ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮನ ಜೆ ಕುಮಾರ್ ಅವರ ‘ದಿ ಮಿಸ್ಟಿಕಲ್ ವೇವ್ಸ್’ ಬಿಡುಗಡೆ

*ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕೃತ, ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಅಮನ ಜೆ ಕುಮಾರ್ ಅವರ 5ನೇ ಪುಸ್ತಕ “ದಿ ಮಿಸ್ಟಿಕಲ್ ವೇವ್ಸ್” ಅನ್ನು ಬಿಡುಗಡೆ ಮಾಡಿದರು* ಶ್ರೀಯುತರು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಗೌರವಾಧ್ಯಕ್ಷರು ಹಾಗೂ ಲೈನಸ್ ಪಾಲಿಂಗ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾಗಿದ್ದಾರೆ. ಅಲ್ಲದೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಪುಸ್ತಕದ ಮುನ್ನುಡಿಯನ್ನು ಅಂತರರಾಷ್ಟ್ರೀಯ ಬುಕ್ಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಬಾನು ಮುಷ್ಟಾಕ್ ಅವರು ಬರೆದಿದ್ದಾರೆ.

ಪುಸ್ತಕದ ಬಗ್ಗೆ – “ದಿ ಮಿಸ್ಟಿಕಲ್ ವೇವ್ಸ್” (ಕವನ ಸಂಕಲನ)

ದಿ ಮಿಸ್ಟಿಕಲ್ ವೇವ್ಸ್ ಒಬ್ಬ ವ್ಯಕ್ತಿಯ ಜೀವನ ಪಯಣದ ಪ್ರತಿಬಿಂಬದಂತಿದೆ. ಅನುಭವಗಳು, ನಿರೀಕ್ಷೆಗಳು ಮತ್ತು ಅಪಾರ ಆನಂದದ ಸಂಯೋಜನೆಯಾಗಿರುವ ಈ ಕೃತಿ ಬ್ಲ್ಯಾಕ್‌ಔಟ್ ಕವನಗಳು ಮತ್ತು ಸೊನೆಟ್‌ಗಳ ಸಮನ್ವಯವಾಗಿದೆ. ಕಾವ್ಯದ ಎರಡು ವಿಭಿನ್ನ ಶೈಲಿಗಳ ಅದ್ಭುತ ಸಂಯೋಜನೆಯಾದ ಈ ಕೃತಿ ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರತಿಯೊಂದು ಪದವೂ ತನ್ನೊಳಗೆ ಆಳವಾದ ಅರ್ಥ ಮತ್ತು ಚಿಂತನೆಯ ಸಾಗರವನ್ನು ಹೊಂದಿದ್ದು, ಓದುಗರ ಕಲ್ಪನೆ ಹಾಗೂ ಬುದ್ಧಿವಂತಿಕೆಯಿಂದ ಅನಾವರಣಗೊಳ್ಳುವಂತಹ ವಿಶಿಷ್ಟತೆಯನ್ನು ಹೊಂದಿದೆ. ಕಡಿಮೆ ಪದಗಳಲ್ಲಿ ಹೆಚ್ಚು ಅರ್ಥವನ್ನು ವ್ಯಕ್ತಪಡಿಸುವ ಈ ಕೃತಿ ಅನೇಕ ಕಥೆಗಳ ನೇಯ್ಗೆಯಂತಿದೆ.

ಅಮನ ಜೆ ಕುಮಾರ್ ಅವರು ಇತ್ತೀಚೆಗೆ ಆರ್.ವಿ. ಪಿಯು ಕಾಲೇಜು, ಜಯನಗರದಲ್ಲಿ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದಾರೆ.

ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಸ್ಕೂಲ್‌ನಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, 11ನೇ ವಯಸ್ಸಿನಲ್ಲಿಯೇ ಅವರು ಕವನಗಳು ಹಾಗೂ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದರು.

ಇದುವರೆಗೆ ಅವರ ನಾಲ್ಕು ಪುಸ್ತಕಗಳು ಪ್ರಕಟವಾಗಿದ್ದು, ಮೂರು ಇಂಗ್ಲಿಷ್ ಮತ್ತು‌ ಒಂದು ಹಿಂದಿ ಭಾಷೆಯಲ್ಲಿ ಪ್ರಕಟಗೊಂಡಿವೆ. ಅವರ ಮೊದಲ ಪುಸ್ತಕ “Echoes of Soulful Poems”ಎರಡನೇ ಪುಸ್ತಕ “World Amidst the Words” ಮೂರನೇ ಹಿಂದಿ ಸಾಹಿತ್ಯ ಕೃತಿ “Lafzon Ki Mehphil” ನಾಲ್ಕನೇ ಪುಸ್ತಕ “Galore of Mysteries” .

ಅವರ ಅನೇಕ ಲೇಖನಗಳು ಮತ್ತು ಕಥೆಗಳು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಹಾಗೂ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆಗೆ ಅವರು ವಿದ್ಯಾಭ್ಯಾಸದಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ.

ಅಮನ ಅವರ ಸಾಧನೆಗಳು:

  • India Book of Records ನಿಂದ “ಭಾರತದ ಅತಿ ಕಿರಿಯ ಕವಯಿತ್ರಿ” ಎಂಬ ಗೌರವ.
  • Asia Book of Records ನಿಂದ “ಗ್ರ್ಯಾಂಡ್ ಮಾಸ್ಟರ್” ಪ್ರಶಸ್ತಿ.
  • Kautilya Youngest Poetess of the Year Award — ಗೋವಾ ರಾಜ್ಯಪಾಲರಿಂದ ಪ್ರದಾನ.
  • Noble Book of World Record ನಿಂದ “ಅತ್ಯಂತ ಹೆಚ್ಚು ಕವನಗಳನ್ನು ರಚಿಸಿದ ಕವಯಿತ್ರಿ” ಎಂಬ ಗೌರವ (ಏಪ್ರಿಲ್ 2020ರಿಂದ ನವೆಂಬರ್ 2021ರವರೆಗೆ 337 ಕವನಗಳು).
  • World Record University ನಿಂದ “ಅತಿ ಕಿರಿಯ ಕವಯಿತ್ರಿ” ಪ್ರಶಸ್ತಿ.
  • International Book of World Record ನಿಂದ “ಅತಿ ಕಿರಿಯ ಕವಯಿತ್ರಿ” ಎಂಬ ಮಾನ್ಯತೆ.
  • Wonder Book of World Record ನಿಂದ “ಅತಿ ಕಿರಿಯ ಲೇಖಕಿ” ಗೌರವ.
  • Golden Book of World Records ನಿಂದ ಸತತ ವರ್ಷಗಳಲ್ಲಿ ಕವನ ಸಂಕಲನಗಳನ್ನು ಪ್ರಕಟಿಸಿದ ಅತಿ ಕಿರಿಯ ಕವಯಿತ್ರಿ ಎಂಬ ಗೌರವ ಪಡೆದಿರುತ್ತಾರೆ.

‍ಲೇಖಕರು Admin

27 May, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading