ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆಳಗು ಮೋಡ ಮುಸುಕಿ..

-ಆರ್ ಜಿ ಹಳ್ಳಿ ನಾಗರಾಜ

ಗಂಟೆ, ಜಾಗಟೆಗಳ‌ ಸದ್ದು

ಬೆಳಗು ಮೋಡ ಮುಸುಕಿ
ಸೂರ್ಯ ಮರೆಯಾಗಿದ್ದ
ಕಾಯುತ್ತಿದ್ದೆ. ಮನದಲ್ಲೇಕೋ… ಕಸಿವಿಸಿ.

ಸೈಕಲ್ ಏರಿಬಂದ ಹುಡುಗ ಗೇಟಿಗೆ
ಪೇಪರ್ ಎಸೆದು ಹೋದ.
ಎಂದಿಲ್ಲದ ಕುತೂಹಲದಲ್ಲಿ ಆ ಈ ಊ…
ಪತ್ರಿಕೆಗಳಲ್ಲಿ ಕಣ್ಣಾಯಿಸುವ ಮುನ್ನ
ಸಂಗಾತಿ ಕೊಟ್ಟ “ಟೀ” ಕೈಯಲ್ಲಿ…

ಹಿಡಿದ ಕಪ್ಪೊಳಗಿನ “ಟೀ ಹಬೆ” ಗಾಳಿಯಲ್ಲಿ ತೇಲಿ
ಒಂದು ಎರಡು ಸಿಪ್ ತುಟಿ ಸೋಕಿದರೂ
ನಾಲಗೆಗೆ ಒಗರು, ರುಚಿಯ ಸವಿ ನೀಡಲಿಲ್ಲ.

ಮಹಡಿ ಮೆಟ್ಟಿಲೇರಿ ತಂಗಾಳಿಗೆ ಮೈಯೊಡ್ಡಿದೆ
ಬಹು ಮಹಡಿ ಕಟ್ಟಡಗಳು
ಇಣುಕಿದ ಕವಲು ರಸ್ತೆಗಳ ನೋಡುತ್ತ
ಸಿಗರೇಟು ತುಟಿಗಿಟ್ಟು
ಧೂಮಲೀಲೆಯಲ್ಲಿ ಆಟವಾಡಿದೆ!
ಬಹುಮಹಡಿ, ರಸ್ತೆ, ವಾಹನಗಳು
ಮಂಜು ಮುಸುಕಲ್ಲಿ ಕರಗಿ ಹೋದಂತಾದವು.

ಮೆಟ್ಟಿಲಿಳಿದು ಬರುವಾಗ ಪಕ್ಕದ
ದೇವಸ್ಥಾನದಲ್ಲಿ ಗಂಟೆ, ಜಾಗಟೆಗಳು,
ಮಂತ್ರಘೋಷ ಮೊಳಗಿದವು.

ಅಂಗೈಗೆ ಕಟ್ಟಿದ್ದ ಮಂತ್ರ ಯಂತ್ರದ
ಬಣ್ಣಬಣ್ಣದ ದಾರಗಳು ಕುಣಿಯುತ್ತ
ರಸ್ತೆ ಅಳೆದವು.
ಜ್ಯೋತಿಷಿ, ಪುರೋಹಿತರು
ಶಾಲು ಬದಲಾಯಿಸಿದರು.

‍ಲೇಖಕರು Admin

28 May, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading