
ಕೆ ಪುಟ್ಟಸ್ವಾಮಿ
ನನ್ನ ಮಿತ್ರರೂ ಮತ್ತು ಹಿಂದೆ ಸಹೋದ್ಯೋಗಿಯಾಗಿದ್ದ ಭಾಸ್ಕರ್ ನರಸಿಂಹಯ್ಯ ಅವರು ಫೇಸ್ ಬುಕ್ ನಲ್ಲಿ ಈ ರೀತಿ ಕೇಳಿದರು -“ಈಗ ರೈಲಿನಲ್ಲಿ ಒಬ್ಬ ವಿಜ್ಞಾನಿ ಮಿತ್ರರು ಒಂದು ಪ್ರಶ್ನೆ ಕೇಳಿದರು; “ಬುದ್ಧಿ ಜೀವಿಗಳು ಎಂದರೆ ಸಾಹಿತ್ಯ ಓದುವ, ಬರೆಯುವವರು ಮಾತ್ರವೆ” ಎಂದು, ನೀವೇನು ಹೇಳ್ತೀರಿ?”
ಇದಕ್ಕೆ ನಿರೀಕ್ಷಿಸಿದಂತೆ ಬುದ್ಧಿಜೀವಿಗಳನ್ನು ಹೀಯಾಳಿಸಿ ಸುಮಾರು ಪ್ರತಿಕ್ರಿಯೆಗಳು ಬಂದಿವೆ.
ಆಗ ನನಗೆ ಮೇಷ್ಟ್ರು ಡಾ. ಎಚ್ ಎಸ್ ರಾಘವೇಂದ್ರರಾವ್ ಅವರ “ಶೇಕಡ ಏಳರ ಖಳರು” ಲೇಖನ ನೆನಪಾಯಿತು. ಅದನ್ನು ಮತ್ತೆ ಓದುತ್ತಾ ಅವರ ಲೇಖನದಲ್ಲಿರುವ ಅಡಿ ಟಿಪ್ಪಣಿಯನ್ನು ನೀಡುತ್ತಿದ್ದೇನೆ.
“ಇದು ಅಡಿಗರ ಕವಿಯೊಂದರ ಸಾಲು. ವ್ಯವಸ್ಥೆಯ ಹುನ್ನಾರಗಳನ್ನು ಅರ್ಥ ಮಾಡಿಕೊಂಡು, ಅದರ ವಿರುದ್ಧ ನಿಲ್ಲುವ ಸಾಮರ್ಥ್ಯ ಮತ್ತು ನೈತಿಕ ಪ್ರಾಮಾಣಿಕತೆಯನ್ನು ಪಡೆದಿರುವ ಬುದ್ಧಿಜೀವಿಗಳನ್ನು ಅವರು ’ಶೇಕಡಾ ಏಳರ ಖಳರು’ ಎಂದು ಕರೆದರು. ’ಖಳರು’ ಎಂಬ ಮಾತಿನ ವ್ಯಂಗ್ಯವೇ ವಾಸ್ತವವಾಗಿಬಿಟ್ಟಿರುವ ಕಾಲದಲ್ಲಿ ನಾವು ಇದ್ದೇವೆಯೇ???”
ವ್ಯವಸ್ಥೆಯ ಅಮಾನವೀಯತೆಯನ್ನು ಪ್ರಶ್ನಿಸುವ , ಸತ್ಯವನ್ನು ಹೇಳಲು ಹಿಂಜರಿಯದ ಅಲ್ಪಸಂಖ್ಯಾತರು ಬಹುಸಂಖ್ಯಾತರ ಕಣ್ಣಿಗೆ ಖಳರಾಗಿ ಕಂಡರೆ ಸಹಜ. ಸತ್ಯವನ್ನು ಹೇಳಿದ ಸಾಕ್ರೆಟಿಸ್ ಕೊನೆಗೂ ವಿಷಕುಡಿದ ಪರಂಪರೆಯೊಂದಿದೆಯಲ್ಲವೇ?





ನನ್ನ ವಿಜ್ಞಾನಿ ಮಿತ್ರರ ಕುತೂಹಲವೇನು ಅಂದರೆ, ಕೇವಲ ಸಾಹಿತ್ಯವಲಯಕ್ಕೆ ಮಾತ್ರ ‘ಬುದ್ಧಿಜೀವಿ’ ಎಂಬ ಲೇಬಲ್ ಅಂಟಿಕೊಂಡಿದೆ ಏಕೆ? ಎಂದು ಕೇಳಿದರು. ಅದಕ್ಕೆ ನಾನು “ನನಗೂ ಅರ್ಥವಾಗಿಲ್ಲ , ಒಂದು ಪ್ರಶ್ನೆ ಹಾಕೋಣ ತಾಳಿ ಎಂದು ನಾನು ಪ್ರಶ್ನೆ ಕೇಳಿದ್ದು !
ಪುಟ್ಟಸ್ವಾಮಿಯವರೆ ನೀವು ಹೇಳಿರುವಂತೆ ಆ ಶೇಕಡ ಏಳರಲ್ಲಿ ಇತರರೂ ಇದ್ದಾರೆಯೆ?
ಈಗ ನಿಮ್ಮ ಸರದಿ, ನೀವಾದರೂ ಸಮರ್ಪಕವಾದ ಉತ್ತರ ನೀಡಿ
ಬಂದ ಪ್ರತಿಕ್ರಿಯೆಗಳು ಬುದ್ಧಿಜೀವಿಗಳ ಧೋರಣೆ, ನಿಲುವುಗಳ ಬಗ್ಗೆ, ಇವೆ: ಅಸಲಿಗೆ ಬುದ್ಧಿಜೀವಿಗಳು ಯಾರು ಯಾರು ಎಂಬುದು ಇನ್ನೂ ಉತ್ತರಿಸದ ಪ್ರಶ್ನೆ ಯಾಗಿದೆ; ದಯಮಾಡಿ ಉತ್ತರಿಸಿ.
ನಿಜಕ್ಕೂ ಮೆಚ್ಚುವಂಥದ್ದು ಪುಟ್ಟಸ್ವಾಮಿಯವರೆ
‘ಬುದ್ಧಿ-ಜೀವಿ’ ಎಂಬ ಉಪಮೇಯ-ಉಪಮಾನ ಮಿಳಿತು ಒಂದು ಸುಂದರ ರೂಪಕವಾಗಿ ಸಾಹಿತಿಗಳ ತಲೆಗೆ ಅಂಟಿಕೊಂಡಿರುವುದು ಸ್ವಾರಸ್ಯವಾಗಿದೆ.
‘ಬುದ್ಧಿ-ಜೀವಿ’ ಎಂಬುದು ಬಹುತೇಕ ಶ್ರದ್ಧೆಯಿಂದ ಮಂತ್ರ ಪಠಿಸುವವರೇ ದ್ರಷ್ಟಾರರೆಂಬಂತೆ, ಅದು ಒಂದು ಅನುರೂಪವಾದ ರೂಪಕವಾಗದೆ ಇಂಗ್ಲಿಷ್ ನ ಸಿಮಿಲಿ(SIMILE) ಯಾಗಿರುವುದೇ ಇಲ್ಲಿರುವ ಸ್ವಾರಸ್ಯ.
ನೀವೇ ಹೇಳಿರುವಂತೆ ಕಾಲದ ವಿವಿಧ ಘಟ್ಟಗಳಲ್ಲಿ ಜಗತ್ತಿನ ಚಿಂತನಾಕ್ರಮಕ್ಕೆ ಕಾಲಕಾಲಕ್ಕೆ ಹೊಸದಾರಿ ತೋರಿದ, ಜೀವನ ದೃಷ್ಟಿಯನ್ನು ವಿಸ್ತರಿಸಿದ, ಹೊಸ ಚಿಂತನೆಗೆ ಹಚ್ಚಿದ, ನಮಗರಿವಿಲ್ಲದ ಭೌತಿಕ, ಅಭೌತಿಕ, ಪಾರಮಾರ್ಥಿಕ ಪ್ರಪಂಚವನ್ನು ನಮ್ಮ ಮುಂದೆ ಧುತ್ತನೆ ಅನಾವರಣ ಮಾಡಿ ನಮ್ಮನ್ನು ಚಕಿತಗೊಳಿಸಿದ ಐನ್ಸ್ಟೀನ್, ಮ್ಯಾಕ್ಸ್ ಪ್ಲಾಂಕ್, ಕಾರ್ಲ್ ಮಾರ್ಕ್ಸ್, ಗೆಲಿಲಿಯೋ, ಬರ್ಟ್ರೆಂಡ್ ರಸೆಲ್, ಸಿಂಗ್ಮಂಡ್ ಫ್ರಾಯ್ಡ್, ಚಾರ್ಲ್ಸ್ ಡಾರ್ವಿನ್, ಗಾಂಧಿ, ಅಂಬೇಡ್ಕರ್ ಲೋಹಿಯಾ, ಶೇಕ್ಸ್ಪಿಯರ್, ಟಾಲ್ಸ್ ಟಾಯ್, ಸಾರ್ತರ್, ನೋಮ್ ಚೋಮ್ಸ್ಕಿ, ವಿವೇಕಾನಂದ, ಅರಬಿಂದೋ, ಕುವೆಂಪು, ಕಾರಂತ ಹಾಗೂ ಇಂದಿನ ದೀಪಕ್ ಚೋಪ್ರ, ಡಾ.ಬಿ.ಎಮ್. ಹೆಗಡೆ ಮುಂತಾದವರೆಲ್ಲರ ಕಾರ್ಯಕ್ಷೇತ್ರಗಳಿಗೆ ಹೋಲಿಸಿದರೆ, ನೀವು ಅಭಿಪ್ರಾಯ ಪಟ್ಟಿರುವಂತೆ ಸಾಹಿತಿಗಳ ಸಂಖ್ಯೆ ತೀರ ಕಡಿಮೆ ಎಂದೇ ಹೇಳಬಹುದು.
ಬದುಕಿನ ಎಲ್ಲ ಸ್ತರಗಳಿಂದ ಹರಿದು ಬರುವ ಈ ವಿಚಾರಗಳನ್ನು ತಮ್ಮವೆಂಬಂತೆ ಮಾತನಾಡುವ ಕೆಲವೇ ಕೆಲವರಿಂದ ಈ ಭಾವ ಜನರಲ್ಲಿ ಮೂಡಿದೆ; ಅವರನ್ನು ನೀವು ‘ಹುಸಿಬುದ್ಧಿಜೀವಿ’ ಗಳೆಂದು ಕರೆದಿದ್ದೀರಿ !
ವಸ್ತು ನಿಷ್ಠವಾಗಿ ವಿಷಯವನ್ನು ವಿಶ್ಲೇಷಿಸಿ ವಿವರಿಸಿದ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದ.