ಆಕೃತಿಯಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ರಸಪ್ರಶ್ನೆಗಳಿಗೆ ಉತ್ತರಿಸಿ ಬಹುಮಾನ ಪಡೆಯುವ ಅವಕಾಶವಿತ್ತು.
8 ಪ್ರಶ್ನೆಗಳ ಎರಡು ಗುಂಪಿನ ರಸಪ್ರಶ್ನೆಗಳಿದ್ದವು.
ಮೊದಲನೇ ಗುಂಪು ಹೀಗಿತ್ತು..
1. ಎಚ್ ನರಸಿಂಹಯ್ಯನವರ ಆತ್ಮಕತೆ ________________
2. “ಮೇಲೆ ನೋಡೆ ಕಣ್ಣ ತಣಿಪ.. ನೀಲ ಪಟದಿ ವಿವಿಧ ರೂಪ” ಬರೆದ ಕವಿ ______________________
3. “ಕನ್ನಡ ಚಿತ್ರಶಿಲ್ಪಿ ಪುಟ್ಟಣ್ಣ ಕಣಗಾಲ್” ಪುಸ್ತಕ ಬರೆದದ್ದು – ಅ) ತ್ರಿವೇಣಿ ಆ) ಎಂ. ಕೆ. ಇಂದಿರಾ ಇ) ಸಾಯಿಸುತೆ
4. ರಾಮಕೃಷ್ಣ ಅಭಿನಯದ ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಆಧಾರಿತ ಚಲಚಿತ್ರ ಇದು ______________
5. ಪಂಜೆಮಂಗೇಶರಾಯರ ಕಾವ್ಯನಾಮ ____________________
6. ಬೇಲೂರು ಯಾವ ನದಿ ದಡದಲ್ಲಿದೆ? _______________
7. ಕರ್ನಾಟಕದ ಅತ್ಯ೦ತ ಎತ್ತರದ ಶಿಖರ ಯಾವುದು? ______________________
8. “ಕಬ್ಬಿಗರ ಕಾವ್ಯ” ಬರೆದವರು ______________
ಇದಕ್ಕೆ ಉತ್ತರಗಳು ಕೆಳಕಂಡಂತಿವೆ..
೧. ಹೋರಾಟದ ಹಾದಿ
೨. ಡಿ. ವಿ. ಜಿ
೩, ಎಂ. ಕೆ. ಇಂದಿರಾ
೪. ಅಬಚೂರಿನ ಪೋಸ್ಟಾಫೀಸು
೫. ಕವಿಶಿಷ್ಯ
೬. ಯಗಚಿ (ಯಗಚಿ ಹೇಮಾವತಿಯ ಉಪನದಿಯಾದ್ದರಿಂದ ಹೇಮಾವತಿ ಎಂಬ ಉತ್ತರವೂ ಸರಿ ಎಂದು ಪರಿಗಣಿಸಲಾಗಿದೆ)
೭. ಮುಳ್ಳಯ್ಯನ ಗಿರಿ
೮. ಅಂಡಯ್ಯ
13 ಜನರು ಈ ಗುಂಪಿನ ರಸಪ್ರಶ್ನೆಗೆ ಉತ್ತರಿಸದರು.
5 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಮೂರು ಜನ) ಜಿ ಕಲ್ಲೇಶ್ವರಪ್ಪ, ಜಗದೀಶ್ ಕೆ ಎಸ್, ಜೆ ಸಿ ಭಾರವಿ
3 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಒಬ್ಬರು)
2 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಏಳು ಜನ)
1 ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದವು — (ಇಬ್ಬರು)
ಎರಡನೇ ಗುಂಪಿನ ಪ್ರಶ್ನೆಗಳು.
1. “ನಾ ಕಂಡ ಪುಟ್ಟಣ್ಣ ಕಣಗಾಲ್” ಪುಸ್ತಕದ ಕರ್ತೃ ________________
2. “ವಿಗಡ ವಿಕ್ರಮರಾಯ” ಇವರ ನಾಟಕ ____________________
3. ಬೀchi ಅವರ ಆತ್ಮಕಥೆ ____________________
4. ‘ಹೆಣ್ಣು ಹೆಣ್ಣೆ೦ದೇತಕೆ ಬೀಳುಗಳೆವರು?’ ಎ೦ದ ವಚನಗಾರ್ತಿ ಯಾರು? ____________
5. ’ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕದ ಮುಖಪುಟಕ್ಕೆ ಚಿತ್ರ ಬಿಡಿಸಿದ ಕಲಾವಿದ ______________
6. ೨೦೧೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಕೃತಿ ___________________
7. “ನಾಗರ ಹಾವೇ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ!” ಬರೆದ ಕವಿ _____________________
8. ಪೊರ್ಚುಗೀಸರ ವಿರುದ್ಧ ಹೋರಾಡಿದ ಕರಾವಳಿಯ ರಾಣಿ ಯಾರು? ______________
ಇದಕ್ಕೆ ಉತ್ತರಗಳಿ ಕೆಳಕಂಡಂತಿವೆ..
೧. ಡಿ. ಬಿ. ಬಸವೇಗೌಡ
೨. ಸಂಸ
೩. ನನ್ನ ಭಯಾಗ್ರಫಿ
೪. ಸಂಚಿ ಹೊನ್ನಮ್ಮ
೫. ಕೆ.ಕೆ.ಹೆಬ್ಬಾರ್
೬. ಪಾಪು ಗಾಂಧಿ, ಬಾಪು ಗಾಂಧಿ ಆದ ಕತೆ
೭. ಪಂಜೆ ಮಂಗೇಶ ರಾಯರು
೮. ರಾಣಿ ಅಬ್ಬಕ್ಕ
11 ಜನರು ಈ ಗುಂಪಿನ ರಸಪ್ರಶ್ನೆಗೆ ಉತ್ತರಿಸದರು.
5 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಒಬ್ಬರು) ಡಾ| ಎಚ್ ವಿ ವೇಣುಗೋಪಾಲ್
3 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಒಬ್ಬರು)
2 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರು — (ಇಬ್ಬರು)
1 ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದವು — (ಆರು ಜನ)
ಯಾವುದೇ ಪ್ರಶ್ನೆಗೆ ಉತ್ತರಿಸದವರು — (ಒಬ್ಬರು)
೧೩ ನವೆಂಬರ್ ನ ಜಯಶಾಲಿಗಳು
ಜಿ ಕಲ್ಲೇಶ್ವರಪ್ಪ, ಜಗದೀಶ್ ಕೆ ಎಸ್, ಜೆ ಸಿ ಭಾರವಿ, ಡಾ| ಎಚ್ ವಿ ವೇಣುಗೋಪಾಲ್
ಇವರಿಗೆ ಆಕೃತಿ ವತಿಯಿಂದ ತಲಾ ೨೫೦ ರೂಗಳ ಗಿಫ್ಟ್ ಕೂಪನ್‌ಗಳನ್ನು ಕೊರಿಯರ್ ಮೂಲಕ ಕಳುಹಿಸಲಾಗುತ್ತದೆ.
ಆಕೃತಿ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು! ಎಲ್ಲಾ ವಿಜೇತರಿಗೆ ಅಭಿನಂದನೆಗಳು. ನೀವೂ ಭಾಗವಹಿಸಿ!






0 Comments