ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೆನ್ನಲ್ಲಿ ತುಟಿಯಿಂದ ಬರೆವ ಹೈಕುಗಳು..

ಶಮ ನಂದಿಬೆಟ್ಟ 

ಸಂತೆಯ ನಡುವೆ ನಿಂತಿದ್ದರೂ
ಏಕಾಂತಕ್ಕೆ ಕರೆವ ದನಿ
ಎಲ್ಲರ ದಾಟಿ ನನ್ನನ್ನೇ ಸವರಿದೆ

ಬೆಚ್ಚಿ ತಿರುಗಿ ನೋಡಿದರೆ
ನಗುವಿನ ಇನ್ನೊಂದು ಮಗ್ಗುಲಲ್ಲಿ
flower lipsಕಂಡೂ ಕಾಣದಂತೆ
ಪೊರೆಕಳಚಿದ ತುಂಟತನ
ನನಗಾಗೇ ಎತ್ತಿಟ್ಟ ಹೊಸ ಹಸಿ
ಬಯಕೆಗಳ ನಿಗಿನಿಗಿ ಚೂರುಗಳ
ರಾಶಿಯ ಮೇಲೆ ನೀನು

ತಂಪು ಕಣ್ಣುಗಳ ಅಂಚಿನಲ್ಲಿ
ಸುಳಿವೇ ಕೊಡದಂತೆ ಚಿಮ್ಮುವ
ಸುಳಿ ಮಿಂಚಿನ ಝಲಕುಗಳು
ಬೆನ್ನಲ್ಲಿ ತುಟಿಯಿಂದ ಬರೆವ
ಹೈಕುಗಳು, ಗಝಲ್ ಶಾಯರಿಗಳಿಗೆ
ಚಿತ್ತಾಗಿ ಕತ್ತೆತ್ತಿ ನೋಡುವ
ಜೊಂಪೆ ರೋಮಗಳೆಡೆಯಲ್ಲಿ
ಗ್ರೀಕ್ ಶಿಲ್ಪದ ಅಜಾನುಬಾಹು

ಕಟಿಯಂಚಿನಲ್ಲಿ ಕೆಳಗಿಳಿಯಲು
ಮತ್ತಿನಂತೆ ಸಾಲುಗಟ್ಟಿ ಕಾದು
ಕುಳಿತಿರುವ ಬೆವರ ಹನಿಗಳು

ನಿನ್ನ ಗಡಸು ಗಂಡಸುತನಕ್ಕೂ
ನನ್ನ ತನುಗಂಧದ ನೆಪದಿ
ನಿಯಮ ಮೀರುವ ಮೋಹ
ಈಗಲೋ ಆಗಲೋ ಚಿಮ್ಮಲು
ಸಜ್ಜಾಗಿ ನಿನ್ನ ಅಪ್ಪಣೆಗೋ
ನನ್ನ ನಾಲಿಗೆಯ ಒಸಗೆಗೋ
ಕಾತರಿಸುವ ತನುರಸ

ಅಷ್ಟೂ ಕಾತರವ ಕಟ್ಟಿಟ್ಟಂಥ
ತಾಳ್ಮೆಯ ಸುಳ್ಳೇ ಸೋಗು ಸಾಕಿನ್ನು
ಊರ ದೇವಸ್ಥಾನದ ಪೂಜಾರಿ
ಪೂಜೆಗೆ ಪ್ರಶಸ್ತ ಘಳಿಗೆ ನೋಡಲು
ಪಂಚಾಂಗ ಹುಡುಕುತ್ತಿದ್ದಾರಂತೆ !!!

‍ಲೇಖಕರು Admin

10 August, 2016

5 Comments

  1. Sangeeta Kalmane

    ಎಲ್ಲರ ದಾಟಿ ನನ್ನನ್ನೇ ಸವರಿದೆ. ಹ.. ಹ.. ಹ.. ಸೊಗಸಾಗಿದೆ ಕವನ.

  2. Anonymous

    ಪ್ರೊ. ಬಸವರಾಜ ಪುರಾಣಿಕ

    “ಶಮಾ ಹರ್‍ ರಂಗ್ ಮೆ ಜಲ್ತೀ ಹೈ ಸಹರ ಹೋನೇ ತಕ್”
    -ಮಿರ್ಝಾ ಗಾಲಿಬ್

    ಶಮ ನಂದಿಬೆಟ್ಟ ಹೈಕುಗಳು ಹರ್ ರಂಗ್ ಮೆ ಮುಳಿಗೆದ್ದು ಕಾಮನಬಿಲ್ಲು ಸೃಷ್ಟಿಸಿವೆ.
    keep it up.
    you may safely indulge in translating urdu poems especially of Parveen Sakir.

    • Shama, Nandibetta

      ಪುರಾಣಿಕ್ ಸರ್, ನಿಮ್ಮ ವಾತ್ಸಲ್ಯಕ್ಕೆ ವಂದೇ.

      ಪರ್ವೀನ್ ಸಾಕಿರ್ ಅವರನ್ನು ಓದುವುದಕ್ಕಾಗೇ ಉರ್ದು ಕಲಿಯುತ್ತೇನೆ. ನಿಮ್ಮ ಕೈ ನನ್ನ ತಲೆಯ ಮೇಲಿರಲಿ

  3. Shama, Nandibetta

    ಸಂಗೀತಾ, thanks

  4. Bharathi Hegade

    chendada kavana shama

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading