
ಮೂಲ: Lord Byron

ಕನ್ನಡಕ್ಕೆ : ಕೃಷ್ಣಾ ಕೌಲಗಿ
ನಿರಭ್ರ ಆಗಸದಲ್ಲಿ
ಮಿನುಗುತಾರೆಗಳ ನಡುವೆ,
ಕತ್ತಲು ರಾತ್ರಿಯ ಎಲ್ಲ
ಮೆರಗುಗಳ ಕಣ್ಣಂಚಿನಲ್ಲಿ
ಹಿಡಿದಿಟ್ಟುಕೊಂಡು
ಹಗಲಲ್ಲಿಯೂ ಕಾಣದ
ಮೋಡಿಯ ಮುದದಲ್ಲಿ
ಅವಳು ನಡೆಯುತ್ತಾಳೆ…
ಹಾಗೆ ಒಂದು ನೆರಳು,
ಹೀಗೆ ಒಂದು ಬೆಳಕು-ಸೆಳಕು,
ಆ ಹೆಸರಿಸಲಾಗದೊಂದು
ವೈಭವದ ಪಲುಕು,
ದೈವೀ ಮುಖದ ಮೇಲೆ ಬಿಂಬಿಪ ಸ್ವಚ್ಛ, ಶುಭ್ರ ಸ್ವರ್ಗದ ತುಣುಕೊಂದು ನಡೆದು ಬರುವಂತೆ…

ಆ ಗಲ್ಲಗಳ ಮೇಲೆ,
ಆ ಹುಬ್ಬುಗಳ ನಡುವೆ,
ಮೆದು, ಶಾಂತ, ಅಪರೂಪದ ಚಲುವು
ನಿಲುವು-
ಮನಮೋಹಕ ನಗೆ ಮೊಗದ ಕಾಂತಿ,
ಚಂದದ ಬದುಕಿನ
ಮೇಲೆ ಅಗಾಧ ಪ್ರೀತಿ,
ಈ ಎಲ್ಲವುಗಳ ಸಂಗಾತಿ, ಸಂಪ್ರೀತಿ-
ಇವಳು ನಡೆದು ಬರುವ ರೀತಿ…






0 Comments