ಕ್ಯೂಬಾದ ರಾಷ್ಟ್ರನಾಯಕನೆಂದೇ ಪರಿಗಣಿಸಲಾಗುತ್ತಿರುವ ಜೋಸ್ ಮಾಟರ್
ಹೃದಯದಲ್ಲಿ ಪ್ರೀತಿ ಮತ್ತು ಶಾಂತಿಗಾಗಿ ಇದ್ದ ಹಪಹಪಿಯನ್ನು ಅವನ ಕಿರುಗವನದಲ್ಲಿ ಕಾಣಬಹುದು
ಬೆಳೆವೆ ನಾ ಬಿಳಿ ಗುಲಾಬಿಯೊಂದನು
ಪ್ರಭಾಕರ ಮ ನಿಂಬರಗಿ
ಬಿಳಿ ಗುಲಾಬಿಯೊಂದನು ಬೆಳೆವೆ ನಾ
ಜನೆವರಿಯಂತೆಯೇ ಜುಲೈನಲ್ಲಿ
ನನ್ನ ವಿಶ್ವಸ್ತ ಗೆಳೆಯನಿಗಾಗಿ
ತೆರೆದ ಬಾಹುಗಳಿಂದ ಎನ್ನ ಅಪ್ಪಿಕೊಳ್ಳುವವವವನಿಗಾಗಿ.
ಮತ್ತೆ, ಬೆಳೆಯೆ ನಾ ತುರಿಕೆ ಗಿಡಗಳ
ಮುಳ್ಳುಗಳ, ಮಿಡಿಯುವ ನನ್ನ
ಹೃದಯವನೊಡೆವ ಕ್ರೂರಿಗಾಗಿ
ಬೆಳೆವೆ ಬಿಳಿ ಗುಲಾಬಿಯೊಂದನು ನಾನವನಿಗಾಗಿ






0 Comments