ಡೈಲಿ ಬುಕ್: ಕುಪ್ಪೆ ನಾಗರಾಜರವರ 'ಅಲೆಮಾರಿಯ ಅಂತರಂಗ'

ಕುಪ್ಪೆ ನಾಗರಾಜ

ಕಪ್ಪು ಮೋಡಗಳು ಕರಗಿ ಭೂಮಿಗಿಳಿದ ದಿಕ್ಕಿನತ್ತ ಹಾರುವ ವಲಸೆ ಹಕ್ಕಿಗಳಂತೆ ಬದುಕು ಹುಡುಕಿ ಊರುಕೇರಿಗಳತ್ತ ಚದುರಿ ಹೋಗುವ ಅಲೆಮಾರಿ ಜನಾಂಗ. ಅವರ ಆಚಾರ, ವಿಚಾರ, ಒಡನಾಟ, ನಂಬಿಕೆ, ಮೂಢನಂಬಿಕೆಗಳೆಲ್ಲ ಶ್ರೀಕುಪ್ಪೆ ನಾಗರಾಜ ಅವರ ಆತ್ಮಕಥೆಯ ಕವಚದಲ್ಲಿ ಅನಾವರಣಗೊಂಡಿರುವುದು ವಿಶೇಷ. ಸಮುದಾಯವನ್ನು ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಪ್ರಯತ್ನ, ಬದಲಾವಣೆಯನ್ನು ಒಪ್ಪಿಕೊಳ್ಳಲಾಗದೆ ಗೊಂದಲಕ್ಕೆ ಸಿಕ್ಕಿಬೀಳುವ ಸಂಸ್ಕೃತಿ, ಅವರ ಅಸಹಾಯಕತೆ, ಸಂಕಷ್ಟ-ಸವಾಲುಗಳೆಲ್ಲ ಸಹಜ ನಿರೂಪಣೆಯಿಂದ ಓದುಗನ ಮನ ಕಲಕುತ್ತವೆ. ಅಧ್ಯಯನದ ಹಿಡಿತಕ್ಕೆ ಎಂದೂ ಸುಲಭವಾಗಿ ತೆರೆದುಕೊಳ್ಳದ ಅಲೆಮಾರಿಗಳ ಬದುಕಿನ ಒಳನೋಟ ಸಮಾಜ ವಿಜ್ಞಾನಿಗಳಿಗೆ ಉಚಿತ ಉಡುಗೊರೆಯಾಗಬಹುದು. ಇದಲ್ಲದೆ ‘ಮೀಸಲಾತಿ ಏಕೆ ಬೇಕು?’ ಎಂದು ನಗರದ ಬೀದಿಗಳಲ್ಲಿ ನಿಂತು ಚರ್ಚಿಸುವ ವರ್ಗಕ್ಕೆ ಈ ಕೃತಿಯ ಅಂತರಾಳ ಉತ್ತರವಾಗಬಹುದು.

-ಕೃಪಾಕರ ಸೇನಾನಿ

ಶ್ರೀ ಕುಪ್ಪೆ ನಾಗರಾಜ ಸಮಾಜದ ಅಲಕ್ಷಿತ ಸಮುದಾಯದ ಕುಟುಂಬವೊಮದರಿಂದ ಬಂದವರು. ಸ್ವ-ಸಾಮರ್ಥ್ಯದಿಂದ ಆಶ್ರಮ ಶಾಲೆಯಲ್ಲಿ ಕಲಿತು ವಿದ್ಯಾಭ್ಯಾಸ ಮಾಡಿದವರು. ವಿದ್ಯಾರ್ಥಿ ದೆಸೆಯಿಂದಲೇ ದಲಿತ ಮತ್ತು ಪ್ರತಿಪರ ಚಳುವಳಿಯಲ್ಲಿ ಭಾಗಿ. ಇದೀಗ ಕರ್ನಾಟಕ ಖಜಾನೆ ಇಲಾಖೆಯಲ್ಲಿ ಪತ್ರಾಂಕಿತ ಉಪಖಜಾನಾಧಿಕಾರಿ. ಅಲಕ್ಷಿತ ಅಲೆಮಾರಿ ಸಮುದಾಯವನ್ನು ಸಂಘಟಿಸುವಲ್ಲಿ ಸಕ್ರಿಯ ಪಾತ್ರ. ಅಲೆಮಾರಿ ಸಿರಿ, ಸುವರ್ಣ ಕನ್ನಡಿಗ, ಬೋಧಿವರ್ಧನ ಇವರಿಗೆ ದೊರೆತ ಪ್ರಶಸ್ತಿಗಳು.
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001
ದೂರವಾಣಿ : 080-30578020/22 ಫ್ಯಾಕ್ಸ್ : 080-30578023
ಇಮೇಲ್ : [email protected]
ಬೆಲೆ : ರೂ. 125
 


‍ಲೇಖಕರು avadhi

June 4, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: