ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 4 – ಒಂದು ಲಕ್ಷ ಉಸಿರಿನ ಮೈದಾನ MCG

ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.

ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.

ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಿಂದ ಎಂಡಿ (ಆಯುರ್ವೇದ) ಪದವಿ ಪಡೆದರು.

ಬೆಂಗಳೂರಿನ ಅತ್ಯಂತ ಯಶಸ್ವಿ ಆಯುರ್ವೇದ ಅಂಗಡಿಗಳ ಸರಪಳಿಯಾದ ಆಯುರ್ ಸೆಂಟ್ರಲ್ ಅನ್ನು ಸಹ-ಸ್ಥಾಪಿಸಿದರು.

ಇದೀಗ ‘ಅವಧಿ’ಯಲ್ಲಿ ‘ಕಾಂಗರೂ ನಾಡಿನಲ್ಲಿ’ ಶೀರ್ಷಿಕೆಯ ಹೊಸ ಸರಣಿಯೊಂದಿಗೆ ಬರುತ್ತಿದ್ದಾರೆ.

ಸರಣಿ – 4

ಫೋಟೋ ಕೃಪೆ : ಪ್ರವೀಣ್ ಮೂರ್ತಿ

ಮೆಲ್ಬೋರ್ನಿನಲ್ಲಿ ಕೆಲವು ಜಾಗಗಳು city map ನಲ್ಲಿ ಮಾತ್ರ ಇರುವುದಿಲ್ಲ. ಅವು ಜನರ collective memory ಯೊಳಗೆ ಇರುತ್ತವೆ. Melbourne Cricket Ground ಅಂಥ ಜಾಗ.

ಆ ಬೆಳಿಗ್ಗೆ ನಾವು ನಾಲ್ವರು — ನೈನಾ, ಪ್ರವೀಣ್, ರಂಜನಾ ಮತ್ತು ನಾನು — Jolimont station ಹತ್ತಿರ ಇಳಿದಾಗ Melbourne ತನ್ನ ಎಂದಿನ ಬೂದು ಬಣ್ಣದಲ್ಲಿತ್ತು. ಚಳಿ ಗಾಳಿ ನಿಧಾನವಾಗಿ ಮುಖಕ್ಕೆ ತಾಗುತ್ತಿತ್ತು. ದೂರದಲ್ಲಿ tram ಗಂಟೆ ಕೇಳಿಸುತ್ತಿತ್ತು. ಜನರು coffee ಕಪ್ ಹಿಡಿದು ನಡೆಯುತ್ತಿದ್ದರು.
ಅದರ ಮಧ್ಯೆ MCG ಕಾಣಿಸಿತು. ದೊಡ್ಡದು. ಆದರೆ ವಿಚಿತ್ರವಾದ ಮೌನ. TV ಯಲ್ಲಿ ಅದು ಯಾವತ್ತೂ crowd ಜೊತೆ ಕಾಣಿಸುತ್ತದೆ. ಶಬ್ದದ ಜೊತೆ. commentary ಜೊತೆ. ಆದರೆ ಖಾಲಿ MCG ನೋಡಿದಾಗ ಮಾತ್ರ ಅದರ ನಿಜವಾದ ಗಾತ್ರ ಅರ್ಥವಾಗುತ್ತದೆ.
ಒಂದು ಲಕ್ಷ ಕುರ್ಚಿಗಳು. ಮನುಷ್ಯನ ego ಯನ್ನು ಸಣ್ಣದಾಗಿಸಲು ಸಾಕಾಗುವಷ್ಟು.

ಟೂರ್ ಗೈಡ್ Le Hoa ನಗುತ್ತ ಹೇಳಿದಳು:
“ಒಳಗೆ ಬನ್ನಿ.”
ನಾನು ಒಳಗೆ ಹೋದೆ. ಮತ್ತೆ ಹೊರಗೆ ಬರಲು ಮನಸ್ಸಾಗಲಿಲ್ಲ.
ಒಳ್ಳೆಯ ಮೈದಾನಗಳು match ಇಲ್ಲದ ದಿನಗಳಲ್ಲೂ ಜೀವಂತವಾಗಿರುತ್ತವೆ. corridor ಗಳಲ್ಲಿ ಹಳೆಯ photographs. faded scoreboards. century ಹಳೆಯ team photos. polish ಮಾಡಿದ ಮರದ ವಾಸನೆ. spikes ನೆಲಕ್ಕೆ ತಾಕಿದಾಗ ಕೇಳುವ ಖಾಲಿ echo.
ಅಲ್ಲಿ ನಡೆಯುವಾಗ stadium ಒಳಗೆ ಅಲ್ಲ, cricket ನೆನಪಿನೊಳಗೆ ನಡೆಯುತ್ತಿರುವ ಅನುಭವ ಬರುತ್ತದೆ.
Le Hoa ಹೇಳಿದಳು — MCG membership ಪಡೆಯಲು ಕೆಲವರು ಇಪ್ಪತ್ತು ವರ್ಷ ಕಾಯುತ್ತಾರೆ ಅಂತೆ.
ಆ ಕ್ಷಣದಲ್ಲಿ ಪ್ರವೀಣ್ ನಕ್ಕು ಹೇಳಿದ.
“ಅದು ಏನೂ ಅಲ್ಲ. ನಮ್ಮ ತಿರುಮಲದಲ್ಲಿ ಶುಕ್ರವಾರ ನಡೆಯುವ ಶ್ರೀವಾರಿ ಪೂರ್ಣಾಭಿಷೇಕ ಸೇವೆಗೆ waiting period ಮೂವತ್ತಾರು ವರ್ಷ.”
ಎಲ್ಲರೂ ನಕ್ಕೆವು.
ಆದರೆ ಆ comparison ವಿಚಿತ್ರವಾಗಿ ಸರಿಯಾಗಿಯೇ ಅನ್ನಿಸಿತು.
ಕೆಲ ದೇಶಗಳು ದೇವರ ದರ್ಶನಕ್ಕಾಗಿ ಕಾಯುತ್ತವೆ.
ಕೆಲ ದೇಶಗಳು stadium ಗಳ ಸುತ್ತ. ಆಸ್ಟ್ರೇಲಿಯಾದಲ್ಲಿ cricket ಕೇವಲ ಆಟ ಅಲ್ಲ ಅನ್ನೋದು ಅಲ್ಲಿ ಅರ್ಥವಾಗುತ್ತದೆ. ಅದು national behaviour. discipline. ritual.

ಭಾರತದಲ್ಲಿ cricket ಒಂದು emotion. ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಒಂದು ಸುವ್ಯವಸ್ಥೆ.

Le Hoa ಮಾತನಾಡುತ್ತಾ ಸಾಗುತ್ತಿದ್ದಳು. 1853ರಲ್ಲಿ ಆರಂಭವಾದ ಈ ಮೈದಾನ Olympics ನೋಡಿದೆ. AFL finals ನೋಡಿದೆ. Pope ಭೇಟಿ ನೋಡಿದೆ. Coldplay concert ಕೂಡ ನೋಡಿದೆ. ಆದರೂ ಅದರ ನಿಜವಾದ ಧರ್ಮ cricket ಅನ್ನೋದು ಎಲ್ಲೆಲ್ಲೂ ಕಾಣಿಸುತ್ತದೆ.

ಡ್ರೆಸ್ಸಿಂಗ್ ರೂಮ್ ಒಳಗೆ ಹೋದಾಗ ನನಗೆ ಮೊದಲ ಆಶ್ಚರ್ಯ ಕಾದಿತ್ತು. ಅದು ಚಿಕ್ಕದಾಗಿತ್ತು. ನಿಜವಾಗಿಯೂ ಚಿಕ್ಕದು.
ಇಷ್ಟು ದೊಡ್ಡ ಆಟಗಾರರು ಇಷ್ಟು ಸಣ್ಣ ಜಾಗದಲ್ಲಿ ಕೂತು ಮೌನವಾಗಿ ಯೋಚಿಸಿದ್ದು ಸೋಜಿಗ ಎನಿಸಿತು. Bradman ಇಲ್ಲಿ ಕುಳಿತಿದ್ದಾನೆ. Allan Border ಇಲ್ಲೇ pads ಕಟ್ಟಿದ್ದಾನೆ. Kohli ಬಹುಶಃ ಇಲ್ಲೇ silence ನಲ್ಲಿ gloves ಸರಿಪಡಿಸಿದ್ದಾನೆ. ದೊಡ್ಡ ಆಟಗಾರರಿಗೂ ಭಯ ಇರುತ್ತದೆ. ಅವರು ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಅಷ್ಟೇ.
ನಾನು ಒಂದು locker ಮುಟ್ಟಿದೆ. ತಣ್ಣಗೆ ಇತ್ತು. ಆದರೆ ಆ ಜಾಗದೊಳಗೆ ಏನೋ ಬೆಚ್ಚಗಿತ್ತು.

ಜೀವನದಲ್ಲೂ ಕೆಲವು ಕೊಠಡಿಗಳು ಹೀಗೇ ಇರುತ್ತವೆ. operation theatre ಹೊರಗಿನ waiting room. job interview ಮುಂಚಿನ ಕುರ್ಚಿ. ಮದುವೆ ಮಂಟಪದ ಹಿಂದಿನ ಸಣ್ಣ ಕೊಠಡಿ. ಮನುಷ್ಯ ತನ್ನ ಜೀವನದ ಮುಂದಿನ ಚೆಂಡನ್ನು ಎದುರಿಸುವ ಜಾಗಗಳು.

ಮುಂದೆ ಒಂದು framed photograph ಇತ್ತು.
Bradman. Sachin.
ಇಬ್ಬರೂ ನಗುತ್ತ ನಿಂತಿದ್ದರು.
ಆ ಚಿತ್ರದಲ್ಲಿ cricket ಇತಿಹಾಸ ತನ್ನ ಎರಡು ಕಾಲಗಳನ್ನು ಒಂದೇ ಫ್ರೇಮ್‌ನಲ್ಲಿ ನಿಲ್ಲಿಸಿದಂತೆ ಕಾಣಿಸಿತು. ಆ ಚಿತ್ರಪಟ ನಿಜಕ್ಕೂ Monalisa of MCG.

Le Hoa ಒಂದು ಕಥೆ ಹೇಳಿದಳು. 1882ರಲ್ಲಿ Australia, England ತಂಡವನ್ನು ಓವಲ್ ನಲ್ಲಿ ಸೋಲಿಸಿತು. ಅದರ ನಂತರ ಒಂದು newspaper mock obituary ಬರೆದಿತಂತೆ — “English cricket died. The body will be cremated and the ashes taken to Australia.” ಅಲ್ಲಿಂದಲೇ “Ashes” ಹುಟ್ಟಿತು.
ಬಹುಶಃ joke ಆಗಿ ಆರಂಭವಾಗಿ, religion ಆಗಿ ಬದಲಾಗಿದ ಏಕೈಕ cricket series ಅದು.

ನನ್ನ ಕಾಲೇಜು ದಿನಗಳು suddenly ನೆನಪಾದವು.
ರಾತ್ರಿ ಜಾಗರಣೆ ಮಾಡಿ radio commentary ಕೇಳಿದ ದಿನಗಳು. Allan Border. Botham. Shane Warne. Australia ಆಗ ಅಷ್ಟು ದೂರದ ದೇಶ ಅನ್ನಿಸಲಿಲ್ಲ. TV ಒಳಗೆ ಇರುವ ಒಂದು obsession ಅನ್ನಿಸಿತು. ನಾವು ಪಂದ್ಯ ನೋಡುತ್ತಿದ್ದದ್ದು cricket ಗಾಗಿ ಮಾತ್ರ ಅಲ್ಲ. ಆ ಆಟದೊಳಗೆ ನಮ್ಮದೇ ಯೌವನ, ಸ್ನೇಹ, ರಾತ್ರಿ ಜಾಗರಣೆ, ಸೋಲು-ಗೆಲುವಿನ ಸಣ್ಣ ಕನಸುಗಳು ಎಲ್ಲೋ ಸೇರಿಕೊಂಡಿದ್ದವು.

ನಂತರ ನಾವು pitch ಕಡೆ ನಡೆದೆವು. ಇಪ್ಪತ್ತೆರಡು ಗಜ.
ಅಷ್ಟೆ. ಬೌಲರ್ ಮತ್ತು ಬ್ಯಾಟ್ಸ್‌ಮನ್ ನಡುವಿನ ದೂರ ಇಪ್ಪತ್ತೆರಡು ಗಜ ಮಾತ್ರ. ಆದರೆ ಮಧ್ಯದಲ್ಲಿ ನಿಂತಾಗ ಅದು ದೊಡ್ಡದಾಗಿ ಕಾಣುತ್ತದೆ. ನಾನು crease ಮೇಲೆ ನಿಂತೆ.

ಖಾಲಿ stadium ನನ್ನ ಸುತ್ತ ಇತ್ತು. Melbourne ಚಳಿ ನಿಧಾನವಾಗಿ ಮುಖಕ್ಕೆ ತಾಗುತ್ತಿತ್ತು. ದೂರದಲ್ಲಿ ಒಂದು maintenance vehicle ಶಬ್ದ ಮಾತ್ರ ಕೇಳಿಸುತ್ತಿತ್ತು.
ಆ ಕ್ಷಣದಲ್ಲಿ ವಿಚಿತ್ರ realization ಬಂತು.
TV ಯಲ್ಲಿ ದೇವರಂತೆ ಕಾಣಿಸಿದ ಆಟಗಾರರು ಕೂಡ ಇದೇ ದೂರ ನೋಡಿರಬೇಕು. ಇದೇ ಗಾಳಿ ಕೇಳಿರಬೇಕು.
ಇದೇ grass smell ಮಾಡಿರಬೇಕು.

MCG pitch ಮಣ್ಣಿನಲ್ಲಿ local clay ಜೊತೆಗೆ ಬೇರೆ ಪ್ರದೇಶದ ಮಣ್ಣು mix ಮಾಡುತ್ತಾರೆ ಅಂತೆ ಎಂದು Le Hoa ಹೇಳುತ್ತಿದ್ದಳು. bounce, pace, durability — ಎಲ್ಲವೂ science. ಆದರೆ ಆ ಕ್ಷಣದಲ್ಲಿ science ಗಿಂತ silence ಹೆಚ್ಚು ನೆನಪಿನಲ್ಲಿ ಉಳಿಯಿತು.

ನಂತರ Members Stand. ಹಳೆಯ ಮರದ ಕುರ್ಚಿಗಳು. polish ಮಾಡಿದ ಮರದ ಮೃದುವಾದ ಹೊಳಪು. ಗಾಳಿಯಲ್ಲೇ history ಯ ವಾಸನೆ. ಒಂದು ಶತಮಾನಕ್ಕೂ ಹೆಚ್ಚು ಜನ ಇಲ್ಲಿ ಕೂತಿದ್ದಾರೆ. ಒಂದು boundary ಗೆ ಏಕಕಾಲದಲ್ಲಿ ಎದ್ದು ನಿಂತಿದ್ದಾರೆ. ಒಂದು wicket ಗೆ ಮೌನವಾಗಿದ್ದಾರೆ. ಕೆಲವರು ಸಂತೋಷದಲ್ಲಿ ಅಪ್ಪಿಕೊಂಡಿದ್ದಾರೆ. ಕೆಲವರು ಸೋಲಿನಲ್ಲಿ ತಲೆ ತಗ್ಗಿಸಿದ್ದಾರೆ. ಆ ಕ್ಷಣದಲ್ಲಿ ಜೀವನವೂ ಸ್ವಲ್ಪ stadium ತರವೇ ಅನ್ನಿಸಿತು. ಎಲ್ಲರೂ ತಮ್ಮ ತಮ್ಮ ತಂಡಕ್ಕಾಗಿ ಬದುಕುತ್ತಾರೆ.

ಕೊನೆಗೆ outfield ಮೇಲೆ ನಡೆಯಲು ಅವಕಾಶ ಕೊಟ್ಟರು. ಹುಲ್ಲು. MCG ಹುಲ್ಲಿನ ಬಗ್ಗೆ ಯಾರೂ ನನಗೆ ಹೇಳಿರಲಿಲ್ಲ. ಆದರೆ ಅದು ಬೇರೆ ರೀತಿ ಇತ್ತು.
ಪಾದದ ಕೆಳಗೆ ಮೃದುವಾಗಿ. ಸ್ವಲ್ಪ ತೇವವಾಗಿ. ಮೆಲ್ಬೋರ್ನ್ ಚಳಿಯನ್ನು ಒಳಗೇ ಹಿಡಿದಿಟ್ಟಂತಿತ್ತು. ಮಳೆ ಬಿದ್ದ ನಂತರ ನಮ್ಮ ಊರಿನ ಮೈದಾನದಿಂದ ಎದ್ದೇಳುವ ಮಣ್ಣಿನ ವಾಸನೆ ನೆನಪಾಯಿತು.
ಆ ಕ್ಷಣದಲ್ಲಿ ಒಂದು ಆಲೋಚನೆ ಬಂತು. ಈ ಹುಲ್ಲಿನ ಮೇಲೆ ಎಷ್ಟು ಜನ ನಡೆದಿರಬಹುದು.Bradman. Warne. Sachin.ಕಪಿಲ್ ದೇವ್. Gavaskar.
ಒಂದು ಲಕ್ಷ ಜನರ ಕೂಗು. ಸೋಲಿನ ಮೌನ.
ಗೆಲುವಿನ ಜಿಗಿತ.
ಆ ಹುಲ್ಲು ಎಲ್ಲವನ್ನೂ ಮೌನವಾಗಿ ಉಳಿಸಿಕೊಂಡಿದೆ.
ಆ ಕ್ಷಣದಲ್ಲಿ ಮೆಲ್ಬೋರ್ನ್ ಮತ್ತು ನಮ್ಮ ಊರಿನ ನಡುವಿನ ದೂರ ಕಡಿಮೆಯಾಯಿತು. ಕ್ರಿಕೆಟ್ ಬಹುಶಃ ಅದಕ್ಕೇ ದೊಡ್ಡದು. ಅದು ದೇಶಗಳನ್ನು ಅಲ್ಲ, ನೆನಪುಗಳನ್ನು ಸಂಪರ್ಕಿಸುತ್ತದೆ.

Le Hoa ಒಂದು ಕೊನೆಯ fact ಹೇಳಿದಳು. Boxing Day Test ಸಮಯದಲ್ಲಿ crowd roar ಅನ್ನು players ತಮ್ಮ ಎದೆಯೊಳಗೆ feel ಮಾಡುತ್ತಾರೆ ಅಂತೆ. ನಾನು ಖಾಲಿ stadium ನೋಡಿದೆ. ಒಂದು ಲಕ್ಷ ಖಾಲಿ ಕುರ್ಚಿಗಳು. ಆದರೆ ಅವು ಖಾಲಿ ಆಗಿರಲಿಲ್ಲ. Bradman ಇದ್ದರು. Warne ಇದ್ದರು. Sachin ಇದ್ದರು. ನನ್ನ ಕಾಲೇಜು ದಿನಗಳು ಇದ್ದವುಮೊದಲ ಬಾರಿ cricket ನೋಡಿ ಜೋರಾಗಿ ಕೂಗಿದ ಹುಡುಗ ಇನ್ನೂ ಅಲ್ಲೇ ಕುಳಿತಿದ್ದ.
ಟೂರ್ ಮುಗಿದಿತ್ತು. Le Hoa ನಗುತ್ತ ಹೇಳಿದಳು
“Thank you.”
ನಾನು ಒಮ್ಮೆ ಹಿಂದೆ ತಿರುಗಿ ನೋಡಿದೆ.
ಕೆಲ ಮೈದಾನಗಳು match ಮುಗಿದ ಮೇಲೂ ಖಾಲಿಯಾಗುವುದಿಲ್ಲ. ಯಾಕೆಂದರೆ ಕೆಲ ಆಟಗಳು scorecard ನಲ್ಲಿ ಮುಗಿಯುವುದಿಲ್ಲ. ಅವು ಮನುಷ್ಯರೊಳಗೆ ಮುಂದುವರಿಯುತ್ತವೆ.

। ನಾಳೆಗೆ ।

‍ಲೇಖಕರು Admin

28 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading