini Hegde

    ಹೊಸೆಯದ ಅಗ್ನಿಬಂಧ ಮುಕ್ತಿಧಾಮದತ್ತ
    ವಿಚ್ಛೇದಿತ ಪರಿವೃತ್ತ ದತ್ತ ಮೊತ್ತ…. good poem.. Nice…

  2. ವಿದ್ಯಾ.ಕುಂದರಗಿ.

    ಅಗ್ನಿಸಾಕ್ಷಿ….ಅಗ್ನಿಸಖ್ಯ…. ಅಗ್ನಿಬಂಧ….ಕೊನೆಯಲ್ಲಿ
    ಎದ್ದೇಳದ ಛಿದ್ರಛಿದ್ರ ಅಗ್ನಿಪಾಶ….ಅಗ್ನಿಶೇಷ..
    ಆಗಿದ್ದರೆ ಚೆನ್ನಾಗಿತ್ತೇನೋ?
    ತುಂಬಾ ಅರ್ಥಪೂರ್ಣ ಕವಿತೆ.

  3. nagraj.harapanahalli

    ಆಗ್ನಿ ಜೊತೆ ಸರಸ, ಗಂಡು ಹೆಣ್ಣು ಬೆರೆವ ಪರಿ ಬೆರೆಗು….ಕವಿತೆ ಸೊಗಸು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading