ಯಮುನಾ ಗಾಂವ್ಕರ್
ಬೆಂಕಿ ಬಿದ್ದಿದೆ
ಬೆವರು ಸಾಕಾಗದು ನಂದಿಸಲು …
ಉರಿ ಹೊತ್ತುತ್ತಲೇ ಇದೆ
ಬತ್ತಿಹೋದ ನದಿಯಲ್ಲೂ
ಒತ್ತರಿಸಿ ಬಿದ್ದಿರುವ ತರಗೆಲೆಗಳಿಗೆಲ್ಲ…
ಸುಳಿಸುಳಿಯುತ್ತ ಎತ್ತಿ ಎಸೆಯುತ್ತಿದೆ
ಎತ್ತೆತ್ತಲೋ ತೂರುತ್ತಿದೆ
ತಡೆವವರಾರು ಕಾಡ್ಗಿಚ್ಚಿನ ಜ್ವಾಲೆ?

ಬೆಂದವರ ಅರೆಬೆಂದವರ
ದಿಕ್ಕೆಟ್ಟವರ ಕೊಸರು ಕೇಳುತ್ತಿಲ್ಲ
-ಗಾಳಿ ಘರ್ಜನೆಯಲ್ಲಿ-
ನರಳಲು ಉಸಿರೇ ಸಾಲುತ್ತಿಲ್ಲ!
ಭೂಮ್ಯಾಕಾಶದ ತುಂಬಾ
ಹೊಗೆಯಾಡುತ್ತಿದೆ
ಇತ್ತ ಬೆಂಕಿಯುಗುಳುತ್ತ
ಹಗೆಯ ಕೊಂಡೊಯ್ದ ಬೀಸುಗಾಳಿ
ಮರಳಿ ಅಪ್ಪಳಿಸಿದೆ
ಬಿರುಗಾಳಿಯಾಗಿ…






ಮನ ಕಲಕುವ ಸಾಲುಗಳು